7th Pay Commission Latest News: LTC ಬಳಿಕ Travel Allowance ಕುರಿತು ಸರ್ಕಾರದ ಮಹತ್ವದ ನಿರ್ಣಯ
7th Pay Commission Latest News - ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗೆ ನೆಮ್ಮದಿ ನೀಡಲಿದೆ. ಕೊರೊನಾ ಅವಧಿಯಲ್ಲಿ ಜನರು ಮನೆಯಿಂದ ಹೊರಗೆ ಬೀಳುತ್ತಿಲ್ಲ. ಆದರೂ ಕೂಡ ಯಾತ್ರೆ ಕೈಗೊಂಡವರು ತಮ್ಮ ಟ್ರಾವೆಲ್ ಅಲ್ಲೌನ್ಸ್ ಕ್ಲೈಮ್ ಮಾಡಬೇಕಾಗಿದೆ.
ನವದೆಹಲಿ: 7th Pay Commission Latest News - ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗೆ ನೆಮ್ಮದಿ ನೀಡಲಿದೆ. ಕೊರೊನಾ ಅವಧಿಯಲ್ಲಿ ಜನರು ಮನೆಯಿಂದ ಹೊರಗೆ ಬೀಳುತ್ತಿಲ್ಲ. ಆದರೂ ಕೂಡ ಯಾತ್ರೆ ಕೈಗೊಂಡವರು ತಮ್ಮ ಟ್ರಾವೆಲ್ ಅಲ್ಲೌನ್ಸ್ ಕ್ಲೈಮ್ ಮಾಡಬೇಕಾಗಿದೆ. ಆದರೆ, ಇದಕ್ಕಾಗಿ ಬೋರ್ಡಿಂಗ್ ಪಾಸ್ ಅಥವಾ ಟಿಕೆಟ್ ನೀಡುವ ಅವಶ್ಯಕತೆ ಇಲ್ಲ. Leave Travel Concession ಬಳಿಕ ಇದೀಗ ಕೇಂದ್ರ ಸರ್ಕಾರ ಟ್ರಾವೆಲ್ ಅಲೌನ್ಸ್ ನಿಯಮದಲ್ಲಿ ಸಡಿಲಿಕೆ ನೀಡಿದೆ. ನಿಯಮದ ಆಸಾರ ಸರ್ಕಾರಿ ಕೆಲಸದ ವೇಳೆ ವಿಮಾನಯಾನ ಕೈಗೊಂಡರೆ ಇದೀಗ ಬೋರ್ಡಿಂಗ್ ಪಾಸ್ ಸಲ್ಲಿಸುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಫೈನಾನ್ಸ್ ಡಿಪಾರ್ಟ್ಮೆಂಟ್ ಹೊಸ ಫಾರ್ಮ್ ಬಿಡುಗಡೆಗೊಳಿಸಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರಿ ನೌಕರರು ಟ್ರಾವೆಲ್ ಅಲೌನ್ಸ್ ಮೇಲೆ ಹಕ್ಕು ಸಾಧಿಸಲು ಬೋರ್ಡಿಂಗ್ ಪಾಸ್ ನೀಡುವುದು ಅನಿವಾರ್ಯವಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
Boarding Pass ಕಳೆದುಹೋದ ಸಂದರ್ಭದಲ್ಲಿ ಏನು ಮಾಡಬೇಕು?
ಈ ವಿಷಯದ ಮೇಲೆ ತನ್ನ ಗಮನ ಕೇಂದ್ರೀಕರಿಸಿದ Personal Department ಈ ನಿಯಮದಲ್ಲಿ ಸಡಿಲಿಕೆ ನೀಡಿದೆ. ಈ ಕುರಿತು ಆದೇಶ ಹೊರಡಿಸಿರುವ ಇಲಾಖೆ TA Claim ಮಾಡುವಾಗ ಒಂದು ವೇಳೆ ಬೋರ್ಡಿಂಗ್ ಪಾಸ್ ಕಳೆದುಹೋದಲ್ಲಿ ಅಥವಾ ಇಲ್ಲದಿದ್ದರೆ, ಯಾತ್ರೆ ಪೂರ್ಣಗೊಂಡ ಬಳಿಕ ಅವರು ಒಂದು ಫಾರ್ಮ್ ಅನ್ನು ಸಲ್ಲಿಸಬೇಕು. ನಿಜವಾಗಿಯೂ ಯಾತ್ರೆ ನಡೆಸಲಾಗಿದೆ ಎಂಬುದರ ಕುರಿತಾದ ಸ್ವಯಂ ಘೋಷಣೆ ಇದಾಗಿದೆ.
TA ಫಾರ್ಮ್ ಜೊತೆ ಬಿಲ್ ಪಾವತಿಸಬೇಕು
ಈ ಫಾರ್ಮ್ ಸಲ್ಲಿಸುವಾಗ ಬಿಲ್ ಲಗತ್ತಿಸಬೇಕು ಹಾಗೂ ಅದರ ಮೇಲೆ HoD ಹಸ್ತಾಕ್ಷರವಿರಬೇಕು. ಒಂದು ವೇಳೆ ಸರ್ಕಾರಿ ನೌಕರ ಅಂಡರ್ ಸೆಕ್ರೆಟರಿ ಲೆವಲ್ ಅಥವಾ Pay matrix level 10 ಶ್ರೇಣಿಯ ಕೆಳಗಿನ ಅಧಿಕಾರಿಯಾಗಿದ್ದರ ಅವರಿಗೆ ಇದು ಅನಿವಾರ್ಯವಾಗಿದೆ. ಎಲ್ಲ ಡಿಪಾರ್ಟ್ ಮೆಂಟ್ ಗಳಲ್ಲಿ ಜಾರಿಗೊಳಿಸಲು ಇಲಾಖೆ ಆದೇಶ ಹೊರಡಿಸಿದೆ.
Self Declaration Form
Self Declaration faarm ನಲ್ಲಿ ಬೋರ್ಡಿಂಗ್ ಪಾಸ್ ಕಳೆದುಹೋದ ಕಾರಣ ತಾವು ಈ ಫಾರ್ಮ್ ಸಲ್ಲಿಸುತ್ತಿದ್ದೇವೆ ಎಂಬುದು ನಮೂದಾಗಿರಲಿದೆ. ಇದರ ಯಾವುದೇ ಡಿಜಿಟಲ್ ಅಥವಾ ಹಾರ್ಡ್ ಕಾಪಿ ಇರುವುದಿಲ್ಲ. ಒಂದು ವೇಳೆ ಬೋರ್ಡಿಂಗ್ ಪಾಸ್ ಇದ್ದರೆ ನೀವು ಫಾರ್ಮ್ ಭರ್ತಿ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ TA ಹಳೆ ಪದ್ಧತಿಯಿಂದ ನೀವು ಕ್ಲೇಮ್ ಮಾಡಬಹುದು.
ಇದನ್ನು ಓದಿ- 7th Pay Commission: ಏಪ್ರಿಲ್ 2021 ರಿಂದ ಬದಲಾಗಬಹುದು ನಿಮ್ಮ PF, Gratuity ಕೊಡುಗೆ
ತಪ್ಪು ಮಾಹಿತಿ ನೀಡಿದರೆ ಕ್ರಮ
ಇದಾದ ಬಳಿಕ ನೌಕರರು ತಮ್ಮ ವಿಮಾನ ಯಾನ ಯಾತ್ರೆಯ ಕುರಿತು ಮಾಹಿತಿ ನೀಡಬೇಕು. ಈ ಫಾರ್ಮ್ ಮೂಲಕ ಅವರು ತಮ್ಮ ಯಾತ್ರೆಗೆ ಹೋಗಿ ಬಂದಿದ್ದರ ವಿವರ ಹೇಳಬೇಕು. ಒಂದು ವೇಳೆ ನೌಕರರು ನೀಡಿದ ಮಾಹಿತಿ ತಪ್ಪು ಕಂಡು ಬಂದಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದು.
ಇದನ್ನು ಓದಿ - 7th Pay commission : ಡಿಎ ಸೇರಿಸಿದರೆ ಸರ್ಕಾರಿ ನೌಕರರಿಗೆ ಸಂಬಳ ಎಷ್ಟಾಗುತ್ತೆ, ಗೊತ್ತಾ.?
ಈ ನಿಯಮದ ಅಡಿ ಕ್ರಮ ಕೈಗೊಳ್ಳಲಾಗುವುದು
ಸೆಂಟ್ರಲ್ ಸಿವಿಲ್ ಸರ್ವಿಸ್ ರೂಲ್ಸ್ 1965ರ ಅಡಿ ನೌಕರರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಇದರಲ್ಲಿ ಶಿಸ್ತು ಕ್ರಮದ ಜೊತೆಗೆ ಭಾರಿ ದಂಡದ ಉಲ್ಲೇಖ ಕೂಡ ಮಾಡಲಾಗಿದೆ.
ಇದನ್ನು ಓದಿ - 7th Pay Commission: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.