UIDAI ಜಾರಿಗೊಳಿಸಿದೆ ಹೊಸ ಆದೇಶ.! ಪಾಲಿಸದಿದ್ದಲ್ಲಿ ತೆರಬೇಕಾಗುತ್ತದೆ 10 ಸಾವಿರ ರೂಪಾಯಿ ದಂಡ
ಯಾವುದೇ ಏಜೆನ್ಸಿ ಆಧಾರ್ ಅಪ್ಡೇಟ್ ಮಾಡಲು ಹೆಚ್ಚುವರಿ ಶುಲ್ಕ ವಿಧಿಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುಐಡಿಎಐ ಟ್ವೀಟ್ ಮೂಲಕ ತಿಳಿಸಿದೆ.
ಬೆಂಗಳೂರು : ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ಆದೇಶ ಹೊರಬಿದ್ದಿದೆ. ಈ ಆದೇಶವನ್ನು ಪಾಲಿಸದಿದ್ದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಆಧಾರ್ ಅಪ್ಡೇಟ್ ಮಾಡಲು ನಿಮ್ಮಿಂದ ಯಾರಾದರೂ ಯಾವುದೇ ರೀತಿಯ ಶುಲ್ಕವನ್ನು ಕೇಳಿದರೆ, ಇದಕ್ಕಾಗಿ ಒಂದು ನಂಬರ್ ಅನ್ನು ಜಾರಿ ಮಾಡಲಾಗಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿದ ಯುಐಡಿಎಐ :
ಯಾವುದೇ ಏಜೆನ್ಸಿ ಆಧಾರ್ ಅಪ್ಡೇಟ್ ಮಾಡಲು ಹೆಚ್ಚುವರಿ ಶುಲ್ಕ ವಿಧಿಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುಐಡಿಎಐ ಟ್ವೀಟ್ ಮೂಲಕ ತಿಳಿಸಿದೆ. ಇದಕ್ಕಾಗಿ ಆಧಾರ್ ಬಳಕೆದಾರರು 1947 ಗೆ ಕರೆ ಮಾಡಬಹುದು.
ಇದನ್ನೂ ಓದಿ : 500 ರೂಪಾಯಿಯ ಬಗ್ಗೆ RBI ನೀಡಿದ ಮಹತ್ವದ ಸುದ್ದಿ .! ನಿಮಗೂ ತಿಳಿದಿರಲಿ
ಯಾವುದೇ ಕೆಲಸಗಳಾಗಬೇಕಾದರೂ ಈಗ ಆಧಾರ್ ಪ್ರಮುಖವಾಗಿ ಬೇಕಾಗಿರುವ ದಾಖಲೆಯಾಗಿದೆ. ಹೀಗಾಗಿ ಎಲ್ಲಾ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳಿಗೂ ಆಧಾರ್ ಅನ್ನು ಲಿಂಕ್ ಮಾಡಬೇಕಾಗುತ್ತದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಕೂಡಾ ಟ್ವೀಟ್ ಮಾಡಿ, ಮಾಹಿತಿ ನೀಡಿದೆ. ಇನ್ನು ಮಾರ್ಚ್ 31, 2023 ರೊಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಪ್ಯಾನ್ ಆಧಾರ್ ಲಿಂಕ್ ಮಾಡದೆ ಹೋದರೆ ಪ್ಯಾನ್ ನಿಷ್ಕ್ರಿಯವಾಗುತ್ತದೆ.
ನೀಡಬೇಕಾಗುತ್ತದೆ 10,000 ರೂಪಾಯಿ ದಂಡ :
ಮಾರ್ಚ್ 31, 2023 ರವರೆಗೆ, ನೀವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು. ಈ ಎರಡು ದಾಖಲೆಗಳನ್ನು ಲಿಂಕ್ ಮಾಡದೆ ಹೋದರೆ ಪ್ಯಾನ್ ನಿಷ್ಕ್ರಿಯವಾಗುತ್ತದೆ. ಒಮ್ಮೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ನಂತರ ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ನಿಷ್ಕ್ರಿಯವಾದ ಪ್ಯಾನ್ ಕಾರ್ಡ್ ಅನ್ನು ಬಳಸಿದರೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 272B ಅಡಿಯಲ್ಲಿ 10,000 ರೂ.ವರೆಗೆ ದಂಡ ವಿಧಿಸಬಹುದು.
ಇದನ್ನೂ ಓದಿ : ವಿಶ್ವದಲ್ಲೇ ಇದೇ ಮೊದಲು: ಈ ಎಟಿಎಂನಿಂದ ಹಣ ಅಲ್ಲ, ಚಿನ್ನದ ನಾಣ್ಯ ಹೊರಬರುತ್ತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.