Hero MotoCorp: Hero MotoCorp ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ. ಹೀರೋ ಮೋಟೋಕಾರ್ಪ್ ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಆಫ್-ರೋಡಿಂಗ್ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳಿಗೆ (Xpulse 200 ನಂತಹ) ಇಂಧನ-ಸಮರ್ಥ ಬೈಕ್‌ಗಳ ಶ್ರೇಣಿಯನ್ನು ನೀಡುತ್ತದೆ. ಇದರ ಹೊರತಾಗಿ, ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಪನ್ನಗಳನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆದಾಗ್ಯೂ, ಸೆಪ್ಟೆಂಬರ್ 2022 ರಲ್ಲಿ ಕಂಪನಿಯ 3 ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್‌ಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಹೀರೋ ಸ್ಪ್ಲೆಂಡರ್
ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2022 ರಲ್ಲಿ ಅತಿ ಹೆಚ್ಚು ಹೀರೋ ಸ್ಪ್ಲೆಂಡರ್‌ಗಳನ್ನು ಮಾರಾಟ ಮಾಡಿದೆ. ಇದು ಹೀರೋನ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್ ತನ್ನ ಶುದ್ಧ ವಿನ್ಯಾಸ ಮತ್ತು ಇಂಧನ-ಸಾಮರ್ಥ್ಯತೆಗೆ ಜನಪ್ರೀಯವಾಗಿದೆ. ಇದು ಇಂದಿಗೂ ಕೂಡ ಭಾರತದಲ್ಲಿ ಈ ಬ್ರಾಂಡ್ ನ ಅತಿ ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ.  ಇದರ ಬೆಲೆ ರೂ 71,176 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ. ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2022 ರಲ್ಲಿ 2,61,081 ಯುನಿಟ್ ಸ್ಪ್ಲೆಂಡರ್ ಅನ್ನು ಮಾರಾಟ ಮಾಡಿದೆ ಮತ್ತು ಮಾರಾಟದಲ್ಲಿ ಶೇ.6 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2021 ರಲ್ಲಿ 2,46,009 ಯುನಿಟ್ ಸ್ಪ್ಲೆಂಡರ್ ಅನ್ನು ಮಾರಾಟ ಮಾಡಿತ್ತು.


ಇದನ್ನೂ ಓದಿ-Top 5 Sedan Cars: ಇವೆ ನೋಡಿ ಭಾರತದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಅಗ್ಗದ ಕಾರುಗಳು


ಹೀರೋ HF ಡಿಲಕ್ಸ್
ಹೀರೋ HF ಡಿಲಕ್ಸ್ ಸೆಪ್ಟೆಂಬರ್ 2022 ರಲ್ಲಿ Hero MotoCorp ನ ಎರಡನೇ ಅತ್ಯುತ್ತಮ ಮಾರಾಟವಾದ ಮಾದರಿಯಾಗಿದೆ. ಇದು 100cc ಎಂಜಿನ್‌ನೊಂದಿಗೆ ಬರುತ್ತದೆ. Hero HF ಡಿಲಕ್ಸ್ ಹಲವಾರು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆಗಳು ಎಕ್ಸ್ ಶೋರೂಂ ರೂ 60,308 ರಿಂದ ಪ್ರಾರಂಭವಾಗುತ್ತದೆ. Hero MotoCorp ಸೆಪ್ಟೆಂಬರ್ 2022 ರಲ್ಲಿ 93,596 HF ಡೀಲಕ್ಸ್ ಯುನಿಟ್ ಗಳನ್ನು ಮಾರಾಟ ಮಾಡಿದೆ. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.30 ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹೀರೊ ಮೋಟೊಕಾರ್ಪ್ 1,34,539 ಹೆಚ್‌ಎಫ್ ಡಿಲಕ್ಸ್‌ಗಳನ್ನು ಮಾರಾಟ ಮಾಡಿತ್ತು.


ಇದನ್ನೂ ಓದಿ-Good News: ದೇಶಾದ್ಯಂತದ ಬ್ಯಾಂಕ್ ನೌಕರರಿಗೊಂದು ಭಾರಿ ಸಂತಸದ ಸುದ್ದಿ!


ಹೀರೋ ಗ್ಲಾಮರ್
ಕಳೆದ ತಿಂಗಳು, ಹೀರೋನ ಮೂರನೇ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಗಳಲ್ಲಿ 125 ಸಿಸಿ ಕಮ್ಯೂಟರ್ ಗ್ಲಾಮರ್ ಬೈಕ್ ಆಗಿದೆ. ಇದು ಬಹು ರೂಪಾಂತರಗಳಲ್ಲಿ ಲಭ್ಯವಿದೆ, ಬೆಲೆಗಳು ರೂ 78,000 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತವೆ. ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2022 ರಲ್ಲಿ 38,266 ಯುನಿಟ್ ಗ್ಲಾಮರ್ ಅನ್ನು ಮಾರಾಟ ಮಾಡಿದೆ. ಇದರ ಮಾರಾಟವು ಶೇ.42 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಸೆಪ್ಟೆಂಬರ್ 2021 ರಲ್ಲಿ ಈ ಬೈಕ್ ನ  26,866 ಯುನಿಟ್‌ಗಳು ಮಾರಾಟ ಗೊಂಡಿದ್ದವು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ