ನವದೆಹಲಿ : ಈಗ ಪಡಿತರ ಚೀಟಿ (Ration Card)ಎಲ್ಲಾ ಕೆಲಸಗಳಿಗೂ ಬಹಳ ಮುಖ್ಯವಾದ ದಾಖಲೆಯಾಗಿದೆ. ಇದರ ಸಹಾಯದಿಂದ ಸರ್ಕಾರದಿಂದ ಉಚಿತ ಪಡಿತರವನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ಹಿಂದೆ, ವಿತರಕರು ಪಡಿತರ ಚೀಟಿಯಲ್ಲಿ ಎಷ್ಟು ಪಡಿತರ ಸಿಗುತ್ತದೆ ಎನ್ನುವುದನ್ನು ದಾಖಲಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಡಿಜಿಟಲ್ ಮೂಲಕ ಮಾಡಲಾಗುತ್ತದೆ. ಈಗ ವಿತರಕರು ಬೆರಳಚ್ಚು ಅಳವಡಿಸಿ ಪಡಿತರ ನೀಡುತ್ತಾರೆ. ಏಕೆಂದರೆ ಈಗ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ (Ration card Aadhaar link) ಮಾಡಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪಡಿತರ ಚೀಟಿಯಲ್ಲಿ ತಪ್ಪಾದ ಮೊಬೈಲ್ ನಂಬರ್ ನಮೂದಿಸಿದ್ದರೆ ಸಮಸ್ಯೆ ಎದುರಾಗಬಹುದು.   ಒಂದು ವೇಳೆ ಇಲ್ಲಿ ತಪ್ಪಾದ ಮೊಬೈಲ್ ನಂಬರ್ ತಪ್ಪಾಗಿದ್ದರೆ ಕೂಡಲೇ ಸರಿಯಾದ ನಂಬರ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ.  


COMMERCIAL BREAK
SCROLL TO CONTINUE READING

 ಕುಳಿತಲ್ಲಿಯೇ  ಈ ಕೆಲಸವನ್ನು ಮಾಡಬಹುದು :
ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದು (mobile number update) ತುಂಬಾ ಸುಲಭ. ಇದನ್ನು ಕುಳಿತ ಜಾಗದಿಂದಲೇ ಸುಲಭವಾಗಿ ಮಾಡಿ ಮುಗಿಸಬಹುದು. ನಿಮ್ಮ ಪಡಿತರ ಚೀಟಿಯಲ್ಲಿ (ration card) ಹಳೆಯ ಮೊಬೈಲ್ ಸಂಖ್ಯೆ ದಾಖಲಾಗಿದ್ದರೆ, ಪಡಿತರಕ್ಕೆ ಸಂಬಂಧಿಸಿದ ಅಪ್ಡೇಟ್ ಪಡೆಯುವುದು ಸಾಧ್ಯವಾಗುವುದಿಲ್ಲ. ಇಲಾಖೆಯ ವತಿಯಿಂದ ಸಾಮಾನ್ಯವಾಗಿ, ಎಲ್ಲಾ ಅಪ್ಡೇಟ್ ಗಳನ್ನು ಫೋನ್ ಮೂಲಕ  ಕಾರ್ಡ್‌ದಾರರಿಗೆ ಕಳುಹಿಸಲಾಗುತ್ತದೆ.


ಇದನ್ನೂ ಓದಿ: ಗ್ಯಾರಂಟಿ ಇಲ್ಲದೇ ಇಲ್ಲಿ 5 ಲಕ್ಷ ಸಾಲ ದೊರೆಯಲಿದೆ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ


ಮೊಬೈಲ್ ಸಂಖ್ಯೆಯನ್ನು ಈ ರೀತಿ ಅಪ್ಡೇಟ್ ಮಾಡಿ :
1. ಇದಕ್ಕಾಗಿ, ನೀವು ಮೊದಲು  https://nfs.delhi.gov.in/Citizen/UpdateMobileNumber.aspx .  ಸೈಟ್‌ಗೆ ಭೇಟಿ ನೀಡಿ
2. ನಿಮ್ಮ ಮುಂದೆ ಒಂದು ಪುಟ ತೆರೆಯುತ್ತದೆ. ಇಲ್ಲಿ Update Your Registered Mobile Number ಎಂಬ ಆಯ್ಕೆ ಕಾಣಿಸುತ್ತದೆ .
3. ಈಗ ಅದರ ಕೆಳಗೆ ನೀಡಿರುವ ಕಾಲಂನಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ. 
5. ಇಲ್ಲಿ ಮೊದಲ ಕಾಲಂನಲ್ಲಿ, Aadhaar Number of Head of Household/NFS ID ಬರೆಯಿರಿ. 
6. ಎರಡನೇ ಕಾಲಂನಲ್ಲಿ card No ಬರೆಯಿರಿ. 
7. ಮೂರನೇ ಕಾಲಂನಲ್ಲಿ Name of Head of Household ಬರೆಯಿರಿ. 
8. ಕೊನೆಯ ಕಾಲಂನಲ್ಲಿ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು ಉಳಿಸಿ. 
10. ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಆಗುತ್ತದೆ. 
ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆಯು 1ನೇ ಜೂನ್ 2020 ರಿಂದ ಅನ್ವಯಿಸುತ್ತದೆ


ದೇಶದಲ್ಲಿಒನ್ ನೇಶನ್ ಒನ್ ರೇಶನ್ ಕಾರ್ಡ್ ಯೋಜನೆ  ಅನ್ವಯ :
ಜೂನ್ 1, 2020 ರಿಂದ, ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಕಾರ್ಡ್ ಪೋರ್ಟೆಬಿಲಿಟಿ ಸೇವೆ 'ಒನ್ ನೇಷನ್-ಒನ್ ರೇಷನ್ ಕಾರ್ಡ್' (one nationa one ration card) ಪ್ರಾರಂಭವಾಗಿದೆ.  ಈ ಯೋಜನೆಯಲ್ಲಿ, ಯಾವುದೇ ರಾಜ್ಯದಲ್ಲಿ ಕೂಡಾ ಪಡಿತರವನ್ನು ಖರೀದಿಸಬಹುದು. ಇದರರ್ಥ ನೀವು ಎಲ್ಲದ್ದರೂ ಆಹಾರ ಪದಾರ್ಥಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಯೋಜನೆಯನ್ನು ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್, ತ್ರಿಪುರಾ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ದಿಯು ದಮನ್-ಗಳಲ್ಲಿ ಜಾರಿಗೊಳಿಸಲಾಗಿದೆ.


ಇದನ್ನೂ ಓದಿ: 'ಏರ್ ಇಂಡಿಯಾವನ್ನು ವಿಶ್ವ ದರ್ಜೆಗೆ ಏರಿಸಲು ಟಾಟಾ ಗ್ರೂಪ್ ಬದ್ಧ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.