Union Budget 2024: ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ, ದ್ವಿಗುಣವಾಗಲಿದೆ ಈ ಸರ್ಕಾರಿ ಯೋಜನೆಯ ಮಿತಿ!
Budget 2024: ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸರ್ಕಾರ ಬಜೆಟ್‌ನಲ್ಲಿ ಒದಗಿಸಿರುವ ವಿಮಾ ರಕ್ಷಣೆಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಅಂದರೆ ರೂ.5 ಲಕ್ಷದ ವಿಮಾ ರಕ್ಷಣೆಯ ಮಿತಿಯನ್ನು ನೇರವಾಗಿ ರೂ.10 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ತಜ್ನರು ಅಭಿಪ್ರಾಯಪಟ್ಟಿದ್ದಾರೆ. (Business News In Kannada / Budget 2024 News In Kannada)
Budget 2024: ಸಂಪ್ರದಾಯದಂತೆ ಈ ವರ್ಷವೂ ಕೂಡ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆಸಲಾಗುವ ಹಲ್ವಾ ಸಮಾರಂಭ ಮುಗಿದಿದ್ದು, ಇದೀಗ ಬಜೆಟ್‌ನ ಮುದ್ರಣ ಕಾರ್ಯ ಆರಂಭವಾಗಿದೆ. 6 ದಿನಗಳ ನಂತರ ದೇಶದ ಬಜೆಟ್ ಮಂಡನೆಯಾಗಲಿದೆ. ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಬಡವರು, ರೈತರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ಈ ಬಾರಿಯ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಸರ್ಕಾರವು ಬಜೆಟ್‌ನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಒದಗಿಸಲಾದ ವಿಮಾ ರಕ್ಷಣೆಯ ಮಿತಿಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಪ್ರಸ್ತುತ ಈ ಯೋಜನೆಯಡಿ 5 ಲಕ್ಷ ರೂ. ಮಿತಿ ಇದೆ. (Business News In Kannada / Budget 2024 News In Kannada)
ಮಾಧ್ಯಮ ವರದಿಗಳ ಪ್ರಕಾರ, 2024 ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ವಿಮಾ ಮೊತ್ತವನ್ನು ದ್ವಿಗುಣಗೊಳಿಸಬಹುದು ಎನ್ನಲಾಗಿದೆ. ಅಂದರೆ ರೂ.5 ಲಕ್ಷದ ವಿಮಾ ರಕ್ಷಣೆಯ ಮಿತಿಯನ್ನು ನೇರವಾಗಿ ರೂ.10 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗಂಭೀರ ಕಾಯಿಲೆಗಳನ್ನು ಕವರ್ ಮಾಡುವ ಯೋಜನೆ
ಸುದ್ದಿ ಸಂಸ್ಥೆಯಿಂದ ಬಂದಿರುವ ಮಾಹಿತಿಯ ಪ್ರಕಾರ, ಈ ವಿಮೆಯಡಿಯಲ್ಲಿ ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳನ್ನು ಕವರ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ, ಇದರಿಂದ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಬಹುದು. 5 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳನ್ನು ಕವರ್ ಮಾಡಲು, ಸಚಿವಾಲಯವು ಮಿತಿಯನ್ನು ವರ್ಷಕ್ಕೆ 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಬಹುದು ಎನ್ನಲಾಗಿದೆ.
ಆರೋಗ್ಯ ಸಚಿವಾಲಯದಿಂದ ದೊರೆತ ಮಾಹಿತಿಯ ಪ್ರಕಾರ, ಪಿಎಂ ಜನ ಆರೋಗ್ಯ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ ಸುಮಾರು 100 ಕೋಟಿಗೆ ದ್ವಿಗುಣಗೊಂಡಿದೆ. ಇದರೊಂದಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕ ಜನರಿಗೆ ಈ ಯೋಜನೆಯ ಪ್ರಯೋಜನಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ-Cashless Everywhere Campaign: ನೀವೂ ಕೂಡ ಆರೋಗ್ಯ ವಿಮೆ ಪಾಲಸಿ ಹೊಂದಿದ್ದೀರಾ? ಈ ಸಂತಸದ ಸುದ್ದಿ ತಪ್ಪದೆ ಓದಿ!
ಯೋಜನೆಯನ್ನು 2018 ರಲ್ಲಿ ಆರಂಭಿಸಲಾಗಿದೆ
ಈ ಸರ್ಕಾರಿ ಯೋಜನೆಯನ್ನು ಕೇಂದ್ರ ಸರ್ಕಾರವು 23 ಸೆಪ್ಟೆಂಬರ್ 2018 ರಂದು ಆರಂಭಿಸಿದೆ. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ 5 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತದೆ. ಬಡ ವರ್ಗದವರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಶೇ.49 ರಷ್ಟು ಮಹಿಳೆಯರಿದ್ದಾರೆ ಮತ್ತು ಅವರು ಸುಮಾರು 14.6 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಇದೇ ವೇಳೆ, ಸುಮಾರು ಶೇ.48 ರಷ್ಟು ಮಹಿಳೆಯರು ಯೋಜನೆಯಡಿ ಚಿಕಿತ್ಸಾ ಸೌಲಭ್ಯಗಳನ್ನು ಪಡೆದಿದ್ದಾರೆ.
6.2 ಕೋಟಿ ಜನರು ದಾಖಲಾಗಿದ್ದಾರೆ
ಸಚಿವಾಲಯದಿಂದ ದೊರೆತ ಮಾಹಿತಿಯ ಪ್ರಕಾರ, ಈ ಯೋಜನೆ ಆರಂಭವಾದಾಗಿನಿಂದ, ಸುಮಾರು 6.2 ಕೋಟಿ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ, ಈ ಜನರ ಮೇಲೆ ಸುಮಾರು 74,157 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಲ್ಲದೇ ಈ ಯೋಜನೆಯಡಿ ಸುಮಾರು 1.25 ಕೋಟಿ ಉಳಿತಾಯವಾಗಿದೆ ಎಂದು ಸಚಿವಾಲಯ ಹೇಳಿಕೊಂಡಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ