ಬೆಂಗಳೂರು : ಭಾರತದಲ್ಲಿ ಸೆಪ್ಟೆಂಬರ್‌ನಿಂದ ಹಬ್ಬಗಳ ಸೀಸನ್ ಆರಂಭವಾಗಿದೆ. ಹೀಗಿರುವಾಗ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಕೂಡಾ ಸಿಕ್ಕಿದೆ. ಹಬ್ಬ ಹರಿದಿನಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಜುಲೈ 2023 ರ ಡಿಎ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸಬಹುದು. ಇದರ ಹೊರತಾಗಿ ಉದ್ಯೋಗಿಗಳಿಗೆ ಮತ್ತೊಂದು ಸಿಹಿ ಸುದ್ದಿಯಿದೆ. 


COMMERCIAL BREAK
SCROLL TO CONTINUE READING

7ನೇ ವೇತನ ಆಯೋಗ:  ಭತ್ಯೆ ಹೆಚ್ಚಿಸಿವೆ ಹಲವು ರಾಜ್ಯಗಳು : 
ಕರ್ನಾಟಕ, ಮಧ್ಯಪ್ರದೇಶ, ಸಿಕ್ಕಿಂ, ಒಡಿಶಾ,  ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಇತ್ತೀಚೆಗೆ ತಮ್ಮ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ ಎಂಬುದು ಗಮನಾರ್ಹ. ಹೆಚ್ಚಿನ ರಾಜ್ಯಗಳಲ್ಲಿ, ಉದ್ಯೋಗಿಗಳು ಈಗ 38 ಪ್ರತಿಶತದ ಬದಲಿಗೆ 42 ಪ್ರತಿಶತ ತುಟ್ಟಿಭತ್ಯೆ  ಪಡೆಯುತ್ತಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರವು 2023ರ ಜನವರಿಯ   ತುಟ್ಟಿಭತ್ಯೆ ಹೆಚ್ಚಳವನ್ನು ಮಾರ್ಚ್‌ನಲ್ಲಿ ಘೋಷಿಸಿತ್ತು.


ಇದನ್ನೂ ಓದಿ : ಪಾತಾಳಕ್ಕೆ ಇಳಿಯುತ್ತಿದೆ ಚಿನ್ನದ ಬೆಲೆ ! ಇನ್ನು ಭಾರ ಅಲ್ಲ ಬಂಗಾರ


ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ನಡುವೆ, ಕೇಂದ್ರ ಸರ್ಕಾರವು ಜುಲೈ 2023 ರ ತುಟ್ಟಿಭತ್ಯೆ  ಹೆಚ್ಚಳವನ್ನು ಘೋಷಿಸಬಹುದು ಎಂದು ನಂಬಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ಡಿಎ ಹೆಚ್ಚಳವಾಗಲಿದೆ ಎಂದು ಮೂಲಗಳು ಹೇಳುತ್ತಿವೆ. ಆದರೂ ಮತ್ತೊಂದು ಮೂಲದ ಪ್ರಕಾರ, ಜನವರಿ 2023 ರಿಂದ ಜೂನ್ 2023 ರವರೆಗೆ, AICPI ಸೂಚ್ಯಂಕವನ್ನು ಆಧರಿಸಿ, ಡಿಎ ಹೆಚ್ಚಳ ಪ್ರತಿಶತದಷ್ಟು ಆಗಲಿದೆ ಎನ್ನಲಾಗಿದೆ. ಮಾರ್ಚ್‌ನಲ್ಲಿ ನೌಕರರ ಭತ್ಯೆಗಳನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದ್ದು, ತುಟ್ಟಿಭತ್ಯೆ ಈಗ 42 ಪ್ರತಿಶತಕ್ಕೆ ಏರಿದೆ.  


ಶೇ.4ರಷ್ಟು ಬೆಲೆ ಹೆಚ್ಚಾದರೆ  ಎಷ್ಟು ಹೆಚ್ಚಾಗುತ್ತದೆ ವೇತನ ?
ಕನಿಷ್ಠ ಮೂಲ ವೇತನ ರೂ 18,000 ಮೇಲೆ ಡಿಎ ಹೆಚ್ಚಳವಾದರೆ : 
ನೌಕರರ ಮೂಲ ವೇತನ - ತಿಂಗಳಿಗೆ 18,000 ರೂ
ಹೊಸ ತುಟ್ಟಿಭತ್ಯೆ  (46%) - ತಿಂಗಳಿಗೆ ರೂ 8280
ಹಿಂದಿನ ತುಟ್ಟಿಭತ್ಯೆ  (42%) - ರೂ. 7560
ತುಟ್ಟಿಭತ್ಯೆ ಹೆಚ್ಚಳ - 8280-7560 = ರೂ. 720
ವಾರ್ಷಿಕ ವೇತನ ಹೆಚ್ಚಳ 720X12 = ರೂ.8640


ಇದನ್ನೂ ಓದಿ : Stock Market: ಮಾರುಕಟ್ಟೆ ಕುಸಿತದ ನಡುವೆಯೂ ರಾಕೆಟ್‍ನಂತೆ ಏರಿಕೆ ಕಂಡ ಈ ಷೇರು, ಕಾರಣವೇನು ಗೊತ್ತಾ?


56,900 ರೂ.ಗಳ ಗರಿಷ್ಠ ಮೂಲ ವೇತನದಲ್ಲಿ ಡಿಎ ಹೆಚ್ಚಳವಾದರೆ
ನೌಕರರ ಮೂಲ ವೇತನ = ತಿಂಗಳಿಗೆ 56,900 ರೂ
ಹೊಸ ತುಟ್ಟಿಭತ್ಯೆ  (46%) = ತಿಂಗಳಿಗೆ ರೂ 26,174
ಹಿಂದಿನ ತುಟ್ಟಿಭತ್ಯೆ (42%) = ರೂ. 23,898 
ತುಟ್ಟಿಭತ್ಯೆ ಹೆಚ್ಚಳ - 26,174-23,898 = ರೂ. 2,276 ತಿಂಗಳಿಂದ
ವರ್ಷಕ್ಕೆ ಹೆಚ್ಚಳ = 2276X12= ರೂ. 27,312


 ಬಾಕಿ ಡಿಎ :
ತುಟ್ಟಿಭತ್ಯೆ ಹೆಚ್ಚಳದ ಅಧಿಸೂಚನೆಯು ಅಕ್ಟೋಬರ್ ಮಧ್ಯದಲ್ಲಿ ಹೊರಬರುವ ನಿರೀಕ್ಷೆಯಿದೆ. ಆ ಸಂದರ್ಭದಲ್ಲಿ, ಜುಲೈ 2023 ರಿಂದ ತುಟ್ಟಿ ಭತ್ಯೆ ಹೆಚ್ಚಳವು ನೌಕರರು ಮತ್ತು ಪಿಂಚಣಿದಾರರಿಗೂ ಲಭ್ಯವಾಗುತ್ತದೆ. ಈ ಸಂದರ್ಭದಲ್ಲಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. 


ಇದನ್ನೂ ಓದಿ :  ಸರ್ಕಾರಿ ನೌಕರರ ವೇತನ ಅರ್ಧಕ್ಕರ್ಧ ಜಾಸ್ತಿ ! ಈ ತಿಂಗಳಿಂದ 8ನೇ ವೇತನ ಆಯೋಗದಂತೆ ಸ್ಯಾಲರಿ ?


50% DA ಹೆಚ್ಚಳ :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮತ್ತೊಂದು ಸಂತಸದ ಸುದ್ದಿಯಿದೆ. ಪ್ರಸ್ತುತ ಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿ 2024 ರ ಜನವರಿಯಲ್ಲಿ  ಮತ್ತೆ ಶೇಕಡಾ 4 ರಷ್ಟು ಡಿಎ ಹೆಚ್ಚಳವಾದರೆ, ಉದ್ಯೋಗಿಗಳ ಒಟ್ಟು ಭತ್ಯೆ ಶೇಕಡಾ 50 ಕ್ಕೆ ತಲುಪುತ್ತದೆ. ಆ ಸಂದರ್ಭದಲ್ಲಿ, ನಿಯಮಗಳ ಪ್ರಕಾರ,  ಡಿಎಯನ್ನು ಸೊನ್ನೆಗೆ ಇಳಿಸಲಾಗುತ್ತದೆ. ಅಲ್ಲದೆ,  50 ರಷ್ಟು ತುಟ್ಟಿಭತ್ಯೆಯನ್ನು ನೌಕರರ ಮೂಲ ವೇತನಕ್ಕೆ ಸೇರಿಸಲಾಗುವುದು. ಹೀಗಾದಾಗ  ವೇತನ ಪರಿಷ್ಕರಣೆಯಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.