ಬೆಂಗಳೂರು: ದೇಶದಲ್ಲಿ ಸಖತ್ ಸದ್ದು ಮಾಡಿದ್ದ ಟೊಮೇಟೊ ದರದಲ್ಲಿ ದಿಢೀರ್ ಕುಸಿತ ಕಂಡಿದೆ. ಇದರಿಂದ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ ಬೆಳಗಾರರಲ್ಲಿ ಆತಂಕ ಮನೆ ಮಾಡಿದೆ.


COMMERCIAL BREAK
SCROLL TO CONTINUE READING

ದೇಶದ ಕೆಲವು ಕಡೆ ಪ್ರತಿ ಕೆಜಿ 250-300 ರೂ.ವರೆಗೆ ಮಾರಾಟವಾಗುತ್ತಿದ್ದ ಟೊಮೇಟೊ ಭರ್ಜರಿ ಡಿಮ್ಯಾಂಡ್ ಸೃಷ್ಟಿಸಿಕೊಂಡಿತ್ತು. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಟೊಮೇಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಟೊಮೇಟೊವನ್ನು ಉತ್ತಮ ಬೆಲೆಗೆ ಮಾರಾಟ ಮಾಡಿದ್ದ ಬೆಳೆಗಾರರು ಲಕ್ಷಾಧೀಶ ಮತ್ತು ಕೋಟ್ಯಧಿಪತಿಗಳಾಗಿದ್ದರು.


1-2 ಎಕರೆಯಲ್ಲಿ ಬೆಳೆದ ಟೊಮೇಟೊಗೆ ಬಂಪರ್ ಬೆಲೆ ಸಿಕ್ಕು ಅನೇಕ ರೈತರು ರಾತ್ರೋ ರಾತ್ರಿ ಕೋಟ್ಯಧಿಪತಿಗಳಾಗಿ ಬದಲಾಗಿದ್ದರು. ಆದರೆ ಬೆಲೆ ಏರಿಕೆಯ ಹೊಡೆತಕ್ಕೆ ಗ್ರಾಹಕರು ಕಂಗಾಲಾಗಿ ಹೋಗಿದ್ದರು. ಇದೀಗ ಏಕಾಏಕಿ ಟೊಮೇಟೊ ದರದಲ್ಲಿ ಭಾರೀ ಕುಸಿತ ಕಾಣುತ್ತಿದೆ.  


ಇದನ್ನೂ ಓದಿ: ರೈಲಿನ ಪೂರ್ತಿ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಲು ಈ ವೆಬ್ ಸೈಟ್ ಬಳಸಿ


ಕರ್ನಾಟಕ ಸೇರಿದಂತೆ ಉತ್ತರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಟೊಮೇಟೊ ಬೆಲೆ ಕುಸಿತ ಕಂಡಿದೆ. ನೇಪಾಳದಿಂದಲೂ ಭಾರತಕ್ಕೆ ಟೊಮೇಟೊ ಆಮದಾಗುತ್ತಿದೆ. ಉತ್ತರ ಭಾರತದಲ್ಲಿ ಟೊಮೇಟೊ ಪೂರೈಕೆ ಹೆಚ್ಚಾಗಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಇದು ಹೀಗೆ ಮುಂದುವರೆದರೆ ಸಗಟು ದರ ಪ್ರತಿ ಕೆಜಿಗೆ 5-10 ರೂ.ಗೆ ಕುಸಿತವಾಗಬಹುದು ಅಂತಾ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ.  ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ.


ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ ಟೊಮೇಟೊಗೆ ಇದೀಗ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿದ್ದ ಜನಸಾಮಾನ್ಯರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಟೊಮೇಟೊ ಬೆಲೆ ಕುಸಿತ ಕಂಡಿದ್ದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.


ಇದನ್ನೂ ಓದಿ: ವೇತನ ನಿಯಮಗಳಲ್ಲಿ ಬದಲಾವಣೆ ! ಮುಂದಿನ ತಿಂಗಳಿನಿಂದಲೇ ಕೈ ಸೇರುವುದು ಹೆಚ್ಚಿನ ವೇತನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.