Best 7 Seater Car: ಜಪಾನ್‌ನ ವಾಹನ ತಯಾರಕ ಟೊಯೊಟಾ ಕಿರ್ಲೋಸ್ಕರ್ ಕಾರಿನ ಮಾರಾಟವು ಮೇ 2023 ರಲ್ಲಿ ಪ್ರಭಾವಶಾಲಿಯಾಗಿದೆ. ಈ ಕಂಪನಿಯು ಕಳೆದ ತಿಂಗಳು 19,379 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷ 10,216 ಯುನಿಟ್‌ಗಳಿಗೆ ಹೋಲಿಸಿದರೆ 89.6 ಶೇಕಡಾ ವಾರ್ಷಿಕ ಬೆಳವಣಿಗೆಯಾಗಿದೆ. ಕಂಪನಿಯ 7 ಸೀಟರ್ ಕಾರು ಮಾರಾಟದಲ್ಲಿ 184 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ. ಮೇ ತಿಂಗಳಲ್ಲಿ ಮಾರಾಟವಾದ ಟೊಯೋಟಾ ಕಾರುಗಳ ಪಟ್ಟಿಯನ್ನು ತಿಳಿಯೋಣ:


COMMERCIAL BREAK
SCROLL TO CONTINUE READING

ಇನ್ನೋವಾ ಕ್ರಿಸ್ಟಾ/ಹೈಕ್ರಾಸ್


ಟೊಯೊಟಾ ಈಗ ಇನ್ನೋವಾವನ್ನು ಕ್ರಿಸ್ಟಾ ಮತ್ತು ಹೈಕ್ರಾಸ್ ಎಂಬ ಎರಡು ಹೊಸ ರೂಪಾಂತರಗಳಲ್ಲಿ ಮಾರಾಟ ಮಾಡುತ್ತದೆ. ಕಳೆದ ತಿಂಗಳಲ್ಲಿ ಈ ಕಾರುಗಳ 7,776 ಯುನಿಟ್‌ಗಳು ಮಾರಾಟವಾಗಿವೆ. ಒಂದು ವರ್ಷದ ಹಿಂದೆ ಮೇ ತಿಂಗಳಲ್ಲಿ ಕೇವಲ 2,737 ಯುನಿಟ್‌ಗಳು ಮಾರಾಟವಾಗಿದ್ದವು. ಅಂದರೆ ಇನ್ನೋವಾ ಮಾರಾಟದಲ್ಲಿ ಶೇ.184ರಷ್ಟು ಜಿಗಿತ ಕಂಡುಬಂದಿದೆ. Innova Crysta ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಆದರೆ HyCross ಪೆಟ್ರೋಲ್ ಮತ್ತು ಪೆಟ್ರೋಲ್ + ಹೈಬ್ರಿಡ್ ಪವರ್‌ಟ್ರೇನ್‌ಗಳಲ್ಲಿ ಮಾತ್ರ ಬರುತ್ತದೆ. ಇನ್ನೋವಾ ಕ್ರಿಸ್ಟಾ ಬೆಲೆ ರೂ 19.99 ಲಕ್ಷದಿಂದ ಪ್ರಾರಂಭವಾಗಿ ರೂ 25.43 ಲಕ್ಷದ ವರೆಗೆ ಇದೆ. ಇನ್ನೋವಾ ಹೈಕ್ರಾಸ್ ಬೆಲೆ ರೂ 18.55 ಲಕ್ಷದಿಂದ ಪ್ರಾರಂಭವಾಗಿ ರೂ 29.99 ಲಕ್ಷದ ವರೆಗೆ ಇದೆ.


ಇದನ್ನೂ ಓದಿ: Wagonr CNG ಅನ್ನು ಕೇವಲ 80 ಸಾವಿರಕ್ಕೆ ಮನೆಗೆ ತನ್ನಿ


ಟೊಯೋಟಾ ಗ್ಲಾನ್ಜಾ


ಟೊಯೊಟಾ ಗ್ಲಾನ್ಜಾ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಆಗಿದ್ದು, ಅದು ಎರಡನೇ ಸ್ಥಾನದಲ್ಲಿದೆ. ಇದು ಕಳೆದ ತಿಂಗಳಲ್ಲಿ 5,179 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, ಮೇ 2022 ರಲ್ಲಿ ಕೇವಲ 2,952 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಗ್ಲಾನ್ಜಾ ಮಾರಾಟದಲ್ಲಿ ಶೇ.75ರಷ್ಟು ಏರಿಕೆ ಕಂಡು ಬಂದಿದೆ.


ಟೊಯೊಟಾ ಹೈರೈಡರ್ 


ಟೊಯೊಟಾ ಹೈರೈಡರ್ ಕಂಪನಿಯ ಮಧ್ಯಮ ಗಾತ್ರದ ಎಸ್‌ಯುವಿಯಾಗಿದ್ದು, ಇದು ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಆಧರಿಸಿದೆ. ಮೇ ತಿಂಗಳಲ್ಲಿ ಇದರ ಮಾರಾಟ 3,090 ಯುನಿಟ್‌ಗಳಾಗಿದೆ. ಇದರ ನಂತರ ನಾಲ್ಕನೇ ಸ್ಥಾನದಲ್ಲಿ ಫಾರ್ಚುನರ್ ಮತ್ತು ಐದನೇ ಸ್ಥಾನದಲ್ಲಿ ಹಿಲಕ್ಸ್ ಇವೆ. 


ಇದನ್ನೂ ಓದಿ: Hero ಧಮಾಕಾ! 160 ಸಿಸಿ ಸ್ಟೈಲಿಶ್ ಬೈಕ್ ಬಿಡುಗಡೆ ಮಾಡಿದ ಹೀರೋ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.