ನವದೆಹಲಿ: 2022 ರ ಮೇ ತಿಂಗಳು ಬ್ಯಾಂಕ್ ನೌಕರರಿಗೆ ಒಂದು ರೀತಿ ರಜೆಯ ಮಜಾ ನೀಡಿದೆ ಎಂದು ಹೇಳಬಹುದು. ಏಕೆಂದರೆ ಈ ತಿಂಗಳ ಅವಧಿಯಲ್ಲಿ ಬರೋಬ್ಬರಿ 11 ದಿನಗಳ ಕಾಲ ರಜೆ ದಿನಗಳನ್ನು ನೌಕರರು ಅನುಭವಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಮೇ ತಿಂಗಳಲ್ಲಿ, ಹಾಲಿಡೇ ಅಂಡರ್ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಒಟ್ಟು ನಾಲ್ಕು ರಜೆಗಳಿದ್ದರೆ, ಉಳಿದ ಏಳು ವಾರಾಂತ್ಯದ ರಜೆಗಳಾಗಿವೆ. ಬ್ಯಾಂಕ್ ಗ್ರಾಹಕರು ಇನ್ನೂ ಬ್ಯಾಂಕ್ ರಜಾದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು.


ಇದನ್ನೂ ಓದಿ: 'ಗಂಗಾವತಿ-ದರೋಜಿ ರೈಲ್ವೇ ಮಾರ್ಗದ ಸರ್ವೇ ಕಾರ್ಯ ಶೀಘ್ರ ಪ್ರಾರಂಭ'


ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಅನ್ವಯ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಭಾರತದಲ್ಲಿನ ಪ್ರಾದೇಶಿಕ ಬ್ಯಾಂಕ್‌ಗಳು ನಿರ್ದಿಷ್ಟ ದಿನಾಂಕದಂದು ಮುಚ್ಚಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.ಭಾರತದ ವಿವಿಧ ರಾಜ್ಯಗಳಿಗೆ ಬ್ಯಾಂಕ್ ರಜಾದಿನಗಳು ವಿಭಿನ್ನವಾಗಿವೆ, ಆದಾಗ್ಯೂ, ಭಾರತದಾದ್ಯಂತ ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15), ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್ಮಸ್ ದಿನ (ಡಿಸೆಂಬರ್ 25), ದಂದು ಸಾಮಾನ್ಯವಾಗಿ ಮುಚ್ಚಲ್ಪಡುತ್ತವೆ.ಕಾಂಗ್ರೆಸ್ ‘ಯಯಾತಿ’ಗಳ ಅಧಿಕಾರದ ಮೋಹ ಕಳಚುವುದೇ?: ಬಿಜೆಪಿ ಪ್ರಶ್ನೆ


ಮೇ 2022 ರ ಉಳಿದ ದಿನಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ


ಮೇ 22, 2022: ಭಾನುವಾರ


ಮೇ 28, 2022: ಶನಿವಾರ


ಮೇ 29, 2022: ಭಾನುವಾರ


ನೀವು ಯಾವುದೇ ಮಹತ್ವದ ಬ್ಯಾಂಕ್-ಸಂಬಂಧಿತ ಕೆಲಸವನ್ನು ಹೊಂದಿದ್ದರೆ, ಈ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ನೀವು ಅದನ್ನು ಪೂರ್ಣಗೊಳಿಸಬೇಕು ಎಂದು ನಾವು ಸೂಚಿಸುತ್ತೇವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.