IRCTC Package: ಭಾರತೀಯ ರೈಲ್ವೆ ಪ್ರವಾಸಿಗ ಹಿತದೃಷ್ಟಿಯಿಂದ ಹಾಗೂ ಪ್ರವಾಸಿಗರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಆಗಾಗ್ಗೆ ಹೊಸ ಹೊಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಐ‌ಆರ್‌ಸಿ‌ಟಿ‌ಸಿ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಬಯಸುವ ಭಕ್ತಾಧಿಗಳಿಗಾಗಿ ವಿಶೇಷ ಧಾರ್ಮಿಕ ಪ್ರವಾಸ ಪ್ಯಾಕೇಜ್ ಅನ್ನು ಪರಿಚೈಸಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಭಕ್ತರು ರಾಮಜನ್ಮಭೂಮಿ ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ ಮತ್ತು ವಾರಣಾಸಿಗೆ ಭೇಟಿ ನೀಡಬಹುದಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಐ‌ಆರ್‌ಸಿ‌ಟಿ‌ಸಿ ಏಕ್ ಭಾರತ್ ಶ್ರೇಷ್ಠ ಭಾರತ್ ಅಡಿಯಲ್ಲಿ ಈ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ ಭಕ್ತರು ಮೂರು ಜ್ಯೋತಿರ್ಲಿಂಗಗಳ ದರ್ಶನ ಪಡೆಯುತ್ತಾರೆ. ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸ ಪ್ಯಾಕೇಜ್ ರಾಜ್‌ಕೋಟ್‌ನಿಂದ ಪ್ರಾರಂಭವಾಗಲಿದೆ.  ಐ‌ಆರ್‌ಸಿ‌ಟಿ‌ಸಿಯ ಈ ಪ್ರಸಿದ್ಧ ಪ್ರವಾಸಿ ಪ್ಯಾಕೇಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 


ಇದನ್ನೂ ಓದಿ- 7th pay commission :ಈ ತಿಂಗಳಲ್ಲಿಯೇ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ : ಖಾತೆ ಸೇರುವ ಒಟ್ಟು ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ


10 ದಿನಗಳ ಪ್ರವಾಸಿ ಪ್ಯಾಕೇಜ್: 
ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸಿ ಪ್ಯಾಕೇಜ್ ಒಟ್ಟು 10 ದಿನಗಳವರೆಗಿನ ಪ್ಯಾಕೇಜ್ ಆಗಿರಲಿದೆ.  ಈ ಟೂರ್ ಪ್ಯಾಕೇಜ್‌ನ ಹೆಸರು " ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ, ಪ್ರಯಾಗ್‌ರಾಜ್ ಸೇರಿದಂತೆ ಮೂರು ಜ್ಯೋತಿರ್ಲಿಂಗ ದರ್ಶನ". ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಭಕ್ತರು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ಪ್ರಯಾಣಿಸುತ್ತಾರೆ. ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸ ಪ್ಯಾಕೇಜ್ 9 ರಾತ್ರಿಗಳು ಮತ್ತು 10 ದಿನಗಳ ಪ್ರವಾಸವನ್ನು ಒಳಗೊಂಡಿರಲಿದೆ. 2024ರ ಫೆಬ್ರವರಿ 05ರಿಂಆರಂಭವಾಗಲಿರುವ ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಭಕ್ತರು ಅಯೋಧ್ಯೆ, ಪ್ರಯಾಗರಾಜ್, ಚಿತ್ರಕೂಟ, ವಾರಣಾಸಿ, ಉಜ್ಜಯಿನಿ ಮತ್ತು ನಾಸಿಕ್‌ನಲ್ಲಿರುವ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಬಹುದಾಗಿದೆ. 


ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸಿ ಪ್ಯಾಕೇಜ್‌ನ ದರ: 
ಈ ಪ್ರವಾಸ ಪ್ಯಾಕೇಜ್‌ನ ಆರಂಭಿಕ  ಬೆಲೆ 20,500 ರೂ. ಆಗಿರಲಿದೆ. ಐ‌ಆರ್‌ಸಿ‌ಟಿ‌ಸಿಯ ಈ ಪ್ರವಾಸದ ಪ್ಯಾಕೇಜ್‌ನ ದರವು ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ. ಪ್ರವಾಸಿಗರು ಆರ್ಥಿಕ ವರ್ಗ (SL),  ಕಂಫರ್ಟ್ ಕ್ಲಾಸ್‌ (3AC) ಮತ್ತು ಸುಪೀರಿಯರ್ ಕ್ಲಾಸ್‌ (2AC) ಗಳಲ್ಲಿ ತಮಗೆ ಅನುಕೂಲವಾದ ವರ್ಗಕ್ಕೆ ಟಿಕೆಟ್ ಕಾಯ್ದಿರಿಸಬಹುದು. 
>> ನೀವು ಎಕಾನಮಿ ಕ್ಲಾಸ್‌ನಲ್ಲಿ (ಸ್ಲೀಪರ್) ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ 20,500 ರೂ. ವೆಚ್ಚವಾಗಲಿದೆ. 
>> ಈ ಪ್ರವಾಸ ಪ್ಯಾಕೇಜ್‌ನಲ್ಲಿ ಕಂಫರ್ಟ್ ಕ್ಲಾಸ್‌ನಲ್ಲಿ (3AC) ನೀವು ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ 33,000 ರೂ.ದರವನ್ನು ಭರಿಸಬೇಕಾಗುತ್ತದೆ. 
>>  ಈ ಪ್ರವಾಸದ ಪ್ಯಾಕೇಜ್‌ನಲ್ಲಿ ನೀವು ಸುಪೀರಿಯರ್ ಕ್ಲಾಸ್‌ನಲ್ಲಿ (2AC) ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ 46000 ರೂ. ವೆಚ್ಚವಾಗುತ್ತದೆ. 


ಇದನ್ನೂ ಓದಿ- Ram Mandir: ರಘುನಂದನ ಶ್ರೀರಾಮನ ಜೀವನದಿಂದ ಕಲಿಯಿರಿ ಫೈನಾನ್ಸಿಯಲ್ ಪ್ಲಾನಿಂಗ್ ಮಂತ್ರ, ನಿಮ್ಮ ಗಳಿಕೆ ರಕ್ಷಿಸುತ್ತಾನೆ ಭಗವಂತ


ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಪ್ರವಾಸವು ರಾಜ್‌ಕೋಟ್ - ಸುರೇಂದ್ರ ನಗರ - ವಿರಾಮ್‌ಗಮ್ - ಸಬರಮತಿ - ನಾಡಿಯಾಡ್ - ಆನಂದ್ - ಛಾಯಾಪುರಿ - ಗೋಧ್ರಾ - ದಾಹೋದ್ - ಮೇಘನಗರ ಮತ್ತು ರತ್ಲಂನಿಂದ ಇರುತ್ತದೆ. ಪ್ರವಾಸದ ಪ್ಯಾಕೇಜ್ ವಡೋದರಾ, ಆನಂದ್, ನಾಡಿಯಾಡ್, ಸಬರಮತಿ, ವಿರಾಮ್‌ಗಮ್, ಸುರೇಂದ್ರನಗರ, ರಾಜ್‌ಕೋಟ್, ಗೋಧ್ರಾ, ದಾಹೋದ್, ಮೇಘನಗರ ಮತ್ತು ರತ್ಲಂನಿಂದ ನಿರ್ಗಮಿಸುತ್ತದೆ. ಟೂರ್ ಪ್ಯಾಕೇಜ್‌ನಲ್ಲಿ ಭಕ್ತರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಭೋಜನವನ್ನು ಒಳಗೊಂಡಿರುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.