Advance Tax ಪಾವತಿಸಲು ನಾಳೆಯೇ ಕೊನೆಯ ದಿನ! ತಪ್ಪಿದರೆ ತೆರಬೇಕಾಗುತ್ತದೆ ಭಾರೀ ದಂಡ
Advance Tax LasT Day:ತೆರಿಗೆ ಪಾವತಿದಾರರು ಇಲ್ಲಿಯವರೆಗೆ ಮುಂಗಡ ತೆರಿಗೆಯನ್ನು ಪಾವತಿ ಮಾಡದಿದ್ದರೆ ತಕ್ಷಣ ಪಾವತಿಸಬೇಕಾಗುತ್ತದೆ. ಮುಂಗಡ ತೆರಿಗೆ ಕಂತುಗಳನ್ನು ಸಲ್ಲಿಸಲು 15 ಮಾರ್ಚ್ 2022 ಕೊನೆಯ ದಿನವಾಗಿದೆ.
ನವದೆಹಲಿ : Advance Tax Last Day:ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿಯೊಂದು ಬಂದಿದೆ. ಇನ್ನೂ ಮುಂಗಡ ತೆರಿಗೆಯನ್ನು ಠೇವಣಿ ಮಾಡದಿದ್ದರೆ, ತಕ್ಷಣವೇ ಮಾಡಿ. 2021-22 ರ ಹಣಕಾಸು ವರ್ಷಕ್ಕೆ ಮುಂಗಡ ತೆರಿಗೆ ಕಂತುಗಳನ್ನು (Advance Tax)ಸಲ್ಲಿಸಲು ಮಾರ್ಚ್ 15, 2022 ಕೊನೆಯ ದಿನಾಂಕವಾಗಿದೆ. ನಿಗದಿತ ಸಮಯದೊಳಗೆ ಮುಂಗಡ ತೆರಿಗೆ ಪಾವತಿಸದಿದ್ದಲ್ಲಿ ಬಡ್ಡಿ ತೆರಬೇಕಾಗುತ್ತದೆ.
ಮುಂಗಡ ತೆರಿಗೆಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸಬೇಕು :
ತೆರಿಗೆದಾರರು ಒಂದು ವರ್ಷದಲ್ಲಿ ನಾಲ್ಕು ಕಂತುಗಳಲ್ಲಿ ಗಳಿಕೆಯ ಮೇಲೆ ಮುಂಗಡ ತೆರಿಗೆಯನ್ನು ಪಾವತಿಸಬೇಕು (Advance Tax payment). ಈಗ ಪಾವತಿಸಬೇಕಾಗಿರುವುದು ನಾಲ್ಕು ಕಂತುಗಳ ಕೊನೆಯ ಕಂತು ಆಗಿರುತ್ತದೆ. ತೆರಿಗೆ ಕಾನೂನಿನ ಪ್ರಕಾರ, ತೆರಿಗೆದಾರರು ವಾರ್ಷಿಕವಾಗಿ ಅಂದಾಜು ತೆರಿಗೆಯನ್ನು 15%, 45%, 75% ಮತ್ತು 100% ಹೀಗೆ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಈ ನಾಲ್ಕು ಕಂತುಗಳನ್ನು ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು ಮಾರ್ಚ್ 15 ರೊಳಗೆ ಪಾವತಿಸಬೇಕು.
ಇದನ್ನೂ ಓದಿ : RBI Update: RBI ನಿಂದ ನೂತನ ನಿಯಮ ಜಾರಿ, ನಿಮ್ಮ ಹಣಕಾಸಿನ ಮೇಲೂ ನೇರ ಪ್ರಭಾವ!
ಯಾರು ಮುಂಗಡ ತೆರಿಗೆ ಪಾವತಿಸುವುದು ಅವಶ್ಯಕ ? :
ಆರ್ಥಿಕ ವರ್ಷದಲ್ಲಿ 10,000 ರೂ ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ಎಲ್ಲಾ ತೆರಿಗೆದಾರರಿಗೆ (income tax)ಅನ್ವಯವಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, ಒಬ್ಬ ವ್ಯಕ್ತಿಯ ಆದಾಯದ ಮೂಲವು ವೇತನಕ್ಕಿಂತ (Salary)ಬೇರೆಯಾಗಿರುವುದಿಲ್ಲ. ಹಾಗಾಗಿ ವೇತನ ಪಡೆಯುವವರು ಮುಂಗಡ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಏಕೆಂದರೆ ಉದ್ಯೋಗಿಯ ಕಂಪನಿಯು ಈ ತೆರಿಗೆಯನ್ನು ಉದ್ಯೋಗಿಯ ವೇತನದಿಂದ ಕಡಿತಗೊಳಿಸಿ ತೆರಿಗೆ ಇಲಾಖೆಗೆ ಸಲ್ಲಿಸುತ್ತದೆ.
ಮುಂಗಡ ತೆರಿಗೆ ಪಾವತಿಸಸಿದ್ದರೆ ಏನಾಗುತ್ತದೆ?
ನಿಗದಿತ ಸಮಯದೊಳಗೆ ತೆರಿಗೆದಾರನು ತನ್ನ ಮುಂಗಡ ತೆರಿಗೆಯನ್ನು ಪಾವತಿಸಲು ವಿಫಲವಾದರೆ, ಮೂರು ತಿಂಗಳವರೆಗೆ ಕಂತುಗಳಲ್ಲಿ ಪಾವತಿಸಬೇಕಾದ ಮೊತ್ತಕ್ಕೆ ತಿಂಗಳಿಗೆ 1% ರಂತೆ ಸೆಕ್ಷನ್ 234C ಅಡಿಯಲ್ಲಿ ಬಡ್ಡಿಯನ್ನು (interest) ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Post Office: April ನಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಿಸದೆ ಹೋದರೆ ತೊಂದರೆ ತಪ್ಪಿದ್ದಲ್ಲ
ಮುಂಗಡ ತೆರಿಗೆ ಪಾವತಿಸುವುದು ಹೇಗೆ ? :
ನೀವು ಆಫ್‌ಲೈನ್ (offline)ಮತ್ತು ಆನ್‌ಲೈನ್‌ನಲ್ಲಿ (online)ಮುಂಗಡ ತೆರಿಗೆಯನ್ನು ಪಾವತಿಸಬಹುದು. ಆಫ್‌ಲೈನ್‌ನಲ್ಲಿ ಪಾವತಿಸಲು, ಆದಾಯ ತೆರಿಗೆ ಇಲಾಖೆಯು ಅಧಿಕೃತಗೊಳಿಸಿದ ಬ್ಯಾಂಕ್ (bank)ಶಾಖೆಗಳಲ್ಲಿ ತೆರಿಗೆ ಪಾವತಿ ಚಲನ್ ಅನ್ನು ಬಳಸಬಹುದು. ಆನ್‌ಲೈನ್ ಪಾವತಿ (online payment)ಮಾಡಲು, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ www.incometaxindia.gov.inಗೆ ಲಾಗ್ ಇನ್ ಮಾಡಿ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ತೆರಿಗೆಯನ್ನು ಪಾವತಿ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.