Udyami Bharat: ಸಣ್ಣ ಉದ್ಯಮಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಅಗತ್ಯ ನೀತಿ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ MSME ವಲಯಕ್ಕೆ ಈ ಭರವಸೆಯನ್ನು ನೀಡಿರುವ ಪ್ರಧಾನಿ ಮೋದಿ,  ಸರ್ಕಾರದ 'ಆತ್ಮನಿರ್ಭರ ಭಾರತ್' ಉಪಕ್ರಮದಲ್ಲಿ ಎಂಎಸ್‌ಎಂಇ ವಲಯದ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ಅವರು ಹೇಳಿದ್ದಾರೆ. 'ಉದ್ಯಮಿ ಭಾರತ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು, ಈ ಸಂದರ್ಭದಲ್ಲಿ ಸರ್ಕಾರಕ್ಕೆ ತಮ್ಮ ಸರಕುಗಳನ್ನು ಪೂರೈಸಲು ಉದ್ಯಮಿಗಳು ಜಿಇಎಂ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ಹೊಂದಾಯಿಸಿಕೊಳ್ಳಬೇಕು ಎಂದು ಅವರು ಆಹ್ವಾನಿಸಿದ್ದಾರೆ.


COMMERCIAL BREAK
SCROLL TO CONTINUE READING

GeM ಪೋರ್ಟಲ್‌ನಲ್ಲಿ ನೋಂದಣಿಗೆ ಸಿಗಲಿದೆ ಬಲ 
ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಎಂಎಸ್‌ಎಂಇಗಳ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಕಳೆದ 8 ವರ್ಷಗಳಲ್ಲಿ ಆತ್ಮನಿರ್ಭರ ಭಾರತವನ್ನು ರೂಪಿಸುವಲ್ಲಿ MSME ವಲಯವು ಪ್ರಮುಖ ಪಾತ್ರ ವಹಿಸಿದೆ. ಮುಂದಿನ ವಾರದ ವೇಳೆಗೆ ಜಿಇಎಂ ಪೋರ್ಟಲ್‌ನಲ್ಲಿ 1 ಕೋಟಿ ಹೊಸ ನೋಂದಣಿಗಳನ್ನು ನೋಡಲು ನಾನು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


MSME ಬಜೆಟ್ ಶೇ.650ಕ್ಕಿಂತ ಹೆಚ್ಚಾಗಿದೆ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯವನ್ನು ಬಲಪಡಿಸಲು ಕಳೆದ ಎಂಟು ವರ್ಷಗಳಲ್ಲಿ ಸರ್ಕಾರವು ತನ್ನ ಬಜೆಟ್ ಅನ್ನು ಶೇ. 650 ಕ್ಕಿಂತ ಹೆಚ್ಚು ಹೆಚ್ಚಿಸಿದೆ ಎಂದು ಮೋದಿ ಹೇಳಿದ್ದಾರೆ.


ಸರ್ಕಾರ ಸಹಾಯ ಮಾಡುತ್ತಿದೆ
ಯಾವುದೇ ಉದ್ಯಮ ಬೆಳೆಯಲು, ವಿಸ್ತರಿಸಲು ಬಯಸಿದರೆ, ತಮ್ಮ ಸರ್ಕಾರ ಅದನ್ನು ಬೆಂಬಲಿಸುವುದರ ಜೊತೆಗೆ ತನ್ನ ನೀತಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಸಹ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.


ಖಾದಿ ಮತ್ತು ಗ್ರಾಮೋದ್ಯೋಗದ ವಹಿವಾಟು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ಗಡಿ ದಾಟಿದ್ದು, ಕಳೆದ ಎಂಟು ವರ್ಷಗಳಲ್ಲಿ ಖಾದಿ ಮಾರಾಟ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ-Ration Card: ರೇಶನ್ ಕಾರ್ಡ್ ಧಾರಕರಿಗೆ ಬಿಗ್ ಶಾಕ್! ಸರ್ಕಾರದಿಂದ ಬೆಚ್ಚಿಬೀಳಿಸುವ ನಿರ್ಧಾರ


6000 ಕೋಟಿ ಯೋಜನೆ ಘೋಷಣೆ
ಇದಕ್ಕೂ ಮೊದಲು, ಮೋದಿ ಅವರು 6,000 ಕೋಟಿ ರೂ.ಗಳ 'Rising and Accelerating MSME Performance' (RAMP) ಯೋಜನೆಗೆ ಚಾಲನೆ ನೀಡಿದ್ದಾರೆ ಮತ್ತು ಉತ್ಪನ್ನಗಳು ಮತ್ತು ಸೇವೆಗಳ ರಫ್ತುಗಳನ್ನು ಉತ್ತೇಜಿಸಲು ಎಂಎಸ್‌ಎಂಇ ರಫ್ತುದಾರರ (ಸಿಬಿಎಫ್‌ಟಿಇ) ಮೊದಲ ಸಾಮರ್ಥ್ಯದ ನಿರ್ಮಾಣ ಯೋಜನೆಯನ್ನು ಆರಂಭಿಸಿದ್ದಾರೆ.


ಇದನ್ನೂ ಓದಿ-24-06-2022 Today Vegetable Price: ಇಂದು ತರಕಾರಿ-ಹಣ್ಣಿನ ಬೆಲೆ ಹೀಗಿದೆ


ಪ್ರಧಾನಮಂತ್ರಿಯವರ ರೋಜಗಾರ್ ಸೃಜನ್' ಕಾರ್ಯಕ್ರಮದ (ಪಿಎಂಇಜಿಪಿ) ಹೊಸ ಆಯಾಮಗಳಿಗೂ ಕೂಡ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.  ಉತ್ಪಾದನಾ ವಲಯದ ಗರಿಷ್ಠ ಯೋಜನಾ ವೆಚ್ಚವನ್ನು 50 ಲಕ್ಷ (25 ಲಕ್ಷದಿಂದ) ಮತ್ತು ಸೇವಾ ವೆಚ್ಚವನ್ನು 20 ಲಕ್ಷ (ರೂ. 10 ಲಕ್ಷದಿಂದ) ರೂ.ಗಳ ಹೆಚ್ಚಳ ಇದರಲ್ಲಿ ಶಾಮೀಲಾಗಿವೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ