MDH Masala : ಭಾರತವನ್ನು ಮಸಾಲೆಗಳ ದೇಶ ಎಂದು ಕರೆಯಲಾಗುತ್ತದೆ.  ಆದರೆ ಈ ದಿನಗಳಲ್ಲಿ ಭಾರತದ ಎರಡು ಮಸಾಲೆ ಕಂಪನಿಗಳು  ಭಾರೀ ಸುದ್ದಿಯಲ್ಲಿದೆ. ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಯನ್ನು ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ನಿಷೇಧಿಸಲಾಗಿದೆ.ಈ ಕಂಪನಿಗಳ ಕೆಲವು ಮಸಾಲೆಗಳಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಪಾಯಕಾರಿ ಕೀಟನಾಶಕಗಳು ಕಂಡುಬಂದಿವೆ ಎಂದು ಆರೋಪಿಸಲಾಗಿದೆ. ನಂತರ ಈ ಎರಡೂ ದೇಶಗಳಲ್ಲಿ MDH ಮತ್ತು ಎವರೆಸ್ಟ್ ಮಸಾಲೆಗಳ ಮಾರಾಟವನ್ನು ನಿಷೇಧಿಸಲಾಯಿತು. ಈ ಸುದ್ದಿಯ ಬೆನ್ನಲ್ಲೇ ಅಮೆರಿಕದ ಆಹಾರ ಸಂಸ್ಥೆ USFDI ಕೂಡಾ ಈ ಮಸಾಲೆಗಳ ತನಿಖೆ ನಡೆಸಿದೆ. ಅಮೆರಿಕದಲ್ಲಿಯೂ ಭಾರತೀಯ ಮಸಾಲೆ ಕಂಪನಿಗೆ ಹಿನ್ನೆಡೆಯಾಗಿದೆ.


COMMERCIAL BREAK
SCROLL TO CONTINUE READING

ಭಾರತೀಯ ಮಸಾಲೆ ತಯಾರಕ ಎಂಡಿಎಚ್‌ ಗೆ ಅಮೆರಿಕಾದಲ್ಲಿಯೂ ಶಾಕ್ ಸಿಕ್ಕಿದೆ. MDH ರಫ್ತು ಮಾಡಿದ ಮಸಾಲೆಗಳ  ಶಿಪ್ ಮೆಂಟ್ ಅನ್ನು  ನಿರಾಕರಿಸಲಾಗಿದೆ. US ಆಹಾರ ಸುರಕ್ಷತೆ ನಿಯಂತ್ರಕವು ಆರು ತಿಂಗಳಲ್ಲಿ MDH ರಫ್ತು ಮಾಡಿದ ಎಲ್ಲಾ ಮಸಾಲೆಗಳಲ್ಲಿ 31 ಪ್ರತಿಶತವನ್ನು ತಿರಸ್ಕರಿಸಿದೆ. ಅಕ್ಟೋಬರ್ 2023ರಲ್ಲಿ, MDH ನ ಎಲ್ಲಾ ಸಾಗಣೆಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು, ಅಂದರೆ 11  ಶಿಪ್ಪಿಂಗ್ ಅನ್ನು ಅಮೆರಿಕಾ ತಿರಸ್ಜರಿಸಿದೆ. 


ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನದ ದರ ಹೆಚ್ಚಳ: ಬೆಳ್ಳಿಯ ಬೆಲೆ ಕುಸಿತ!


ವರದಿಯ ಪ್ರಕಾರ,ತಿರಸ್ಕರಿಸಿದ ಶಿಪ್ಪಿಂಗ್ ಸಾಲ್ಮೊನೆಲ್ಲಾ ಮಾಲಿನ್ಯದಿಂದ ಕಲುಷಿತಗೊಂಡಿವೆ.ಸಾಲ್ಮೊನೆಲ್ಲಾ  ಕಂಟ್ಯಾಮಿನೆಶನ್  ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಇದರ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.ಈ ಕಾರಣದಿಂದಾಗಿ, ಕರುಳಿನ ಸೋಂಕು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಬ್ಯಾಕ್ಟೀರಿಯಾದಿಂದ ಟೈಫಾಯಿಡ್ ಸಂಭವಿಸುತ್ತದೆ.ತಜ್ಞರ ಪ್ರಕಾರ, ಕೊಯ್ಲು ಮಾಡುವುದರಿಂದ ಹಿಡಿದು ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ವರೆಗೆ  ವ್ಯಾಲ್ಯೂ ಚೈನ್ ಅನ್ನು  ಸರಿಯಾಗಿ ನಿರ್ವಹಿಸದಿದ್ದರೆ, ಸಾಲ್ಮೊನೆಲ್ಲಾ ಬ್ಯಾಕ್ಟೀರಿದಿಂದ ಬಚಾವ್ ಆಗುವುದು ಸಾಧ್ಯವಿಲ್ಲ. ವರದಿಯ ಪ್ರಕಾರ, ಅಮೆರಿಕದ ಎಫ್‌ಡಿಐ ಜನವರಿ 2022 ರಲ್ಲಿ ಎಂಡಿಎಚ್‌ನ ಉತ್ಪಾದನಾ ಘಟಕವನ್ನು ಪರಿಶೀಲಿಸಿತ್ತು. ಆ ಸಂದರ್ಭದಲ್ಲಿ  ಘಟಕದಲ್ಲಿ ಸ್ವಚ್ಛತೆ ಕಾಪಾಡದಿರುವ ಅಂಶ ಬೆಳಕಿಗೆ ಬಂದಿತ್ತು. 


ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಭಾರತೀಯ ಮಸಾಲೆಗಳ ಮೇಲೆ ಬಿಕ್ಕಟ್ಟು ಹೆಚ್ಚುತ್ತಿದೆ. ಮಸಾಲೆ ಕಂಪನಿಗಳ ಆತಂಕವೂ ಹೆಚ್ಚುತ್ತಿದೆ.ಕಂಪನಿಯ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ, MDH ಅದರ ಮಸಾಲೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದರು. ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಿಯಂತ್ರಕರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಕಂಪನಿ ಹೇಳಿದೆ. 


ಇದನ್ನೂ ಓದಿ : ಕೈಗೆಟಕುವ ದರದಲ್ಲಿ ಎಸಿ,ಫ್ರಿಡ್ಜ್,ಟಿವಿ,ವಾಷಿಂಗ್ ಮೆಷಿನ್!ಆರಂಭವಾಗಿದೆ ಮುಖೇಶ್ ಅಂಬಾನಿಯ ಹೊಸ ಬಿಸಿನೆಸ್!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.