Ugadi: ಹೂವು-ಹಣ್ಣುಗಳ ದರದಲ್ಲಿ ಕೊಂಚ ಏರಿಕೆ- ಆದ್ರೂ ಯುಗಾದಿ ಸಂಭ್ರಮಕ್ಕಿಲ್ಲ ಅಡ್ಡಿ
ಕೋವಿಡ್-19 ಹಿನ್ನಲೆಯಲ್ಲಿ ಕಳೆದೆರಡು ಎರಡು ವರ್ಷದಿಂದ ಹಬ್ಬ ಆಚರಿಸದ ಜನರಲ್ಲಿ ಈ ಬಾರಿ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ.
ಬೆಂಗಳೂರು: ಯುಗಾದಿ ಸಂಭ್ರಮ ಪ್ರತೀ ಮನೆಮನೆಯಲ್ಲಿ ಮನೆ ಮಾಡಿದೆ. ಬಗೆಬಗೆಯ ಅಡುಗೆಗೆ ತರಕಾರಿ, ಹಣ್ಣು, ಯುಗಾದಿ ಪೂಜೆಯ ಪರಿಕರ ಕೊಳ್ಳಲು ಕೆ.ಆರ್ ಮಾರುಕಟ್ಟೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ.
ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಇಂದು ಹೂವು ಹಣ್ಣುಗಳ ಬೆಲೆಯಲ್ಲಿ (Flower-Fruits Price) ಕೊಂಚ ಏರಿಕೆ ಕಂಡುಬಂದಿದೆ. ಹಣ್ಣುಗಳಲ್ಲಿ 20-30 ರೂಪಾಯಿ ಏರಿಕೆ ಆಗಿದ್ದರೆ, ಹೂವುಗಳಲ್ಲಿ 10-20 ರೂ. ಏರಿಕೆಯಾಗಿದೆ. ಆದರೂ ಕಳೆದ ಎರಡು ವರ್ಷಗಳಿಂದ ಕರೋನಾವೈರಸ್ ಭೀತಿಯಿಂದಾಗಿ ಮಂಕಾಗಿದ್ದ ಯುಗಾದಿ ಸಂಭ್ರಮ ಈ ವರ್ಷ ಮತ್ತೆ ಕಳೆಕಟ್ಟಿದೆ.
ಇದನ್ನೂ ಓದಿ- Ugadi: ಯುಗಾದಿ ಹಬ್ಬದ ಪ್ರಯುಕ್ತ ಪ್ರಸಿದ್ಧ ಘಾಟಿ ದೇವಾಲಯಲಕ್ಕೆ ಹೂವಿನ ಅಲಂಕಾರ
ಇಂದಿನ ಹೂವುಗಳ ಬೆಲೆ :
- ಮಲ್ಲಿಗೆ ಮೊಗ್ಗು ₹200/kg
- ಸೇವಂತಿಗೆ ₹140/kg
- ಕನಕಾಂಬರ ₹300/kg
- ಸುಗಂಧರಾಜ ₹60/kg
- ಗುಲಾಬಿ ₹100/kg
- ಚೆಂಡು ಹೂವು ₹40/kg
ಇಂದಿನ ಹಣ್ಣುಗಳ ಬೆಲೆ (ಪ್ರತಿ ಕೆಜಿಗೆ) :
- ಸೇಬು (Apple) ₹160
- ದಾಳಿಂಬೆ ₹250
- ಮೂಸಂಬಿ ₹ 100
- ಆರೆಂಜ್ ₹ 120
- ಸಪೋಟ ₹ 100
- ಸೀಬೆಹಣ್ಣು₹120
- ಏಲಕ್ಕಿ ಬಾಳೆಹಣ್ಣು ₹70
- ದ್ರಾಕ್ಷಿ ₹100-120
ಇದನ್ನೂ ಓದಿ- Daily Horoscope: ಶನಿವಾರ ಈ ರಾಶಿ ಜನ ಅಪರಿಚಿತರಿಂದ ಎಚ್ಚರದಿಂದಿರಿ, ಇಲ್ಲದಿದ್ದರೆ ನಷ್ಟ!
ಯುಗಾದಿ ಅಗತ್ಯ ವಸ್ತುಗಳ ಬೆಲೆ :
- ಮಾವಿನ ಎಲೆ ₹10 - ಕಟ್ಟು
- ಬೇವಿನ ಸೊಪ್ಪು ₹20 - ಕಟ್ಟು
- ತುಳಸಿ ತೋರಣ ₹ 50 - ಮಾರು
- ಬೆಲ್ಲ (ಅಚ್ಚು / ಉಂಡೆ) kg ₹50 - 60
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.