ನವದೆಹಲಿ : ವಾಹನ ಸವಾರರಿಂದ ಏನಾದರು ತಪ್ಪಾದರೆ ಟ್ರಾಫಿಕ್ ಪೊಲೀಸರು (Traffic Policeman), ವಾಹನದ ಕೀ ತೆಗೆಯುವುದನ್ನು (Snatch Vehicle Key)  ಅನೇಕ ಬಾರಿ ನೋಡಿರಬಹುದು, ಕೆಲವರಿಗೆ ಇದು ಅನುಭವಕ್ಕೂ ಬಂದಿರಬಹುದು. ಆದರೆ ಟ್ರಾಫಿಕ್ ಪೋಲಿಸ್ ಹಾಗೆ ಮಾಡುವಂತಿಲ್ಲ. ಒಂದು ವೇಳೆ ನಿಮ್ಮ ಜೊತೆ ಹೀಗಾದರೆ ಏನು ಮಾಡಬೇಕು ? 


COMMERCIAL BREAK
SCROLL TO CONTINUE READING

ನಿಮ್ಮ ಕೀಗಳನ್ನು ಕಸಿದುಕೊಳ್ಳುವ ಹಕ್ಕು ಪೊಲೀಸರಿಗೆ ಇದೆಯೇ?
ತಪಾಸಣೆಯ ಸಮಯದಲ್ಲಿ ನಿಮ್ಮ ಕಾರಿನ ಕೀಯನ್ನು ಟ್ರಾಫಿಕ್ ಪೋಲಿಸ್ (Traffic police) ತೆಗೆದುಕೊಳ್ಳುವಂತಿಲ್ಲ. ಅಲ್ಲದೆ,  ನಿಮ್ಮ ಕಾರಿನ ಟೈರ್‌ನ ಗಾಳಿಯನ್ನು ತೆಗೆಯುವುದು, ಅಥವಾ ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ತೋರುವಂತಿಲ್ಲ.  ಒಂದು ವೇಳೆ, ಟ್ರಾಫಿಕ್ ಪೋಲೀಸರು ಈ ರೀತಿ ಮಾಡಿದರೆ, ಅದಕ್ಕೆ ಸಾಕ್ಷಿಯಾಗಿ ನೀವು ಆ ಘಟನೆಯ ವೀಡಿಯೊವನ್ನು (video) ಮಾಡಬೇಕು. ನಂತರ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಅದರ ಹಿರಿಯ ಅಧಿಕಾರಿಗೆ ದೂರು ನೀಡಬಹುದು. ಏಕೆಂದರೆ ಮೋಟಾರು ವಾಹನ ಕಾಯ್ದೆ 2019 ರಲ್ಲಿ (Motor Vehicle Act) ಟ್ರಾಫಿಕ್ ಪೊಲೀಸರಿಗೆ ಅಂತಹ ಯಾವುದೇ ಹಕ್ಕನ್ನು ನೀಡಲಾಗಿಲ್ಲ.


ಇದನ್ನೂ ಓದಿ : CNG Price Hike: ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಸಿಎನ್‌ಜಿ ಮತ್ತಷ್ಟು ದುಬಾರಿ..!


ಅಧಿಕಾರಿಗಳು ಟ್ರಾಫಿಕ್ ಪೋಲೀಸರ ಪರವಾಗಿ ನಿಂತರೆ ಏನು ಮಾಡಬೇಕು?
ಇಷ್ಟೆಲ್ಲಾ ಆದ ನಂತರವೂ ಪೊಲೀಸ್ (police) ಠಾಣೆಯಲ್ಲಿ ಅಥವಾ ಹಿರಿಯ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ ಟ್ರಾಫಿಕ್ ಪೊಲೀಸರ ಪರ ನಿಂತರೆ, ಕೋರ್ಟ್‌ ಮೆಟ್ಟಿಲೇರಬಹುದು. ನೀವು ಬಡತನ ರೇಖೆಗಿಂತ ಕೆಳಗಿದ್ದು,  ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರೆ ಕಾನೂನು ಪರಿಣಿತ ವಕೀಲರು ನಿಮಗೆ ಉಚಿತವಾಗಿ ಸಲಹೆ ನೀಡುತ್ತಾರೆ. ನಂತರ ಹೈಕೋರ್ಟ್ ಆ ಸಂಚಾರಿ ಪೊಲೀಸ್ ಮತ್ತು ಅವರ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಕರೆಸುತ್ತದೆ.


ವಿಚಾರಣೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವಂತಿಲ್ಲ :
ಮೋಟಾರು ವಾಹನ ಕಾಯಿದೆ 2019 ರ ಪ್ರಕಾರ ಯಾವುದೇ ಸಂಚಾರ ಪೊಲೀಸರು ಚೆಕಿಂಗ್ ಹೆಸರಿನಲ್ಲಿ ಗುಂಡಾಗಿರಿ ಮಾಡುವಂತಿಲ್ಲ. ಎಷ್ಟೇ ಹಿರಿಯ ಅಧಿಕಾರಿಯಾಗಿದ್ದರೂ ಅನುಚಿತವಾಗಿ ವರ್ತಿಸುವಂತಿಲ್ಲ ಅಥವಾ ನಿಮ್ಮ ಕಾರಿನ ಕೀ ತೆಗೆಯುವಂತಿಲ್ಲ.


ಇದನ್ನೂ ಓದಿ : ಈ ಬ್ಯಾಂಕ್‌ಗಳ ಗ್ರಾಹಕರಿಗೆ ಸಿಹಿ ಸುದ್ದಿ : ಉಚಿತವಾಗಿ ಸಿಗಲಿದೆ 5 ಲಕ್ಷ ರೂ. ಲಾಭ


ಟ್ರಾಫಿಕ್ ಪೊಲೀಸರು (traffic police)  ಕೈ ಸನ್ನೆ ಮೂಲಕ ನಿಮ್ಮ ವಾಹನವನ್ನು ನಿಲ್ಲಿಸಬಹುದು. ಆದರೆ, ನಿಮ್ಮನ್ನು ಮುಟ್ಟುವಂತಿಲ್ಲ ಎಂದು ಹರಿಯಾಣ ಪೊಲೀಸರು,  ಆರ್ ಟಿಐಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಟ್ರಾಪಿಕ್ ಪೋಲೀಸ್ ನೀಡಿದ ಕೈ ಸನ್ನೆ ನೀಡಿದ ಬಳಿಕವೂ ವಾಹನ ನಿಲ್ಲಿಸದೇ  ಹೋದರೆ,  ಅವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.