ಆಧಾರ್ ಅಪ್ಡೇಟ್: ಪ್ರಸ್ತುತ ಯಾವುದೇ ಪ್ರಮುಖ ಕೆಲಸಗಳಿಗೆ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆ ಆಗಿದೆ. ಒಂದು ಸಿಮ್ ಕೊಳ್ಳುವುದರಿಂದ ಹಿಡಿದು, ಬ್ಯಾಂಕಿಂಗ್, ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯ. ಅಲ್ಲದೆ, ಆಧಾರ್ ಕಾರ್ಡ್‌ನಲ್ಲಿ ನೀಡಿರುವ ಮಾಹಿತಿಯಲ್ಲಿ ಏನಾದರೂ ಬದಲಾವಣೆಗಳಿದ್ದರೆ ನಾವು ಅದನ್ನು ಆಗಾಗ್ಗೆ ನವೀಕರಿಸುವುದು ಸಹ ಬಹಳ ಮುಖ್ಯ. ಆಧಾರ್ ಕಾರ್ಡ್ ಒದಗಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಕಾಲಕಾಲಕ್ಕೆ ಆಧಾರ್‌ಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ನವೀಕರಣಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ಯುಐಡಿಎಐ ಆಧಾರ್‌ಗೆ ಸಂಬಂಧಿಸಿದ ಹೊಸ ನವೀಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಆಧಾರ್ ವಂಚನೆಗೆ ಕಡಿವಾಣ ಹಾಕಲು ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಆಧಾರ್ ವಂಚನೆಗೆ ಕಡಿವಾಣ ಹಾಕಲು ಯುಐಡಿಎಐ  ಹೊಸ ಪ್ಲಾನ್ :
ಆಧಾರ್ ವಂಚನೆಗೆ ಕಡಿವಾಣ ಹಾಕಲು ನಿಟ್ಟಿನಲ್ಲಿ ಯುಐಡಿಎಐ ವ್ಯಕ್ತಿಯ ಜನನದಿಂದ ಮರಣದವರೆಗಿನ ಎಲ್ಲಾ ಪ್ರಮುಖ ಮಾಹಿತಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನಿರ್ಧರಿಸಿದೆ. ಇದರ ಅಡಿಯಲ್ಲಿ, ಈಗ ನವಜಾತ ಶಿಶುವಿಗೆ ತಾತ್ಕಾಲಿಕ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ, ನಂತರ ಅದನ್ನು ಬಯೋಮೆಟ್ರಿಕ್ ಡೇಟಾದೊಂದಿಗೆ ನವೀಕರಿಸಲಾಗುತ್ತದೆ. ಅಷ್ಟೇ ಅಲ್ಲ, ಸಾವಿನ ನೋಂದಣಿ ದಾಖಲೆಯನ್ನೂ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುವುದು, ಇದರಿಂದ ಆಧಾರ್ ದುರ್ಬಳಕೆಯನ್ನು ತಡೆಯಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- Changes In Voter ID: ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಸುಲಭ ವಿಧಾನ


ಈ ಕುರಿತಂತೆ ಮಾಹಿತಿ ನೀಡಿರುವ ಯುಐಡಿಎಐ ಅಧಿಕಾರಿಯೊಬ್ಬರು, 'ಜನನದ ಜೊತೆಗೆ ಆಧಾರ್ ಸಂಖ್ಯೆಯನ್ನು ನೀಡುವುದರಿಂದ ಮಗು ಮತ್ತು ಕುಟುಂಬವು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಈ ಕಾರಣದಿಂದಾಗಿ, ಸಾಮಾಜಿಕ ಭದ್ರತೆಯ ಪ್ರಯೋಜನಗಳಿಂದ ಯಾರೂ ವಂಚಿತರಾಗುವುದಿಲ್ಲ. ಅಂತೆಯೇ, ಯಾವುದೇ ವ್ಯಕ್ತಿಯ ಮರಣದ ಸಂದರ್ಭದಲ್ಲಿ ಆ ಮಾಹಿತಿಯನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯ ದುರುಪಯೋಗವನ್ನು ತಡೆಯಬಹುದು ಎಂದಿದ್ದಾರೆ.


ಇದನ್ನೂ ಓದಿ- Aadhaar Card Validity: ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳಂತೆ ಆಧಾರ್ ಕಾರ್ಡ್‌ಗೂ ಇದೆ ಎಕ್ಸ್‌ಪೈರಿ ಡೇಟ್


ಜೀರೋ ಆಧಾರ್ ಹಂಚಿಕೆ ಮಾಡಲು ಮುಂದಾದ ಯುಐಡಿಎಐ:
ಯುಐಡಿಎಐ ಗ್ರಾಹಕರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಹೊಸ ಹೊಸ ನವೀಕರಣಗಳನ್ನು ನೀಡುತ್ತಲೇ ಇಡುತ್ತದೆ. ಇದೀಗ ಯುಎಐಡಿಎಐ ಜೀರೋ ಆಧಾರ್ ಹಂಚಿಕೆ ಮಾಡಲು ಮುಂದಾಗಿದೆ. ಇದರೊಂದಿಗೆ ನಕಲಿ ಆಧಾರ್ ಸಂಖ್ಯೆ ಸೃಷ್ಟಿಯಾಗುವುದಿಲ್ಲ ಅಂದರೆ ಯಾವುದೇ ರೀತಿಯ ಫೋರ್ಜರಿ ಆಗುವುದಿಲ್ಲ. ಇದರ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಆಧಾರ್ ಸಂಖ್ಯೆಗಳನ್ನು ನೀಡಲಾಗುವುದಿಲ್ಲ. ಜನನ, ವಾಸಸ್ಥಳ ಅಥವಾ ಆದಾಯದ ಯಾವುದೇ ಪುರಾವೆಗಳಿಲ್ಲದ ಅಂತಹ ಜನರಿಗೆ ಶೂನ್ಯ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ಆಧಾರ್ ಪರಿಚಯಕಾರರು ಅಂತಹ ವ್ಯಕ್ತಿಯನ್ನು ಆಧಾರ್ ಇಕೋ ಸಿಸ್ಟಂಗೆ ಎಲೆಕ್ಟ್ರಾನಿಕ್ ಚಿಹ್ನೆಯ ಮೂಲಕ ಪರಿಚಯಿಸುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.