ಡೀಸೆಲ್ ಗಿಡದ ಬಗ್ಗೆ ನಿಮಗೆ ಗೊತ್ತಾ? ತಿಳಿದುಕೊಳ್ಳಿ ವಾಹನಕ್ಕೆ ಇಂಧನ ತುಂಬಲು ಪಂಪ್ ಗೆ ಹೊಗುವ ಕೆಲಸ ತಪ್ಪುತ್ತೆ!
Diesel Plant Business Idea: ಪೆಟ್ರೋಲ್-ಡೀಸೆಲ್ ಬೆಲೆಯಿಂದ ನೀವೂ ಕಂಗೆಟ್ಟು ಹೋಗಿದ್ದು ಮತ್ತು ಅದಕ್ಕೆ ಪರ್ಯಾಯ ಮಾರ್ಗದ ಹುಡುಕಾಟದಲ್ಲಿದ್ದರೆ, ಡೀಸೆಲ್ ಗಿಡ ನಿಮಗೆ ಸಹಾಯ ಮಾಡಲಿದೆ. ಇದರಿಂದ ನಿಮ್ಮ ಇಂಧನ ಸಮಸ್ಯೆಯೂ ನಿವಾರಣೆಯಾಗುತ್ತೆ ಮತ್ತು ಕೈತುಂಬಾ ಹಣವನ್ನು ಕೂಡ ನೀವು ಸಂಪಾದಿಸಬಹುದು. (Business News In Kannada)
ನವದೆಹಲಿ: ಡೀಸೆಲ್ ಪ್ಲಾಂಟ್ ವ್ಯಾಪಾರ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದು. ಇದರಿಂದ ನೀವು ನಿಮ್ಮ ಇಂಧನ ಅಗತ್ಯಗಳನ್ನು ಸಹ ನೀವು ಪೂರೈಸಬಹುದು. ನೀವು ಕೃಷಿಗೆ ಸಂಬಂಧಿಸಿದ ವ್ಯವಹಾರ ಕಲ್ಪನೆಯನ್ನು ಹುಡುಕುತ್ತಿದ್ದರೆ, ಇದು ನಿಮಗೆ ಒಂದು ಉತ್ತಮವಾದ ವ್ಯಾಪಾರ ಪರಿಕಲ್ಪಎಯಾಗಿದೆ. ರೈತರೂ ಈಗ ಸಾಮಾನ್ಯ ಬೆಳೆಗಳಿಗಿಂತ ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಹೆಚ್ಚು ಹಣ ಗಳಿಸುವ ಅವಕಾಶ ಸಿಗುತ್ತಿದೆ. ಸಾಮಾನ್ಯವಾಗಿ ಡೀಸೆಲ್ ಪ್ಲಾಂಟ್ ಎಂದು ಕರೆಯಲ್ಪಡುವ ಜತ್ರೋಫಾ ಅಥವಾ ರತನ್ಜೋತ ಸಸ್ಯವನ್ನು ಜೈವಿಕ ಡೀಸೆಲ್ ತಯಾರಿಕೆಗೆ ಬಳಸಲಾಗುತ್ತದೆ. ಇದನ್ನು ಕನ್ನಡದಲ್ಲಿ ಪರಂಗಿ ಗಿಡ ಎಂದೂ ಕೂಡ ಕರೆಯಲಾಗುತ್ತದೆ (Business News In Kannada)
ಬಂಜರು ಭೂಮಿಯಲ್ಲಿಯೂ ಇದನ್ನು ಬೆಳೆಸಬಹುದು. ಇದರ ಬೇಸಾಯಕ್ಕೆ ಯಾವುದೇ ವಿಶೇಷ ಋತುವಿನ ಅವಶ್ಯಕತೆ ಇಲ್ಲ. ನೀವು ಯಾವುದೇ ಋತುವಿನಲ್ಲಿ ಡೀಸೆಲ್ ಗಿಡಗಳನ್ನು ಬೆಳೆಯಬಹುದು. ಇದಕ್ಕೆ ಕಡಿಮೆ ಕೂಲಿಯೂ ಬೇಕಾಗಿದ್ದು, ಪ್ರತಿ ವರ್ಷ ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಇದಕ್ಕೆ ಕೇವಲ 4-6 ತಿಂಗಳವರೆಗೆ ಆರೈಕೆಯ ಅಗತ್ಯ ಬೀಳುತ್ತದೆ. ಈ ಸಸ್ಯಕ್ಕೆ ಹೆಚ್ಚು ನೀರು ಅಥವಾ ಹೊಲವನ್ನು ಉಳುಮೆ ಮಾಡುವ ಅಗತ್ಯವಿಲ್ಲ. ಒಮ್ಮೆ ಸಿದ್ಧವಾದರೆ, ಈ ಸಸ್ಯದಿಂದ 5 ವರ್ಷಗಳವರೆಗೆ ಬೀಜಗಳನ್ನು ತೆಗೆದುಕೊಳ್ಳಬಹುದು.
ಕಾರು ಓಡಿಸಿ, ವಿದ್ಯುತ್ ಉತ್ಪಾದಿಸಿ
ಜಟ್ರೋಫಾ ಒಂದು ಪೊದೆಯಂತಹ ಸಸ್ಯವಾಗಿದೆ. ಇದರಿಂದ ಸಿಗುವ ಬೀಜಗಳನ್ನು ಜೈವಿಕ ಡೀಸೆಲ್ ತಯಾರಿಸಲು ಉಪಯೋಗಿಸುತ್ತಾರೆ. ಶೇ.25-30 ರಷ್ಟು ಡೀಸೆಲ್ ಅನ್ನು ಬೀಜಗಳಿಂದ ಹೊರತೆಗೆಯಬಹುದು. ಈ ಡೀಸೆಲ್‌ನಿಂದ ವಾಹನಗಳನ್ನು ಓಡಿಸಬಹುದು. ಉಳಿದ ಭಾಗವನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದರ ಗಿಡಗಳನ್ನು ನೇರವಾಗಿ ಹೊಲಗಳಲ್ಲಿ ನೆಡುವುದಿಲ್ಲ. ಇದನ್ನು ನರ್ಸರಿಯಲ್ಲಿ ಬೆಳೆಸಲಾಗುತ್ತದೆ ಮತ್ತು ನಂತರ ಅಲ್ಲಿಂದ ಹೊಲಕ್ಕೆ ಕೊಂಡೊಯ್ಯಲಾಗುತ್ತದೆ. ಈ ಸಸ್ಯದಿಂದ ಬೀಜಗಳನ್ನು ಬೇರ್ಪಡಿಸುವ ಮೂಲಕ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. ಎಣ್ಣೆಯನ್ನು ಹೊರತೆಗೆಯುವ ಪ್ರಕ್ರಿಯೆಯು ಸಾಸಿವೆಯಿಂದ ಎಣ್ಣೆಯನ್ನು ಹೊರತೆಗೆಯುವಂತೆಯೇ ಇರುತ್ತದೆ. ಆದಾಗ್ಯೂ, ಜೈವಿಕ ಡೀಸೆಲ್ ಮಾಡಲು, ಕಚ್ಚಾ ತೈಲವನ್ನು ನಂತರ ಟ್ರಾನ್ಸ್‌ಸೆಸ್ಟರಿಫಿಕೇಶನ್ ಪ್ರಕ್ರಿಯೆಯ ಮೂಲಕ ಹೊರತೆಗೆಯಲಾಗುತ್ತದೆ. ಇದರ ನಂತರವೇ ನೀವು ವಾಹನದಲ್ಲಿ ಜೈವಿಕ ಡೀಸೆಲ್ ಅನ್ನು ಬಳಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ-ನಿಮ್ಮ 1000 ರೂ.ಗಳನ್ನು ಈ ಫಾರ್ಮ್ಯೂಲಾ ಬಳಸಿ ರಾಕೆಟ್ ವೇಗದಲ್ಲಿ 5.32 ಲಕ್ಷ ರೂ.ಗಳಾಗಿಸಿ!
ಗಳಿಕೆ
ಡೀಸೆಲ್ ಸಸ್ಯದ ಬೀಜಗಳಿಗೆ ವಿಶ್ವಾದ್ಯಂತ ಭಾರಿ ಬೇಡಿಕೆಯಿದೆ. ಭಾರತ ಸರ್ಕಾರವೂ ಇದನ್ನು ಖರೀದಿಸುತ್ತದೆ. ಪ್ರತಿ ಕೆಜಿಗೆ 12 ರೂಪಾಯಿ ದರದಲ್ಲಿ ಸರ್ಕಾರ ಬೀಜಗಳನ್ನು ಖರೀದಿಸುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ 1800 ರಿಂದ 2500 ರೂ.ವರೆಗೆ ಮಾರಾಟ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಿದರೆ ಉತ್ತಮ ಆದಾಯ ಇದರಿಂದ ಗಳಿಸಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ