UPI Payment:ಈ ರೀತಿ ಆದ್ರೆ ಬಹುತೇಕ ಜನ UPI ಬಳಸುವುದನ್ನ ನಿಲ್ಲಿಸ್ತಾರೆ, ಸಮೀಕ್ಷೆಯಲ್ಲಿ ಗಂಭೀರ ಅಂಶ ಬಹಿರಂಗ!
Fees For UPI Payment: ಜನಪ್ರಿಯ ಮೊಬೈಲ್ ಪಾವತಿ ವ್ಯವಸ್ಥೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೇಲೆ ವಹಿವಾಟು ಶುಲ್ಕವನ್ನು ವಿಧಿಸಿದರೆ, ಹೆಚ್ಚಿನ ಬಳಕೆದಾರರು ಅದನ್ನು ಬಳಸುವುದನ್ನು ನಿಲ್ಲಿಸಬೇಕಾಗುವ ಕಾಲ ಬರಲಿದೆ. ಆನ್ಲೈನ್ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. (Business News In Kannada)
UPI Update: ಖ್ಯಾತ ಮೊಬೈಲ್ ಪಾವತಿ ವ್ಯವಸ್ಥೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೇಲೆ ವಹಿವಾಟು ಶುಲ್ಕವನ್ನು ವಿಧಿಸಿದರೆ, ಹೆಚ್ಚಿನ ಬಳಕೆದಾರರು ಅದನ್ನು ಬಳಸುವುದನ್ನು ನಿಲ್ಲಿಸುವ ಸಾಧ್ಯತೆ ಇದೆ. ಲೋಕಲ್ ಸರ್ಕಲ್ (Local Circle Online Survey) ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಕಳೆದ ಒಂದು ವರ್ಷದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ನಡೆಸಲಾದ UPI ಪಾವತಿಗಳಲ್ಲಿ ವಹಿವಾಟು ಶುಲ್ಕ ವಿಧಿಸುತ್ತಿರುವುದನ್ನು ಗ್ರಾಹಕರು ಅನುಭವಿಸಿದ್ದಾರೆ ಎಂದು ಸಮೀಕ್ಷೆಯಲ್ಲಿನ ಬಹುತೇಕ ಬಳಕೆದಾರರು ದೂರಿದ್ದಾರೆ. (Business News In Kannada)
ಇದನ್ನೂ ಓದಿ-PM Surya Ghar Yojana ಗಾಗಿ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ
364 ಕ್ಕೂ ಹೆಚ್ಚು ಜಿಲ್ಲೆಗಳಿಂದ 34,000 ಕ್ಕೂ ಹೆಚ್ಚು ಜನರು ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಎಂದು ಲೋಕಲ್ ಸರ್ಕಲ್ ಭಾನುವಾರ ಹೇಳಿದೆ. ಇವರಲ್ಲಿ ಶೇ.67 ಪುರುಷರು ಮತ್ತು ಶೇ.33 ಮಹಿಳೆಯರು ಶಾಮೀಳಾಗಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ 2022 ರಲ್ಲಿ ಈ ಕುರಿತು ಚರ್ಚಾ ಪ್ರಬಂಧವನ್ನು ಬಿಡುಗಡೆ ಮಾಡಿತ್ತು, ವಿಭಿನ್ನ ಮೊತ್ತಗಳ ಆಧಾರದ ಮೇಲೆ UPI ಪಾವತಿಗಳ ಮೇಲೆ ಸಂಯೋಜನೆ ಶುಲ್ಕವನ್ನು ವಿಧಿಸಲು ಪ್ರಸ್ತಾಪಿಸಿದೆ. ಆದಾಗ್ಯೂ, ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹಣಕಾಸು ಸಚಿವಾಲಯ ನಂತರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ-Paytm ಸಂಕಷ್ಟದ ನಡುವೆ UPI ಹ್ಯಾಂಡಲ್ ಬಿಡುಗಡೆ ಮಾಡಿದ Flipkart! ಹೇಗೆ ಕಾರ್ಯನಿರ್ವಹಿಸುತ್ತೆ ಇಲ್ಲಿ ತಿಳಿಯಿರಿ!
ಕೇವಲ ಶೇ. 23 ರಷ್ಟು UPI ಬಳಕೆದಾರರಿಗೆ ವಹಿವಾಟು ಶುಲ್ಕ ಪಾವತಿಗೆ ಯಾವುದೇ ಆಕ್ಷೇಪ ಇಲ್ಲ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 73 ರಷ್ಟು ಜನರು ವಹಿವಾಟು ಶುಲ್ಕವನ್ನು ಜಾರಿಗೊಳಿಸಿದರೆ ಯುಪಿಐ ಬಳಸುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ಸುಮಾರು ಶೇ. 50 ರಷ್ಟು UPI ಬಳಕೆದಾರರು ಪ್ರತಿ ತಿಂಗಳು 10 ಕ್ಕೂ ಹೆಚ್ಚು ವಹಿವಾಟುಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ಸಮೀಕ್ಷೆಯು ಬಹಿರಂಗಪಡಿಸಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ