Online Driving Licence Application : ಒಬ್ಬ ವ್ಯಕ್ತಿಯು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ ಅದಕ್ಕೂ ಮೊದಲಿ ಲರ್ನಿಂಗ್ ಲೈಸೆನ್ಸ್ ಪಡೆಯಬೇಕಾಗುತ್ತದೆ.  ಲರ್ನಿಂಗ್ ಲೈಸೆನ್ಸ್ ಪಡೆದ ನಂತರವೇ ಖಾಯಂ ಚಾಲನಾ ಪರವಾನಗಿಯನ್ನು ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸಾಧ್ಯವಾಗುತ್ತದೆ. ಇಂದು ನಾವು ಈ ಲೇಖನದಲ್ಲಿ ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಹೇಳಲಿದ್ದೇವೆ. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಎರಡೂ ವಿಧಗಳಲ್ಲಿ ಮಾಡಿಸಬಹುದು.  ಲರ್ನಿಂಗ್ ಲೈಸೆನ್ಸ್  ಪಡೆಯಬೇಕಾದರೆ ಆರ್ ಟಿಒ ಕಚೇರಿಗೆ ಹೋಗಬೇಕೆಂದಿಲ್ಲ. ಮನೆಯಿಂದಲೇ  ಲರ್ನಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು.  ಲರ್ನಿಂಗ್ ಲೈಸೆನ್ಸ್ ಮಾಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು. 


COMMERCIAL BREAK
SCROLL TO CONTINUE READING

ಚಾಲನಾ ಪರವಾನಗಿಯನ್ನು ಆನ್‌ಲೈನ್‌ನಲ್ಲಿ  ಪಡೆಯುವುದು ಹೇಗೆ? :
1. ಮೊದಲಿಗೆ https://parivahan.gov.in/parivahan/ ಗೆ ಹೋಗಿ .
2. ಆನ್‌ಲೈನ್ ಸರ್ವಿಸ್  ಗೆ ಹೋಗಿ  Driving Licence Related Services ಮೇಲೆ ಕ್ಲಿಕ್ ಮಾಡಿ ಮತ್ತು ನಂತರ, ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.
3. ಇಲ್ಲಿ  ಲರ್ನರ್ಸ್ ಲೈಸೆನ್ಸ್ ಅಪ್ಲಿಕೇಶನ್‌ನ ಆಯ್ಕೆಯನ್ನು ಆರಿಸಿ.
4. ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
5. ಇಲ್ಲಿ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ.
6. ಲರ್ನರ್ಸ್ ಲೈಸೆನ್ಸ್  ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಪರೀಕ್ಷೆಯ ದಿನಾಂಕವನ್ನು ಆಯ್ಕೆಮಾಡಿ ಮತ್ತು  ಹಣ ಪಾವತಿ ಮಾಡಿ. 


ಇದನ್ನೂ ಓದಿ : Gold Price Today : ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ


 ಲರ್ನರ್  ಲೈಸೆನ್ಸ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ, ಆಧಾರ್ ದೃಢೀಕರಣ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರೊಂದಿಗೆ ಲರ್ನರ್  ಲೈಸೆನ್ಸ್  ಪಡೆಯಲು RTOಗೆ ಹೋಗುವ ಅಗತ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಆರ್‌ಟಿಒಗೆ ಹೋಗದೆ ಕಲಿಕಾ ಪರವಾನಗಿಯನ್ನು ಮಾಡಬಹುದಾಗಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿಯೇ ಟೆಸ್ಟ್ ತೆಗೆದುಕೊಳ್ಳಲಾಗುತ್ತದೆ.  ದೆಹಲಿಯಲ್ಲಿಯೂ ಕೂಡಾ ಇಂಥದ್ದೇ  ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಕೆಲವು ರಾಜ್ಯಗಳಲ್ಲಿ ಈ ಸೌಲಭ್ಯ ಇನ್ನೂ ಲಭ್ಯವಿಲ್ಲ. ಆನ್‌ಲೈನ್ ಪ್ರಕ್ರಿಯೆ ಮುಗಿದ ನಂತರ  ಟೆಸ್ಟ್ ಕೊಡಲು ಆರ್‌ಟಿಒಗೆ ಹೋಗಬೇಕಾಗುತ್ತದೆ.


ಇದನ್ನೂ ಓದಿ :  ವ್ಯಾಪಾರಿಗಳಿಗೆ ಬಿಸಿನೆಸ್ ಮಾಡಲು ರೈಲ್ವೆಯಿಂದ ಉತ್ತಮ ಅವಕಾಶ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.