ನವದೆಹಲಿ: PM Shram Yogi Mandhan Yojana- ವೃದ್ಧಾಪ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ಬೆಂಬಲಿಸಲು ಪ್ರಧಾನಿ ಶ್ರಮ ಯೋಗಿ ಮನ್-ಧನ್ ಯೋಜನೆಯನ್ನು ಭಾರತ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯಡಿ ಈವರೆಗೆ 44.90 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ನೋಂದಾಯಿಸಲಾಗಿದೆ.


COMMERCIAL BREAK
SCROLL TO CONTINUE READING

ಅಸಂಘಟಿತ ವಲಯದ ಕಾರ್ಮಿಕರಿಗೆ ರಕ್ಷಣೆ ನೀಡಲು ಸರ್ಕಾರ 60 ವರ್ಷ ತುಂಬಿದ ನಂತರ  ಪ್ರಧಾನಿ ಶ್ರಮ ಯೋಗಿ  ಮನ್-ಧನ್ ಯೋಜನೆಯಲ್ಲಿ ಫಲಾನುಭವಿಗಳಿಗೆ ತಿಂಗಳಿಗೆ ಕನಿಷ್ಠ 3000 ರೂ.ಗಳ ಪಿಂಚಣಿ ನೀಡುವುದಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. 2019 ರ ಮಾರ್ಚ್‌ನಲ್ಲಿ ಮನ್-ಧನ್ ಯೋಜನೆ (PM Shram Yogi Mandhan Yojana) ಅನ್ನು ಪ್ರಾರಂಭಿಸಲಾಯಿತು.


ಈ ಯೋಜನೆಯಡಿ, ಮಾರ್ಚ್ 4, 2021 ರ ಹೊತ್ತಿಗೆ ಸುಮಾರು 44.90 ಲಕ್ಷ ಕಾರ್ಮಿಕರು ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯು 18-40 ವರ್ಷಗಳ ಗುಂಪಿನ ಕಾರ್ಮಿಕರನ್ನು ಒಳಗೊಳ್ಳಬಹುದು. ನೆನಪಿಡಿ ಅವರ ಮಾಸಿಕ ಆದಾಯವು 15,000 ರೂ.ಗಿಂತ ಕಡಿಮೆ ಇರಬೇಕು.


ಇದನ್ನೂ ಓದಿ - PF ಖಾತೆಯಲ್ಲಿ ಆರಂಭವಾಗಿದೆ ಈ ಆನ್‌ಲೈನ್ ಸೌಲಭ್ಯ


ಎಷ್ಟು ಪಿಂಚಣಿ ಪಡೆಯಲಾಗುವುದು?
ಪಿಎಂ-ಎಸ್‌ವೈಎಂ (PM-SYM) ಯೋಜನೆಯಡಿ ಕಾರ್ಮಿಕರು ವಿವಿಧ ವಯಸ್ಸಿನ ಪ್ರಕಾರ ವಿಭಿನ್ನ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಡಿ ತಿಂಗಳಿಗೆ 55 ರಿಂದ 200 ರೂಪಾಯಿ ಹೂಡಿಕೆ ಮಾಡಬಹುದು.


ಪಿಎಂ ಶ್ರಮ-ಯೋಗಿ ಮಂದನ್/ಮನ್-ಧನ್ ಯೋಜನೆಯಲ್ಲಿ 18 ನೇ ವಯಸ್ಸಿನಲ್ಲಿ ಅರ್ಜಿ ಸಲ್ಲಿಸುವವರು ಪ್ರತಿ ತಿಂಗಳು 55 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 30 ನೇ ವಯಸ್ಸಿನಲ್ಲಿ ಅರ್ಜಿ ಸಲ್ಲಿಸುವವರು 100 ರೂಪಾಯಿ ಮತ್ತು 40 ವರ್ಷ ವಯಸ್ಸಿನಲ್ಲಿ ಅರ್ಜಿ ಸಲ್ಲಿಸುವವರು 200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.


ಒಬ್ಬ ಕಾರ್ಮಿಕನು ತನ್ನ 18 ನೇ ವಯಸ್ಸಿನಲ್ಲಿ ಪಿಎಂ-ಎಸ್‌ವೈಎಂ ಯೋಜನೆಯಲ್ಲಿ ತನ್ನನ್ನು ನೋಂದಾಯಿಸಿಕೊಂಡಿದ್ದರೆ, ಅವನು ಒಂದು ವರ್ಷದಲ್ಲಿ ಕೇವಲ 660 ರೂ. ಪಾವತಿಸುತ್ತಾನೆ. ಆ ಕೆಲಸಗಾರನು 60 ವರ್ಷ ವಯಸ್ಸಿನವರೆಗೆ 27,720 ರೂ. ಹೂಡಿಕೆ ಮಾಡುತ್ತಾರೆ. ಕಾರ್ಮಿಕರು 42 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. 60 ನೇ ವಯಸ್ಸಿನಲ್ಲಿ ಅವರು ಪ್ರತಿ ತಿಂಗಳು 3,000 ರೂಪಾಯಿಗಳನ್ನು ಪಡೆಯುತ್ತಾರೆ.


ಇದನ್ನೂ ಓದಿ - ಕೇಂದ್ರ ಸರ್ಕಾರದಿಂದ ಇಂತಹವರಿಗೆ ಸಿಗಲಿದೆ ವಾರ್ಷಿಕ ₹36,000 ಇದರ ಲಾಭ ಪಡೆಯುವುದು ಹೇಗೆಂದು ತಿಳಿಯಿರಿ


ಭಾರತ ಸರ್ಕಾರದ ಈ ಯೋಜನೆಯನ್ನು ಭಾರತ ಜೀವ ವಿಮಾ ನಿಗಮ (ಎಲ್‌ಐಸಿ) ಮೂಲಕ ನಡೆಸಲಾಗುತ್ತಿದೆ. ಆದ್ದರಿಂದ, ಎಲ್ಐಸಿ ಪಿಂಚಣಿ ಸಹ ಪಾವತಿಸುತ್ತದೆ.


ನೋಂದಾಯಿಸುವುದು ಹೇಗೆ (ಪಿಎಂ ಶ್ರಮ ಯೋಗಿ ಮಂದನ್ ನೋಂದಣಿ) :
ಪ್ರಧಾನ್ ಮಂತ್ರಿ ಶ್ರಮಯೋಗಿ ಮಾಂಧನ್ ಪಿಂಚಣಿ ಯೋಜನೆಯಲ್ಲಿ ನೋಂದಣಿಗಾಗಿ, ಕಾರ್ಮಿಕರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್‌ಬುಕ್ ತೆಗೆದುಕೊಂಡ ನಂತರ ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ ಕೇಂದ್ರ) ಹೋಗಿ ಖಾತೆ ತೆರೆಯಬೇಕಾಗುತ್ತದೆ. ಖಾತೆ ತೆರೆದ ನಂತರ, ಕಾರ್ಮಿಕನಿಗೆ ಶ್ರಮ ಯೋಗಿ ಕಾರ್ಡ್ ನೀಡಲಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು 1800-267-6888 ಸಹಾಯವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.