ಬೆಂಗಳೂರು : ದಿನೇ ದಿನೇ ಬಿಸಿಲ ತಾಪ ಹೆಚ್ಚುತ್ತಲೇ ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಮೇ 15 ರಂದು 47 ಡಿಗ್ರಿ ತಾಪಮಾನ ದಾಖಲಾಗಿತ್ತು. ಬಿಸಿಗಾಳಿ ಸಹಿತ ಬಿಸಿಲಿನ ಝಳದಿಂದ ಜನ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗಲಿದೆ. ದುಬಾರಿಯಾಗಿರುವ ಕಾರಣ, ಎಷ್ಟೋ ಮಂದಿಗೆ ಎಸಿ ಕೊಳ್ಳುವುದು ಸಾಧ್ಯವಾಗುವುದಿಲ್ಲ. ಎಸಿ ಬಿಟ್ಟರೆ ಉಳಿದಿರುವ ಆಯ್ಕೆ ಎಂದರೆ ಕೂಲರ್ . ಇದೀಗ ಎಸಿಯಂತೆಯೇ ಗೋಡೆಯಲ್ಲಿ  ಅಳವಡಿಸಬಹುದಾದ ಕೂಲರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಕಡಿಮೆ ವಿದ್ಯುತ್ತನ್ನು ಬಳಸುವುದು ಈ ಕೂಲರ್ ನ ಮತ್ತೊಂದು ವಿಶೇಷತೆ. Symphony ಇತ್ತೀಚೆಗೆ ಈ ಹೊಸ ಕೂಲರ್ ಅನ್ನು ಪರಿಚಯಿಸಿದೆ. 


COMMERCIAL BREAK
SCROLL TO CONTINUE READING

ರಿಮೋಟ್ ಮೂಲಕ ಆಪರೇಟ್ ಮಾಡಬಹುದು : 
ಸಿಂಫನಿ ಕ್ಲೌಡ್ ನೋಡಲು ಸ್ಪ್ಲಿಟ್ ಎಸಿ ಯಂತೆ ಕಾಣಿಸುತ್ತದೆ. ರಿಮೋಟ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲ ಈ ಕೂಲರ್ ಗೆ ಮತ್ತೆ ಮತ್ತೆ ನೀರು ಹಾಕುವ ಅಗತ್ಯವಿಲ್ಲ. 


ಇದನ್ನೂ ಓದಿ : OTT ವೇದಿಕೆಗಳ ಚಂದಾದಾರಿಕೆಯ ಮೇಲೆ ಬಂಪರ್ ರಿಯಾಯ್ತಿ ಸಿಗುತ್ತಿದೆ, ತ್ವರೆ ಮಾಡಿ ಲಾಭ ನಿಮ್ಮದಾಗಿಸಿಕೊಳ್ಳಿ


ರಿಮೋಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ : 
ಸಿಂಫನಿ ಕ್ಲೌಡ್ ಪರ್ಸನಲ್ ಕೂಲರ್ ಸಾಮರ್ಥ್ಯವು 15 ಲೀಟರ್ ಆಗಿದೆ. ಇದು 15 ಲೀಟರ್ ನೀರಿನ ಟ್ಯಾಂಕ್ ಹೊಂದಿದೆ. ಇದು ಸುಮಾರು 2000 ಚದರ ಅಡಿ ಪ್ರದೇಶದವರೆಗೆ ತಂಪಾಗಿರಿಸುತ್ತದೆ. ಇದುತ್ರಿ ಸೈಡ್ ಕೂಲಿಂಗ್ ಪ್ಯಾಡ್ ನೊಂದಿಗೆ ಬರುತ್ತದೆ. ಬಿರು ಬೇಸಿಗೆ ಸಮಯದಲ್ಲೂ ಈ ಕೂಲರ್ ಮನೆಯನ್ನು ತಂಪಾಗಿರಿಸುತ್ತದೆ. ತೇವಾಂಶವನ್ನು ತೆಗೆದುಹಾಕಲು, Dehumidifying ವ್ಯವಸ್ಥೆಯನ್ನು ಇದರಲ್ಲಿ ನೀಡಲಾಗಿದೆ. ಇದು ರಿಮೋಟ್ ಮೂಲಕ ಕೆಲಸ ಮಾಡುತ್ತದೆ. 


ಸಿಂಫನಿ ಕ್ಲೌಡ್ ಪರ್ಸನಲ್ ಕೂಲರ್ ಬೆಲೆ : 
ರಿಮೋಟ್‌ನೊಂದಿಗೆ ಸಿಂಫನಿ ಕ್ಲೌಡ್ ಪರ್ಸನಲ್ ಕೂಲರ್‌ನ ಆರಂಭಿಕ ಬೆಲೆ  14,999 ರೂಪಾಯಿ  ಆಗಿದೆ. ಆದರೆ, ಇದನ್ನು ಫ್ಲಿಪ್‌ಕಾರ್ಟ್‌ ಮೂಲಕ ಇದನ್ನು  11,899 ರೂ.ಗೆ ಖರೀದಿಸಬಹುದು. ಅಂದರೆ ಕೂಲರ್ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಲ್ದೆ ಈ ಕೂಲರ್‌ ಖರೀದಿ ಮೇಲೆ ಬ್ಯಾಂಕ್ ಆಫರ್ ಕೂಡ ಇದೆ. ಇದರಿಂದಾಗಿ ಕೂಲರ್‌ನ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದಲ್ಲದೇ EMI ಆಯ್ಕೆಯೂ ಲಭ್ಯವಿದೆ. ಕೂಲರ್ ಅನ್ನು ಇಎಂಐ ಮೂಲಕ ತಿಂಗಳಿಗೆ ಸಾವಿರ ರೂಪಾಯಿಗಿಂತ ಕಡಿಮೆ ಬೆಲೆ ಪಾವತಿಸುವ ಮೂಲಕ ಮನೆಗೆ ತರಬಹುದು. 


ಇದನ್ನೂ ಓದಿ : Vivo Y53s 5G Offer on Amazon : 23 ಸಾವಿರ ಬೆಲೆಯ ಈ ಫೋನ್ ಅನ್ನು ಕೇವಲ 3 ಸಾವಿಯ ರೂ.ಗಳಿಗೆ ಖರೀದಿಸಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್