ಬೆಂಗಳೂರು : ಅನೇಕ ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿ ನಡೆಸುತ್ತದೆ. ಈ ಯೋಜನೆಗಳ ಮೂಲಕ ಜನರು ತಮ್ಮ ಹಣವನ್ನು ಸುರಕ್ಷಿತ ರೀತಿಯಲ್ಲಿ ಠೇವಣಿ ಮಾಡಿ, ಉತ್ತಮ ಆದಾಯವನ್ನು ಗಳಿಸಬಹುದು. ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾದ ಮಾಸಿಕ ಆದಾಯ ಯೋಜನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ಕಾಣಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಹಣದಿಂದ 5 ವರ್ಷಗಳಲ್ಲಿ ದುಪ್ಪಟ್ಟು ಲಾಭ ಗಳಿಸುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಮಾಸಿಕ ಆದಾಯ ಯೋಜನೆ (MIS ) : 
ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಅಡಿಯಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಒಂದು ಜನಪ್ರಿಯ ಯೋಜನೆ ಮಾಸಿಕ ಆದಾಯ ಯೋಜನೆಯಾಗಿದೆ. ಇದನ್ನು MIS ಖಾತೆ ಎಂದೂ ಕರೆಯುತ್ತಾರೆ. ಈ ಯೋಜನೆಯ ಹೆಸರೇ ಹೇಳುವಂತೆ ಒಟ್ಟು ಮೊತ್ತವನ್ನು ಮಾಸಿಕ ಆದಾಯ ಯೋಜನೆ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಹೂಡಿಕೆದಾರರು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಬಡ್ಡಿಯಾಗಿ ಪಡೆಯುತ್ತಾರೆ.


ಇದನ್ನೂ ಓದಿ : ಬಿಸಿನೆಸ್ ಐಡಿಯಾ: 20,000 ರೂಪಾಯಿಗೆ ಶುರು ಮಾಡಿ ಈ ವ್ಯಾಪಾರ.. ಲಕ್ಷಾಂತರ ಆದಾಯ ಗ್ಯಾರೆಂಟಿ!


ಈ ಯೋಜನೆಯ ಅವಧಿ 5 ವರ್ಷಗಳು. 5 ವರ್ಷಗಳ ನಂತರ ಮೂಲ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಮಾರ್ಚ್ 31 ರಂದು, ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿತು. ಆ ಸಂದರ್ಭದಲ್ಲಿ MIS ಯೋಜನೆಯ  ಬಡ್ಡಿಯನ್ನು 7.4 ಪ್ರತಿಶತಕ್ಕೆ ಏರಿಸಲಾಯಿತು. ಮೊದಲು ಈ ಯೋಜನೆಯಲ್ಲಿನ ಹೂಡಿಕೆ ಮೇಲೆ  ಶೇ.7.1ರಷ್ಟು ಬಡ್ಡಿ ನೀಡಲಾಗುತ್ತಿತ್ತು.


ಮುಂದಿನ ಐದು ವರ್ಷಗಳವರೆಗೆ ಬಡ್ಡಿ ದರಗಳು ಬದಲಾಗುವುದಿಲ್ಲ : 
ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯ ವಿಶೇಷತೆಯೆಂದರೆ ನಿಮ್ಮ ಹೂಡಿಕೆಯ ಸಮಯದಲ್ಲಿ ಚಾಲ್ತಿಯಲ್ಲಿರುವ ಬಡ್ಡಿದರವು ಮುಂದಿನ ಐದು ವರ್ಷಗಳವರೆಗೆ ಅನ್ವಯಿಸುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ. ಯೋಜನೆಯ ಅವಧಿಯ ಐದು ವರ್ಷಗಳಲ್ಲಿ ಬಡ್ಡಿದರದಲ್ಲಿನ ಯಾವುದೇ ಬದಲಾವಣೆಯು ಹೂಡಿಕೆದಾರರ ಮೇಲೆ ಪರಿಣಾಮ ಬೀರುವುದಿಲ್ಲ.


ಇದನ್ನೂ ಓದಿ : ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಹೊಸ ನಿಯಮ ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ !


5 ವರ್ಷಗಳಲ್ಲಿ ಕೇವಲ ಬಡ್ಡಿಯಿಂದಲೇ 1.84 ಲಕ್ಷ ರೂ :
ಪೋಸ್ಟ್ ಆಫೀಸ್ ಎಂಐಎಸ್ ಕ್ಯಾಲ್ಕುಲೇಟರ್ ಪ್ರಕಾರ, ಹೂಡಿಕೆದಾರರು ಈ ಯೋಜನೆಯಲ್ಲಿ  5 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 3,083 ರೂಪಾಯಿ ಬಡ್ಡಿಯನ್ನು ಪಡೆಯುತ್ತಾರೆ. ಈ ಮೊತ್ತವನ್ನು ಮುಂದಿನ ಐದು ವರ್ಷಗಳವರೆಗೆ ಪ್ರತಿ ತಿಂಗಳು ನೀಡಲಾಗುವುದು. ಈ ಐದು ವರ್ಷಗಳಲ್ಲಿ ಖಾತೆದಾರರು ಬಡ್ಡಿಯಿಂದಲೇ ಒಟ್ಟು 1,84,980 ರೂಪಾಯಿಗಳನ್ನು  ಪಡೆಯುತ್ತಾರೆ.  ಐದು ವರ್ಷ ಪೂರ್ಣಗೊಂಡ ನಂತರ 5 ಲಕ್ಷವನ್ನು ಹಿಂತಿರುಗಿಸಲಾಗುತ್ತದೆ.


ಬಜೆಟ್ 2023 ರಲ್ಲಿ MIS ಯೋಜನೆಯಲ್ಲಿ ಬದಲಾವಣೆ :
ಬಜೆಟ್ 2023 ರಲ್ಲಿ ಪೋಸ್ಟ್ ಆಫೀಸ್ MISನಲ್ಲಿ ಮತ್ತೊಂದು ಬದಲಾವಣೆಯನ್ನು ಮಾಡಲಾಗಿದೆ. ಇದನ್ನು ಹಣಕಾಸು ಮಸೂದೆ 2023 ರಲ್ಲಿ ಸೇರಿಸಲಾಗಿದೆ. ಅದಕ್ಕೆ ಅನುಮೋದನೆಯೂ ಸಿಕ್ಕಿದೆ. ಈ ನಿಯಮವು ಏಪ್ರಿಲ್ 1, 2023 ರಿಂದ ಜಾರಿಗೆ ಬಂದಿದೆ.


ಇದನ್ನೂ ಓದಿ : ಪಿಂಚಣಿದಾರರೇ ನೆನಪಿಡಿ ! ನಿಮ್ಮ ಬಳಿ ಈ ನಂಬರ್ ಇಲ್ಲಾ ಎಂದಾದರೆ ನಿಂತು ಹೋಗುವುದು ಪೆನ್ಶನ್


ಎಂಐಎಸ್ ಯೋಜನೆ: ಎಷ್ಟು ಹೂಡಿಕೆ ಮಾಡಬಹುದು?
ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ಒಬ್ಬ ವ್ಯಕ್ತಿ 9 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಮೊದಲು ಈ ಮಿತಿ 4.5 ಲಕ್ಷ ರೂ.ಯಾಗಿತ್ತು.  ಜಂಟಿ ಖಾತೆದಾರರು 15 ಲಕ್ಷ ರೂ.ಗಳನ್ನೂ ಹೂಡಿಕೆ  ಮಾಡಬಹುದು.  


POMIS: ಕೆಲವು ಪ್ರಮುಖ ನಿಯಮಗಳು : 
- MIS ನಲ್ಲಿ, ಎರಡು ಅಥವಾ ಮೂರು ಜನರು ಜಂಟಿ ಖಾತೆಯನ್ನು ತೆರೆಯಬಹುದು. ಈ ಖಾತೆಯ ಗಳಿಕೆಯನ್ನು ಪ್ರತಿ ಸದಸ್ಯರಿಗೆ ಸಮಾನವಾಗಿ ವಿತರಿಸಲಾಗುತ್ತದೆ.
- ಜಂಟಿ ಖಾತೆಯನ್ನು ಯಾವುದೇ ಸಮಯದಲ್ಲಿ ಒಂದೇ ಖಾತೆಗೆ ಪರಿವರ್ತಿಸಬಹುದು. ಒಂದೇ ಖಾತೆಯನ್ನು ಜಂಟಿ ಖಾತೆಯಾಗಿ ಪರಿವರ್ತಿಸಬಹುದು. ಖಾತೆ ಬದಲಾವಣೆಗಳನ್ನು ಮಾಡಲು, ಎಲ್ಲಾ ಖಾತೆ ಸದಸ್ಯರು ಅರ್ಜಿಯನ್ನು ಸಲ್ಲಿಸಬೇಕು.
-ಎಂಐಎಸ್ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು.
- ಮೆಚ್ಯೂರಿಟಿ ಅವಧಿಯು ಮುಗಿದ ನಂತರ ಅಂದರೆ ಐದು ವರ್ಷಗಳ ನಂತರ ಅದನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. MIS ಖಾತೆಯಲ್ಲಿ ನಾಮಿನಿ ಆಯ್ಕೆಯ ಸೌಲಭ್ಯ ಲಭ್ಯವಿದೆ.