ಬೆಂಗಳೂರು : ಸಿಮ್ ಕಾರ್ಡ್ ಬಗ್ಗೆ  ಕೇಂದ್ರ ಸರ್ಕಾರ  ಮಹತ್ವದ ನಿರ್ಧಾರವನ್ನು  ಪ್ರಕಟಿಸಿದೆ. ಪ್ರಸ್ತುತ, ಸೈಬರ್ ವಂಚನೆಗಳು ದೇಶಾದ್ಯಂತ ಬಹಳ ವೇಗವಾಗಿ ಹೆಚ್ಚುತ್ತಿವೆ. ಇದನ್ನು ತಡೆಯಲು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೇಶಾದ್ಯಂತ ಸುಮಾರು 67,000 ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ. ಇದರೊಂದಿಗೆ ವಂಚನೆಯನ್ನು ತಡೆಯಲು ಸರ್ಕಾರ ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್  ವೆರಿಫಿಕೆಶನ್ ಕಡ್ಡಾಯಗೊಳಿಸಿದೆ. 


COMMERCIAL BREAK
SCROLL TO CONTINUE READING

ಪೊಲೀಸ್ ವೆರಿಫಿಕೆಶನ್  ಕಡ್ಡಾಯ:


ವಂಚನೆಯನ್ನು ತಡೆಗಟ್ಟಲು, ಸರ್ಕಾರವು ಸಿಮ್ ಕಾರ್ಡ್ ಡೀಲರ್‌ಗಳ ಪೊಲೀಸ್ ವೆರಿಫಿಕೆಶನ್  ಕಡ್ಡಾಯಗೊಳಿಸಿದೆ. ಹೀಗಾಗಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ  ದೊಡ್ಡ ಪ್ರಮಾಣದಲ್ಲಿ 'ಸಂಪರ್ಕ' ನೀಡುವ ಸೌಲಭ್ಯವನ್ನು ಸ್ಥಗಿತಗೊಳಿಸಿದಂತಾಗಿದೆ. ಈ ವಿಚಾರವನ್ನು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


ಇದನ್ನೂ ಓದಿ : ಶೀಘ್ರದಲ್ಲಿಯೇ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಬಂಬಾಟ್ ಹೆಚ್ಚಳ ಸಾಧ್ಯತೆ!


52 ಲಕ್ಷ ಮೊಬೈಲ್ ಸಂಪರ್ಕ ಬಂದ್ : 
ಇದರೊಂದಿಗೆ ಸರ್ಕಾರ 52 ಲಕ್ಷ ಮೊಬೈಲ್ ಸಂಪರ್ಕ ಬಂದ್ ಮಾಡಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. 67,000 ಡೀಲರ್‌ಗಳ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮೇ 2023 ರಿಂದ, ಸಿಮ್ ಕಾರ್ಡ್ ವಿತರಕರ ವಿರುದ್ಧ 300 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.


10 ಲಕ್ಷ ದಂಡ  : 
ವಂಚನೆ ಕೃತ್ಯಗಳಲ್ಲಿ ತೊಡಗಿರುವ ಸುಮಾರು 66,000 ಖಾತೆಗಳನ್ನು ವಾಟ್ಸಾಪ್ ನಿರ್ಬಂಧಿಸಿದೆ. ಈಗ ವಂಚನೆ ತಡೆಯಲು ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ವೆರಿಫಿಕೆಶನ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಈ ನಿಯಮ ಉಲ್ಲಂಘಿಸುವ ಡೀಲರ್ ಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು. 


ಇದನ್ನೂ ಓದಿ : ಕುಸಿಯುತ್ತಲೇ ಇದೆ ಚಿನ್ನದ ದರ ! ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಇನ್ನೂ ಅಗ್ಗವಾಗುವ ಸಾಧ್ಯತೆ


ಪೊಲೀಸ್ ವೆರಿಫಿಕೆಶನ್ ಗೆ ಸಮಯ ಸಿಗಲಿದೆ : 
10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್  ವೆರಿಫಿಕೆಶನ್ ಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಟೆಲಿಕಾಂ ಇಲಾಖೆ ಕೂಡ ದೊಡ್ಡ ಪ್ರಮಾಣದಲ್ಲಿ ‘ಕನೆಕ್ಷನ್’ ನೀಡುವ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದರು. ಇದರ ಬದಲಾಗಿ, ವ್ಯಾಪಾರ ಸಂಪರ್ಕಗಳ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು.


KYC ಮಾಡಿಸಬೇಕು : 
ಇದರ ಜೊತೆಗೆ SIM ತೆಗೆದುಕೊಳ್ಳುವ ವ್ಯಕ್ತಿಯ KYC ಅನ್ನು ಸಹ ಮಾಡಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ. KYC ಸಂಸ್ಥೆ ಅಥವಾ ಖರೀದಿದಾರರ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು ಸಹಾಯ ಮಾಡುತ್ತದೆ ಎನ್ನುವ ಉದ್ದೇಶದಿಂದ ಪ್ರಕ್ರಿಯೆಯನ್ನು ಮಾಡಿಸಲಾಗುತ್ತಿದೆ. 


ಇದನ್ನೂ ಓದಿ : ಗ್ರಾಹಕರಿಗೆ ಶಾಕ್ ನೀಡಿದ ಈ ಐದು ಬ್ಯಾಂಕ್ ಗಳು! ಇಲ್ಲಿ ಲೋನ್ ಪಡೆಯುವುದು ಬಲು ದುಬಾರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.