ಮುಂಬಯಿ : ಭಾರತದ ಆರ್ಥಿಕತೆ ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳೂ ದಟ್ಟವಾಗಿವೆ. ಕರೋನಾ  ಲಾಕ್ ಡೌನ್ ಕಾರಣದಿಂದ  ಸ್ಥಬ್ದಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಹೊಸ ವರ್ಷ 2021ರ ಆರಂಭದಲ್ಲಿ ಗರಿಗೆದರುತ್ತಿವೆ.   ಮುಂಬಯಿ ಷೇರು ಪೇಟೆ ಕೂಡಾ ಗಗನಕ್ಕೆ ಚಿಮ್ಮತೊಡಗಿದೆ.  ಷೇರುಪೇಟೆಯಲ್ಲಿ(Stock Market)  ಗೂಳಿ (bullish)  ಟ್ರೆಂಡ್ ಎಲ್ಲರ ಖುಷಿಗೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಮುಂಬಯಿ ಷೇರುಪೇಟೆ (BSE) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಭರ್ಜರಿಯಾಗಿ ಮುನ್ನುಗ್ಗಿದೆ. ಇಂದು (today) ಉತ್ತಮ ಆರಂಭ ತೋರಿದ ಸೆನ್ಸೆಕ್ಸ್, 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇಂದು ಬೆಳಗ್ಗೆ 9.30ಕ್ಕೆ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್  300ಕ್ಕೂ ಹೆಚ್ಚು ಅಂಶಗಳಷ್ಟು  ಏರಿಕೆ ಕಂಡಿತು. ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ. 


ಇದನ್ನೂ ಓದಿSBI Alert : ಡೆಬಿಟ್ ಕಾರ್ಡ್‌ ಗ್ರಾಹಕರೇ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ


ಸೆನ್ಸೆಕ್ಸ್ ಏರಿಕೆಯಿಂದ ಹೆಚ್ಚಿಗೆ ಲಾಭ ಕಂಡ ಕಂಪನಿಗಳು ಅಂದರೆ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಸರ್ವ್ (Bajaj Finserv), ಇನ್ಫೋಸಿಸ್ (Infosys) ಮತ್ತು ಐಸಿಐಸಿಐ ಬ್ಯಾಂಕ್ (ICICI Bank). ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ 300.09 ಅಂಶ ಏರಿಕೆಯಾಗಿ 50 ಸಾವಿರದ 126.73 ನ್ನು ತಲುಪಿತ್ತು. ನಿಫ್ಟಿ (Nifty) ಸಹ 85.40 ಅಂಶ ಅಂದರೆ ಶೇಕಡಾ 0.58ರಷ್ಟು ಏರಿಕೆಯಾಗಿ 14 ಸಾವಿರದ 730 ರ  ಅಜೂಬಾಜಿನಲ್ಲಿ  ವಹಿವಾಟು ನಡೆಸುತ್ತಿದೆ. 


ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್ RIL, ಇಂಡಸ್ ಇಂಡ್ ಬ್ಯಾಂಕ್ (IndusInd Bank), ಆಕ್ಸಿಸ್ ಬ್ಯಾಂಕ್  (Axis Bank) ಷೇರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅವು ಲಾಭದಲ್ಲಿವೆ. 


ಇದನ್ನೂ ಓದಿLIC Policy : ನಿತ್ಯ 199 ರೂ. ಹೂಡಿಕೆ ಮಾಡಿ 94 ಲಕ್ಷ ರೂಪಾಯಿ ಪಡೆಯಿರಿ !


ಈ ಮಧ್ಯೆ, ಜಾಗತಿಕ ಕಚ್ಚಾತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 0.30ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರಲ್ ಗೆ 55.91 ಡಾಲರ್ ಆಗಿದೆ. ಇದು ಕೂಡಾ ಸೆನ್ಸೆಕ್ಸ್ ರಾಕೇಟ್ ಸ್ಪೀಡ್ ಗೆ ಕಾರಣವಾಗಿದೆ. ಕೇಂದ್ರ ಮುಂಗಡಪತ್ರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಮೆರಿಕದಲ್ಲಿ ಬೈಡೆನ್ ಅಧಿಕಾರ ಸ್ವೀಕರಿಸಿದ್ದು, ಇವೆಲ್ಲವೂ ಸೆನ್ಸೆಕ್ಸ್ ಓಟಕ್ಕೆ ಬಲ ನೀಡಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.