Union Budget 2024: ದೇಶಾದ್ಯಂತದ ಈ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ ವಾರ್ಷಿಕ ₹12000 ಸಿಗುವ ನಿರೀಕ್ಷೆ!
Budget 2024: ಫೆಬ್ರುವರಿ 1, 2024 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ . ದೇಶದ ಅನ್ನದಾತರ ಸಮಸ್ಯೆ ಎಲ್ಲರಿಗೂ ತಿಳಿದಿದೆ. ಈ ಬಾರಿಯ ಬಜೆಟ್ ಮೇಲೆ ರೈತರೂ ಕೂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. (Business News In Kannada / Budget 2024 News In Kannada)
ನವದೆಹಲಿ: ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಹೆಚ್ಚಾಗುವ ಸಾದ್ಯತೆಯನ್ನು ವರ್ತಿಸಲಾಗಿದೆ. ಮಧ್ಯಂತರ ಬಜೆಟ್‌ನ ಪ್ರಮುಖ ಗಮನವು ಮಹಿಳಾ ರೈತರ ಮೇಲಿರಬಹುದು. ಮಹಿಳಾ ರೈತರ ಸಮ್ಮಾನ್ ನಿಧಿಯನ್ನು ದ್ವಿಗುಣವಾಗುವ ಸಾಧ್ಯತೆ ಇದೆ. ಇದಲ್ಲದೆ ಇತರರಿಗಿಂತ ಶೇ. 1 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಅವರಿಗೆ ಸಾಲ ಅಲ್ಭಿಸುವ ನಿರೀಕ್ಷೆ ಇದೆ. (Business News In Kannada / Budget 2024 News In Kannada)
ಈ ವರ್ಷ ಮಧ್ಯಂತರ ಬಜೆಟ್‌ನಲ್ಲಿ ರೈತರ ಮೇಲೆ ಕೇಂದ್ರ ಸರ್ಕಾರದ ಗಮನ
ಈ ಬಾರಿಯ ಬಜೆಟ್ ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅಡಿ ಪುರುಷ ರೈತರಿಗೆ ವಾರ್ಷಿಕ ರೂ. 9000 ಸಿಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ಪ್ರಸ್ತುತ, ಈ ಯೋಜನೆಯಡಿ, ಸರ್ಕಾರವು ಪ್ರತಿ ವರ್ಷ 6000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ. ಈ ಮೂಲಕ ರೈತರು ಇದೀಗ 3000 ರೂ.ಗಳ ಹೆಚ್ಚುವರಿ ಲಾಭವನ್ನು ಪಡೆಯಬಹುದು ಎನ್ನಲಾಗಿದೆ.
ಇದಲ್ಲದೆ ಮಹಿಳಾ ರೈತರಿಗೆ 12 ಸಾವಿರ ರೂ. ಸಮ್ಮಾನ್ ನಿಧಿ ಹೆಚ್ಚಿಸುವುದರಿಂದ ಸರ್ಕಾರದ ವೆಚ್ಚ ಹೆಚ್ಚಾಗುವುದಲ್ಲದೆ. ಮಹಿಳಾ ರೈತರ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಿದಂತಾಗುತ್ತದೆ.
ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಮಹಿಳಾ ರೈತರಿಗೆ ಮನ್ನಣೆ ನೀಡಲಿದೆ ಎನ್ನಲಾಗಿದೆ. ಮಹಿಳಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಆದ್ಯತೆ ನೀಡಲಾಗುವುದು. ಮಹಿಳಾ ರೈತರಿಗೆ ಇತರರಿಗಿಂತ ಶೇ.1 ರಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ಸಾಧಯ್ತೆ ಇದೆ. ಕೈಗೆಟಕುವ ದರದಲ್ಲಿ ರೈತರಿಗೆ ಜೀವ ವಿಮಾ ಯೋಜನೆಯೂ ಕೂಡ ಸರ್ಕಾರ ಮಹಿಳಾ ರೈತರಿಗೆ ಒದಗಿಸುವ ಸಾಧ್ಯತೆ ಇದೆ. ಕೃಷಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಆದ್ಯತೆಯ ಸಾಲವು ಸ್ಟಬಲ್ ನಿರ್ವಹಣೆಗೆ ವಿಶೇಷ ಪ್ರೋತ್ಸಾಹವನ್ನು ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ-Union Budget 2024: ಸ್ವತಂತ್ರ ಬಿಸ್ನೆಸ್ ಮಾಡುವವರಿಗೊಂದು ಭಾರಿ ದೊಡ್ಡ ಸಂತಸದ ಸುದ್ದಿ!
13ನೇ ಕಂತಿಗೆ ಕಾಯುತ್ತಿರುವ ಅನ್ನದಾತ
ಇದುವರೆಗೆ 12 ಕಂತುಗಳನ್ನು ಸರ್ಕಾರವು ಯೋಜನೆಯಡಿ ಬಿಡುಗಡೆ ಮಾಡಿದೆ. ಈಗ ರೈತರು 13ನೇ ಕಂತಿನ ಹಣ ವರ್ಗಾವಣೆಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ರೈತರು ಕೆವೈಸಿ ಕಡ್ಡಾಯವಾಗಿರುವುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Union Budget 2024: ಮಧ್ಯಂತರ ಬಜೆಟ್ ನಲ್ಲಿ 'ಮೋದಿ ಕಿ ಗ್ಯಾರಂಟಿ' ಝಲಕ್, ರೈತ-ಕಾರ್ಮಿಕರ ಮೇಲಿರಲಿದೆ ಮೇಜರ್ ಫೋಕಸ್!
ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಅವರಿಗಾಗಿ ಸರ್ಕಾರ ಕಾಲಕಾಲಕ್ಕೆ ಘೋಷಣೆಗಳನ್ನು ಮಾಡುತ್ತಲೇ ಇದೆ. ಈ ಹಿಂದೆ 2 ಹೆಕ್ಟೇರ್ ಜಮೀನು ಹೊಂದಿರುವ ರೈತರನ್ನು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದರು, ಆದರೆ ನಂತರ ಸರ್ಕಾರವು ಎಲ್ಲಾ ರೈತರಿಗೆ ಈ ಯೋಜನೆಯನ್ನು ವಿಸ್ತರಿಸಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.