ನವದೆಹಲಿ : ರೈಲಿನಲ್ಲಿ ಪ್ರಯಾಣಿಸಲು, ಕನ್ಫರ್ಮ್ಮ ಟಿಕೆಟ್ ಸಿಗಬೇಕಾದರೆ ಬಹಳ ಬೇಗನೇ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಒಮ್ಮೊಮ್ಮೆ waiting list ಸಂಖ್ಯೆಯೇ ಬಹಳವಾಗಿರುತ್ತದೆ. ಹಾಗಿರುವಾಗ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆಗಲು ಬಹಳ ಕಡಿಮೆ ಇರುತ್ತದೆ, ಇನ್ನು ಕೆಲವೊಮ್ಮೆ ತತ್ಕಾಲ್ ನಲ್ಲಿಯೂ ಟಿಕೆ ಟ್ (Tatkal ticket) ಸಿಗುವುದಿಲ್ಲ.  ಈ ಸಂದರ್ಭದಲ್ಲಿ ಪ್ರಯಾಣ ಅಗತ್ಯವಾಗಿದ್ದರೆ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಹಾಗಿದ್ದರೆ ವೈಟಿಂಗ್ ಲಿಸ್ಟ್ ನಲ್ಲಿದ್ದ ಟಿಕೆಟ್ ಅನ್ನು ಕನ್ಫರ್ಮ್ ಮಾಡಿಸಿಕೊಳ್ಳುವ ಬಗೆ ಹೇಗೆ? ರೈಲ್ವೆ (Railway) ವಿಧಿಸಿರುವ ಕೆಲವೊಂದು ಕೋಟಾಗಳಡಿ ಟಿಕೆಟ್ ಕನ್ಫರ್ಮ್ ಮಾಡಬಹುದು. ರೈಲ್ವೆ ವಿಧಿಸಿರುವ ಕೋಟಾ ಮೂಲಕ ಟಿಕೆಟ್ ಖಚಿತಪಡಿಸಬಹುದು. ಆದರೆ ನೆನಪಿರಲಿ ಕೋಟಾದಡಿ ಟಿಕೆಟ್ ಬುಕ್ (Ticket booking) ಮಾಡುವಾಗ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.


ಇದನ್ನೂ ಓದಿ : Bank Holiday List July 2021: ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆ ಇರಲಿದೆ


ಆನ್‌ಲೈನ್ ಬುಕಿಂಗ್ (Online booking) ಅನ್ನು ಕೂಡಾ ಬೇರೆ ಬೇರೆ ಕೋಟಾ ಅಡಿಯಲ್ಲಿ ಮಾಡಬಹುದು. ರೈಲ್ವೆ ಕೆಲವು ವಿಭಾಗಗಳಲ್ಲಿ ಟಿಕೆಟ್‌ಗಳಿಗೆ ರಿಯಾಯಿತಿ ನೀಡಲಾಗುಯತ್ತದೆ. ಕ್ಯಾನ್ಸರ್ (cancer) ಅಥವಾ ಈ ರೀತಿಯ ಇತರ ಕಾಯಿಲೆಗಳಿಂದ ಬಳಲುವ ಪ್ರಯಾಣಿಕರಿಗೂ ಕೋಟಾದಡಿ ಟಿಕೆಟ್ ನೀಡಲಾಗುತ್ತದೆ. 


ಹಿರಿಯ ನಾಗರಿಕ ಕೋಟಾ :
60 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಪ್ರಯಾಣಿಕರಿಗೆ ಅಥವಾ 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಈ ಕೋಟಾದಡಿಯಲ್ಲಿ ಟಿಕೆಟ್ ನೀಡಲಾಗುತ್ತದೆ.  ಈ ಕೋಟಾಕ್ಕಾಗಿ, ಪ್ರಯಾಣಿಕನು ತನ್ನ ವಯಸ್ಸಿನ ಪ್ರಮಾಣ ಪತ್ರವನ್ನುನೀಡಬೇಕಾಗುತ್ತದೆ.


HQ:  ಹೈ ಅಫಿಶಿಯಲ್ ಅಥವಾ ಹೆಡ್ ಕ್ವಾರ್ಟ್ರ ರ್ ಕೋಟಾ : 
ರೈಲ್ವೆ ಅಧಿಕಾರಿಗಳು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮತ್ತು ಇತರ ವಿಐಪಿಗಳಿಗೆ ಈ ಕೋಟಾ ಅಡಿಯಲ್ಲಿ ಪ್ರಯಾಣಿಸಲು ಅವಕಾಶವಿದೆ. ಇಲ್ಲಿಯೂ ಕೂಡಾ ಸಂಬಂಧಿತ ಹುದ್ದೆಯಲ್ಲಿರುವುದಕ್ಕೆ ಪುರಾವೆ ನೀಡಬೇಕಾಗುತ್ತದೆ. ಈ ಕೋಟಾದಲ್ಲಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡಲಾಗುತ್ತದೆ,  


ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!


FT: ವಿದೇಶಿ ಪ್ರವಾಸಿ ಕೋಟಾ
ಈ ಕೋಟಾವನ್ನು ವಿದೇಶದಿಂದ ಬಂದ ಯಾತ್ರಿಗಳಿಗೆ ನೀಡಲಾಗುತ್ತದೆ.ಇದಕ್ಕಾಗಿ ಅವರ ದೇಶದ ಪಾಸ್‌ಪೋರ್ಟ್ (Passport), ವೀಸಾ ಮತ್ತು ಐಡಿ ಪ್ರೂಫ್ ನೀಡಬೇಕಾಗುತ್ತದೆ.


DF: ರಕ್ಷಣಾ ಕೋಟಾ
ಸೈನ್ಯ (ನೌಕಾಪಡೆ, ವಾಯುಪಡೆ ಮತ್ತು ಸೈನ್ಯ), ಸಿಆರ್‌ಪಿಎಫ್ (CRPF)ಅಥವಾ ಭಾರತೀಯ ರಕ್ಷಣಾ ಸೇವೆಗಳ ಪ್ರಸ್ತುತ ಅಥವಾ ನಿವೃತ್ತ ಯೋಧರಿಗೆ ಈ ಕೋಟಾದಡಿ ಟಿಕೆಟ್ ನೀಡಲಾಗುತ್ತದೆ. ರಕ್ಷಣಾ ಐಡಿ ಪುರಾವೆ ಮತ್ತು ಸಂಖ್ಯೆ ಅಥವಾ ವಾರಂಟ್ ಅಥವಾ ಫಾರ್ಮ್ ಡಿಯ ಅಗತ್ಯವಿರುತ್ತದೆ.


PH: ಪಾರ್ಲಿಮೆಂಟ್ ಹೌಸ್ ಕೋಟಾ
ಸಂಸತ್ ಸದಸ್ಯರು ಈ ಕೋಟಾವನ್ನು ಪಡೆಯುತ್ತಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸಚಿವರು. ಸುಪ್ರೀಂ ಕೋರ್ಟ್ (Supreme court) ಮತ್ತು ಹೈಕೋರ್ಟ್‌ನ ನ್ಯಾಯಾಧೀಶರು ಮತ್ತು ಶಾಸಕರು ಸಹ ಈ ಕೋಟಾದಲ್ಲಿ ಪ್ರಯಾಣಿಸಬಹುದು. ಹುದ್ದೆಗೆ ಸಂಬಂಧಿಸಿದ ಸರ್ಕಾರ ನೀಡುವ ಗುರುತಿನ ಚೀಟಿ ಅಥವಾ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.


ಇದನ್ನೂ ಓದಿ : ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಕಳ್ಳರು ಬಳಸುವ ಈ ವಿಶಿಷ್ಟ ಟ್ರಿಕ್ ಬಗ್ಗೆ ಇರಲಿ ಎಚ್ಚರ


LD:  ಲೇಡೀಸ್ ಕೋಟಾ
45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಇದರಲ್ಲಿ ಟಿಕೆಟ್ ಪಡೆಯುವ ಅವಕಾಶವಿರುತ್ತದೆ. ಗರ್ಭಿಣಿ ಮಹಿಳೆಯರ ವಿಚಾರದಲ್ಲಿ ವಯಸ್ಸಿನ ನಿರ್ಬಂಧವಿರುವುದಿಲ್ಲ. ಮಹಿಳೆಯರ ಕೋಟಾ ಅಡಿಯಲ್ಲಿ 6 ಅಥವಾ ಹೆಚ್ಚಿನ ಆಸನಗಳನ್ನು ಹೊಂದಿರುವ ರೈಲುಗಳಲ್ಲಿಯೂ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.


HP: ಹ್ಯಾಂಡಿಕ್ಯಾಪ್ ಕೋಟಾ
40% ಅಥವಾ ಹೆಚ್ಚಿನ ಅಂಗವೈಕಲ್ಯ ಹೊಂದಿರವವರಿಗೆ ಈ ಕೋಟಾದಡಿ ಟಿಕೆಟ್ ನೀಡಲಾಗುತ್ತದೆ. ರೈಲ್ವೆ ನೀಡುವ ಹ್ಯಾಂಡಿಕ್ಯಾಪ್ ಪ್ರಮಾಣಪತ್ರದ ಅಗತ್ಯವಿರುತ್ತದೆ. ಈ ಕೋಟಾ ಅಡಿಯಲ್ಲಿ ಅಂಗವಿಕಲರಿಗೆ ಪ್ರತಿ ಕೋಚ್‌ಗೆ ಕನಿಷ್ಠ 2 ಆಸನಗಳನ್ನು ಮೀಸಲಿಡಲಾಗುತ್ತದೆ. ಈ ಕೋಟಾದಲ್ಲಿ ಟಿಕೆಟ್ ಕಾಯ್ದಿರಿಸುವಾಗ, ಶೇಕಡಾ 75 ರಷ್ಟು ಕಡಿಮೆ ಶುಲ್ಕವನ್ನು ವಿಧಿಸಲಾಗುತ್ತದೆ.


DP : ಡ್ಯೂಟಿ ಪಾಸ್ ಕೋಟಾ
ಅಧಿಕೃತ ಕೆಲಸಕ್ಕಾಗಿ ಪ್ರಯಾಣಿಸುವ ರೈಲ್ವೆ ನೌಕರರು (Railway employee) ಈ ಕೋಟಾದಡಿಯಲ್ಲಿ ಟಿಕೆಟ್ ಪಡೆಯಬಹುದು. ಇದಕ್ಕಾಗಿ ಪಾಸ್ ಕಾಪಿ ಮತ್ತು ಡ್ಯೂಟಿ ಪ್ರೂಫ್ ಬೇಕಾಗುತ್ತದೆ.


ಇದನ್ನೂ ಓದಿ : 7th Pay Commission: ಡಿಎ ಹೆಚ್ಚಳಕ್ಕೂ ಮುನ್ನವೇ ಟಿಎ ಏರಿಕೆ..! ಬಂದಿದೆ ಸಿಹಿ ಸುದ್ದಿ


RE: ರೈಲು ಎಂಪ್ಲಾಯಿ ಅಥವಾ ಪ್ರಿವಿಲೆಡ್ಜ್ ಕೋಟಾ 
ರೈಲ್ವೆ ನೌಕರರು ಮತ್ತು ಅವರ ಕುಟುಂಬಗಳ ಪ್ರಯಾಣಕ್ಕಾಗಿ, ಈ ಕೋಟಾದಡಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಇದಕ್ಕಾಗಿ ರೈಲ್ವೆ ಪಾಸ್ (Railay pass) ಅಥವಾ ಪ್ರಿವಿಲೇಜ್ ಪಾಸ್ ನ ಕಾಪಿ ಬೇಕಾಗಿರುತ್ತದೆ. 


YU:  ಯುವ ಕೋಟಾ
15 ರಿಂದ 45 ವರ್ಷದೊಳಗಿನ ನಿರುದ್ಯೋಗಿಗಳಿಗೆ ಈ ಕೋಟಾದಡಿಕಯಲ್ಲಿ ಟಿಕೆಟ್ ನೀಡಲಾಗುತ್ತದೆ . ಇದಕ್ಕಾಗಿ ಜನನ ಪ್ರಮಾಣಪತ್ರ, ಎನ್‌ಆರ್‌ಇಜಿಎ ಅಡಿಯಲ್ಲಿ ಅಥವಾ ಸರ್ಕಾರಿ ಉದ್ಯೋಗ ವಿನಿಮಯ ಕೇಂದ್ರದಿಂದ ನೀಡಲಾದ ಪ್ರಮಾಣಪತ್ರ ಬೇಕಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.