Earn Money: ಕೊರೊನಾ ವೈರಸ್ (Coronavirus) ನ ಈ ಕೆಟ್ಟ ಪರಿಸ್ಥಿತಿಯಲ್ಲಿ ಕೆಲ ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದರೆ, ಇನ್ನುಳಿದವರ ಬಿಸಿನೆಸ್ ಸ್ಥಗಿತಗೊಂಡಿದೆ. ಹೀಗಿರುವಾಗ ಹಲವರ ಜೇಬು ಖಾಲಿಯಾಗಿದೆ. ಆದರೆ, ಕೊರೊನಾ ಇನ್ನೂ ನಿಂತಿಲ್ಲ ಮತ್ತು ಹಲವು ಜನರು ಇನ್ನೂ ಮನೆಯಲ್ಲಿಯೇ ಕುಳಿತು ಹಣಗಳಿಕೆಯ ಮಾರ್ಗ ಹುಡುಕುತ್ತಿದ್ದಾರೆ. ಒಂದು ವೇಳೆ ನಿಮ್ಮ ಬಳಿಯೂ ಕೂಡ ಪುರಾತನ ಕಾಲದ ಈ ನಾಣ್ಯವಿದ್ಧರೆ, ನಿಮ್ಮ ಅದೃಷ್ಟವೂ ಕೂಡ ಬದಲಾಗಲಿದೆ. ಈ ನಾಣ್ಯವನ್ನು ಮಾರಾಟ ಮಾಡಿ ನೀವೂ ಕೂಡ ಚಿಟಿಕೆ ಹೊಡೆಯೋದ್ರಲ್ಲಿ ಲಕ್ಶಾಧಿಪತಿಯಾಗಬಹುದು. ಹಾಗಾದರೆ, ಬನ್ನಿ ಈ ನಾಣ್ಯ ನಿಮ್ಮನ್ನು ಹೇಗೆ ಲಕ್ಷಾಧಿಪತಿಯನ್ನಾಗಿಸಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ (How To Earn Money From Home).


COMMERCIAL BREAK
SCROLL TO CONTINUE READING

ಹಳೆ ನಾಣ್ಯಗಳು ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯಲಿವೆ
ಹಲವರ ಮನೆಯಲ್ಲಿ ಪುರಾತನ ಕಾಲದ ನಾಣ್ಯಗಳಿರುತ್ತವೆ. ಹಲವರಿಗೆ ಈ ನಾಣ್ಯಗಳನ್ನು ಕೂಡಿ ಹಾಕುವ ಹವ್ಯಾಸ ಇರುತ್ತದೆ. ಆದರೆ, ಕೆಲವರು ನಿರ್ಲಕ್ಷವನ್ನು ಕೂಡ ತೋರುತ್ತಾರೆ. ಆದರೆ, ನಿಮ್ಮ ಬಳಿ 50 ಪೈಸೆಯ ಈ ಹಳೆ ನಾಣ್ಯವಿದ್ದರೆ ( 50 Paisa Coin), ಅವುಗಳನ್ನು ನೀವು ಮಾರಾಟ ಮಾಡಬಹುದು.  ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾದ ಅವಶ್ಯಕತೆ ಇಲ್ಲ. ಆನ್ಲೈನ್ ಪ್ಲಾಟ್ ಫಾರ್ಮ್ ಗಳು ನಿಮಗೆ ಈ ಅವಕಾಶ ಕಲ್ಪಿಸುತ್ತವೆ. ಇದಕ್ಕಾಗಿ ನಿಮ್ಮ ಬಳಿ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಇರಬೇಕಾದ ಅವಶ್ಯಕತೆ ಇದೆ.


ನಾವು ನಿಮಗೆ ಹೇಳುತ್ತಿರುವ ನಾಣ್ಯ 2011 ರಲ್ಲಿ ಮುದ್ರಿಸಲಾಗಿತ್ತು. ಒಂದು ವೇಳೆ ನಿಮ್ಮ ಬಳಿ ಈ ನಾಣ್ಯವಿದ್ದರೆ, ಎಲ್ಲಕ್ಕಿಂತ ಮೊದಲು ನೀವು OLX ಆಪ್ ಗೆ ಭೇಟಿ ನೀಡಬೇಕು. OLX ಒಂದು ಆನ್ಲೈನ್ ಮಾರ್ಕೆಟ್ ಪ್ಲಾಟ್ಫಾರ್ಮ್ (Online selling Platfrom) ಆಗಿದೆ. ಇಲ್ಲಿ ಜನರು ತಮ್ಮ ಹಳೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ ಇಲ್ಲವೇ ಎಕ್ಸ್ ಚೇಂಜ್ ಮಾಡುತ್ತಾರೆ.


ಇದನ್ನೂ ಓದಿ- Cheap Gold - ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಮತ್ತೆ ಸಿಗುತ್ತಿದೆ, ಇಲ್ಲಿದೆ ಡೀಟೇಲ್ಸ್


2011 ರಲ್ಲಿ RBI ಈ ನಾಣ್ಯಗಳ ಚಲಾವಣೆ ಸ್ಥಗಿತಗೊಳಿಸಿತ್ತು
ಹಾಗೆ ನೋಡಿದಲ್ಲಿ ಇತ್ತೀಚಿಗೆ OLX ವೇದಿಕೆಯ ಮೇಲೆ ಈ 50 ಪೈಸೆಗಾಗಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ವಿಶೇಷವಾಗಿ 2011ರಲ್ಲಿ ಮುದ್ರಿಸಲಾಗಿರುವ 50 ಪೈಸೆಯ ನಾಣ್ಯಕ್ಕೆ. ಇದನ್ನು ಪಡೆಯಲು ಜನ 1 ಲಕ್ಷ ರೂ.ಗಳ ವರೆಗೆ ಹಣ ನೀಡಲು ಸಿದ್ಧರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಭಾರತೀಯ ರಿಸರ್ವ್ ಬ್ಯಾಂಕ್ 2011 ರಲ್ಲಿ ಈ 50 ಪೈಸೆಯ ನಾಣ್ಯದ ಮುದ್ರಣ ಸ್ಥಗಿತಗೊಳಿಸಿತ್ತು. ಅಂದು ಸರ್ಕಾರ 25 ಪೈಸೆ ನಾಣ್ಯವನ್ನು ಚಲಾವಣೆಯಿಂದ ಹೊರಹಾಕಿತ್ತು. ಆದರೆ, ಇದೀಗ ಆ ನಾಣ್ಯದ ಮಾನ್ಯತೆ ಭಾರಿ ಹೆಚ್ಚಾಗ ತೊಡಗಿದೆ ಮತ್ತು ಪ್ರತಿಯೊಬ್ಬರಿಗೆ ಇದು ಹಣ ಗಳಿಕೆಯ ಒಂದು ಮಾರ್ಗವಾಗಿ ಮಾರ್ಪಟ್ಟಿದೆ.


ಇದನ್ನೂ ಓದಿ-SBI Alert! ಜುಲೈ 10 ಮತ್ತು 11 ರಂದು ಈ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ


ಆನ್ಲೈನ್ ನಲ್ಲಿ ಈ ರೀತಿ 50 ಪೈಸೆ ಮಾರಾಟ ಮಾಡಿ (How To Sell Coin Online)
>> ಎಲ್ಲಕ್ಕಿಂತ ಮೊದಲು OLX ಸೈಟ್ ನಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿ.
>> ಇದಾದ ಬಳಿಕ ನಿಮ್ಮ ಬಳಿ ಇರುವ 50 ಪೈಸೆ ನಾಣ್ಯದ ಫೋಟೋ ಕ್ಲಿಕ್ಕಿಸಿ.
>> ಫೋಟೋ ಕ್ಲಿಕ್ಕಿಸಿದ ಬಳಿಕ ಅದನ್ನು OLX ಮೇಲೆ ಅಪ್ಲೋಡ್ ಮಾಡಿ ಸೆಲ್ ಗಾಗಿ ಇಡಿ.
>> ನಂತರ ಅದರೊಂದಿಗೆ ನಿಮ್ಮ ಮಾಹಿತಿಯನ್ನು ಕೂಡ ನಮೂದಿಸಿ.
>> ಈಗ ನೀವು ಅಪ್ಲೋಡ್ ಮಾಡಿರುವ ನಾಣ್ಯದ ಬೇಡಿಕೆಗೆ ಅನುಗುಣವಾಗಿ, ಜನರ ಅವಶ್ಯಕತೆಯ ಮೇರೆಗೆ ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ನಾಣ್ಯದ ಕುರಿತು ನಿಮ್ಮೊಂದಿಗೆ ಗ್ರಾಹಕರು ಮಾತನಾಡುತ್ತಾರೆ. ಆಗ ನೀವು ಅವರಿಗೆ ನಿಮ್ಮ ನಾಣ್ಯದ ಬೆಲೆಯನ್ನು ಹೇಳಬಹುದು.


ಇದನ್ನೂ ಓದಿ-Business Opportunity: ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಧನ ಸಹಾಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.