PM Kisan: ದೇಶದ ರೈತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಪ್ರತಿ ರೈತರಿಗೆ ವಾರ್ಷಿಕವಾಗಿ   ₹ 6000 ಧನ ಸಹಾಯವನ್ನು ನೀಡುತ್ತದೆ. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇದುವರೆಗೂ ದೇಶದ 11 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿವೆ. ಸದ್ಯ  ದೇಶದ ರೈತರು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ಪಡೆಯಲು ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. 


COMMERCIAL BREAK
SCROLL TO CONTINUE READING

ನೀವು ಪಿಎಂ ಕಿಸಾನ್ ಯೋಜನೆಯ (PM Kisan Yojane) ಫಲಾನುಭವಿ ಆಗಿದ್ದು ಇನ್ನೂ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಕೂಡಲೇ ಈ ಕೆಲಸವನ್ನು ಪೂರ್ಣಗೊಳಿಸುವುದು ಅವಶ್ಯಕ. ಅಷ್ಟೇ ಅಲ್ಲ, ಪಿಎಂ ಕಿಸಾನ್ ಇ-ಕೆವೈಸಿ (PM Kisan e-KYC) ಪೂರ್ಣಗೊಳಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಅವಶ್ಯಕವಾಗಿದ್ದು, ಇವುಗಳನ್ನು ನಿರ್ಲಕ್ಷಿಸಿದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. 


ಪಿಎಂ ಕಿಸಾನ್:  ಇ-ಕೆವೈಸಿ ಮಾಡುವಾಗ ನೆನಪಿದಬೇಕಾದ ಅಂಶಗಳೆಂದರೆ: 
ಸಕ್ರಿಯ ಮೊಬೈಲ್ ಸಂಖ್ಯೆ: 

ಪಿಎಂ ಕಿಸಾನ್ ಫಲಾನುಭವಿಗಳು ಇ-ಕೆವೈಸಿ (PM Kisan Beneficiaries e-KYC) ಪೂರ್ಣಗೊಳಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ನಂಬರ್ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. 


ಇದನ್ನೂ ಓದಿ- ಎಟಿಎಂನಿಂದ ಹಣ ವಿತ್ ಡ್ರಾ ಅಷ್ಟೇ ಅಲ್ಲ, ಈ ಕೆಲಸಗಳಲ್ಲೂ ಮಾಡಬಹುದು


ಬಯೋಮೆಟ್ರಿಕ್ ಪರಿಶೀಲನೆ: 
ಇ-ಕೆವೈಸಿ ಪರಿಶೀಲನೆ ವೇಳೆ ಆಧಾರ್ ಒಟಿಪಿ ಪಡೆಯಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ಬಯೋಮೆಟ್ರಿಕ್ ಪರಿಶೀಲನೆ ಮಾಡಬಹುದು ಎಂಬುದನ್ನೂ ನೆನಪಿನಲ್ಲಿಡಿ. 


ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ: 
ಒಂದೊಮ್ಮೆ ಪಿಎಂ ಕಿಸಾನ್ ಪೋರ್ಟಲ್ (PM Kisan Portal) ನಲ್ಲಿ ಆನ್ಲೈನ್ ಮೂಲಕ ನಿಮ್ಮ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಹತ್ತಿರದ ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಿ. 


ಇದನ್ನೂ ಓದಿ- ಆರ್‌ಬಿಐ ಗವರ್ನರ್ ಮತ್ತು ಎಸ್‌ಬಿಐ ಮುಖ್ಯಸ್ಥ ಇವರಿಬ್ಬರಲ್ಲಿ ಹೆಚ್ಚು ವೇತನ ಯಾರಿಗೆ ? ಯಾರ ವಿದ್ಯಾರ್ಹತೆ ಎಷ್ಟು ? 


ಸ್ಥಿತಿ ಪರಿಶೀಲನೆ: 
ನೀವು ಇ-ಕೆವೈಸಿಯನ್ನು ಪೂರ್ಣಗೊಳಿಸಿದ ನಂತರ ಪಿಎಂ ಕಿಸಾನ್  ಪೋರ್ಟಲ್‌ನಲ್ಲಿ ನಿಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.