Union Budget 2022: ಶೀಘ್ರದಲ್ಲಿಯೇ 5G ಸೇವೆ ಆರಂಭ, ಗ್ರಾಮಗಳಿಗೂ ತಲುಪಲಿದೆ Optical Fiber
5G Mobile Service: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಇಂದು 2022-23ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಸಮಯದಲ್ಲಿ, ಅವರು ದೇಶದಲ್ಲಿ 5G ಮತ್ತು ಆಪ್ಟಿಕಲ್ ಫೈಬರ್ ಸೇವೆಗಳ ಕುರಿತು ಮಹತ್ವದ ಘೋಷಣೆಗಳನ್ನು ಮಾಡಿದ್ದರೆ. 2022-23ನೇ ಸಾಲಿನಲ್ಲಿ 5ಜಿ ಮೊಬೈಲ್ ಸೇವೆಗಳ ಸ್ಪೆಕ್ಟ್ರಮ್ (5G Spectrum Sale) ಅನ್ನು ಹರಾಜು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಇಂದು 2022-23ನೇ ಸಾಲಿನ ಬಜೆಟ್ (Budget 2022) ಮಂಡಿಸಿದ್ದಾರೆ. ಈ ಸಮಯದಲ್ಲಿ, ಅವರು ದೇಶದಲ್ಲಿ 5G ಮತ್ತು ಆಪ್ಟಿಕಲ್ ಫೈಬರ್ ಸೇವೆಗಳ ಕುರಿತು ಮಹತ್ವದ ಘೋಷಣೆಗಳನ್ನು ಮಾಡಿದ್ದರೆ. 2022-23ನೇ ಸಾಲಿನಲ್ಲಿ 5ಜಿ ಮೊಬೈಲ್ ಸೇವೆಗಳ ಸ್ಪೆಕ್ಟ್ರಮ್ (5G Spectrum Sale) ಅನ್ನು ಹರಾಜು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಇದರ ನಂತರ, ಖಾಸಗಿ ಟೆಲಿಕಾಂ ಕಂಪನಿಗಳು ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. 5G ಸೇವೆಯ ಪ್ರಾರಂಭದ ನಂತರ, ಬಳಕೆದಾರರು ತಮ್ಮ 5G ಸ್ಮಾರ್ಟ್‌ಫೋನ್ ಅನ್ನು ಉತ್ತಮವಾಗಿ ಬಳಸಲು ಸಾಧ್ಯವಾಗುತ್ತದೆ. ಅಲ್ಲದೆ, 5G ಆಗಮನದೊಂದಿಗೆ, ದೇಶಾದ್ಯಂತ ಇಂಟರ್ನೆಟ್ ಬಳಕೆದಾರರು ಹೆಚ್ಚಿನ ವೇಗದ ನೆಟ್ ಸರ್ಫಿಂಗ್ ಮತ್ತು ವೇಗದ ವೀಡಿಯೊ ಸ್ಟ್ರೀಮಿಂಗ್‌ನ ಸಂಪೂರ್ಣ ಹೊಸ ಅನುಭವವನ್ನು ಹೊಂದಲಿದ್ದಾರೆ ಎಂದು ಅವರು ಹೇಳಿದ್ದಾರೆ.
2025ರವರೆಗೆ ಎಲ್ಲ ಗ್ರಾಮಗಳಿಗೆ ತಲುಪಲಿದೆ ಆಪ್ಟಿಕಲ್ ಫೈಬರ್
2025 ರ ವೇಳೆಗೆ ದೇಶದ ಎಲ್ಲಾ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ತಲುಪಲಿದೆ ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಎಲ್ಲಾ ಗ್ರಾಮಗಳಲ್ಲಿ ನಿಗದಿತ ಮಿತಿಯವರೆಗೆ ಆಪ್ಟಿಕಲ್ ಫೈಬರ್ ಒದಗಿಸಲು PPP ಅಂದರೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಗುತ್ತಿಗೆಗಳನ್ನು ನೀಡಲಾಗುವುದು. ಆಪ್ಟಿಕಲ್ ಫೈಬರ್‌ನ ಆಗಮನವು ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ದೇಶದ ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಒದಗಿಸುವ ಗುರಿ ಸರ್ಕಾರದ 'ಭಾರತ್ ನೆಟ್ ಯೋಜನೆಯ' ಭಾಗವಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ.
ಇದನ್ನೂ ಓದಿ-Union Budget 2022: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಅವಧಿ ಎಷ್ಟು..?
ಶೀಘ್ರದಲ್ಲಿಯೇ 5ಜಿ ಸೇವೆ ಆರಂಭ ಮಾಡುವ ಜವಾಬ್ದಾರಿ ಈ ಕಂಪನಿಗಳ ಮೇಲಿದೆ
ದೇಶದಲ್ಲಿ ಸಾಧ್ಯವಾದಷ್ಟು ಬೇಗ 5G ಸೇವೆಯನ್ನು ಪ್ರಾರಂಭಿಸುವ ಜವಾಬ್ದಾರಿಯು ಇದೀಗ ಟೆಲಿಕಾಂ ಕಂಪನಿಗಳಾದ - ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಮೇಲೆ ಇರಲಿದೆ. ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಕೈಗೆಟಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳನ್ನು ಒದಗಿಸಲು ಯೂನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್‌ನ ಶೇ.5ರಷ್ಟನ್ನು ಒದಗಿಸಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ-Budget 2022: ಈ ಬಾರಿಯ ಬಜೆಟ್ ನಲ್ಲಿ ಯಾವುದು ಅಗ್ಗ? ಯಾವುದು ದುಬಾರಿ?
ಎಲ್ಲಕ್ಕಿಂತ ಮೊದಲು ಈ ನಗರಗಳಲ್ಲಿ 5ಜಿ ಸೇವೆ ಆರಂಭ ಸಾಧ್ಯತೆ
ಈ ಹಿಂದೆ ಒಂದು ವರದಿಯಲ್ಲಿ, ದೇಶದ 13 ನಗರಗಳಲ್ಲಿ ಮೊದಲ 5G ಸೇವೆಯನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಸರ್ಕಾರ ಹೇಳಿತ್ತು. ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಟೆಲಿಕಾಂ ಸೇವಾ ಪೂರೈಕೆದಾರರು ಗುರುಗ್ರಾಮ್, ಬೆಂಗಳೂರು, ಕೋಲ್ಕತ್ತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಲಕ್ನೋ, ಪುಣೆ ಮತ್ತು ಗಾಂಧಿನಗರಗಳಲ್ಲಿ 5G ಟ್ರಯಲ್ ಸೈಟ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಟೆಲಿಕಾಂ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ, 5G ಸೇವೆಯು ಮೊದಲು 2022 ರಲ್ಲಿ ಪ್ರಾರಂಭವಾಗುತ್ತದೆ. ಇಲಾಖೆಯ ಪ್ರಕಾರ ಈ ಪರೀಕ್ಷಾ ಯೋಜನೆಗೆ 224 ಕೋಟಿ ರೂ.ವೆಚ್ಚ ಬಂದಿದೆ.
ಇದನ್ನೂ ಓದಿ-Budget 2022 : ಈ ಬಾರಿಯ ಬಜೆಟ್ ನ ಪ್ರಮುಖ ಘೋಷಣೆಗಳು ಇವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.