ನವದೆಹಲಿ: ನೀವು ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಅಥವಾ ನಿಯಮಿತ ಮಧ್ಯಂತರದಲ್ಲಿ ವಿಮಾ ಪ್ರೀಮಿಯಂ ಪಾವತಿಸಿದರೆ ಅಥವಾ ಕ್ರೆಡಿಟ್ ಕಾರ್ಡ್ ಮರುಪಾವತಿಯನ್ನು ಮಾಡಿದರೆ ಮತ್ತು ನಿಮ್ಮ ಯುಪಿಐ ಅಪ್ಲಿಕೇಶನ್‌ನಲ್ಲಿ ಸ್ವಯಂಚಾಲಿತ ಪಾವತಿ ವ್ಯವಸ್ಥೆಯನ್ನು ಹೊಂದಿಸಿದ್ದರೆ, ಇನ್ಮುಂದೆ ನೀವು ಓಟಿಪಿ ನಮೂದಿಸುವ ಅವಶ್ಯಕತೆ ಇಲ್ಲ. ಹೌದು ಯುಪಿಐ ಮೂಲಕ 1 ಲಕ್ಷದವರೆಗಿನ ಈ ಪಾವತಿಗಳಿಗೆ. ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಸ್ವಯಂ ಪಾವತಿಯ ಮಿತಿಯನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ಇದಕ್ಕೂ ಮೊದಲು, ₹15000 ಕ್ಕಿಂತ ಹೆಚ್ಚಿನ ಯುಪಿಐ ಸ್ವಯಂ ಪಾವತಿಗೆ ಓಟಿಪಿ ಅವಶ್ಯಕತೆ ಬೀಳುತ್ತಿತ್ತು. 


COMMERCIAL BREAK
SCROLL TO CONTINUE READING

ಇದೀಗ, ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ನಿಬಂಧನೆಯ ಪ್ರಕಾರ, ಮ್ಯೂಚುವಲ್ ಫಂಡ್ ಚಂದಾದಾರಿಕೆ, ವಿಮಾ ಪ್ರೀಮಿಯಂ ಚಂದಾದಾರಿಕೆ ಮತ್ತು ₹ 1,00,000 ವರೆಗಿನ ಕ್ರೆಡಿಟ್ ಕಾರ್ಡ್ ಮರುಪಾವತಿಯ ಸ್ವಯಂಚಾಲಿತ ಪಾವತಿಗಾಗಿ ನೀವು ಓಟಿಪಿ ಅನ್ನು ನಮೂದಿಸುವ ಅವಶ್ಯಕತೆ ಇಲ್ಲ, ಇದಕ್ಕೆ ಸಂಬಂಧಿಸಿದ ಸುತ್ತೋಲೆ ಶೀಘ್ರದಲ್ಲೇ ಹೊರಡಿಸಲಾಗುವುದು ಎನ್ನಲಾಗಿದೆ.


ಯುಪಿಐ ಸ್ವಯಂ ಪಾವತಿಯು ವಾಸ್ತವದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪ್ರಾರಂಭಿಸಲಾದ ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಅವರು ತಮ್ಮ ಬಿಲ್‌ಗಳನ್ನು ಸಮಯಕ್ಕೆ ಪಾವತಿಸಬಹುದು. ಇದು ಗ್ರಾಹಕೀಕರಣ, ನಮ್ಯತೆ, ಭದ್ರತೆ, ನಗದು ರಹಿತ ವಹಿವಾಟು ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತದೆ.


ಯುಪಿಎ ಸ್ವಯಂ ಪಾವತಿ ವ್ಯವಹಾರವನ್ನು ವೇಗಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಇಂತಹ ವ್ಯವಸ್ಥೆಗಳನ್ನು ಮಾಡಲಿದೆ. ಇದರರ್ಥ ನೀವು ಮ್ಯೂಚ್ವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು, ವಿಮಾ ಪ್ರೀಮಿಯಂ ಪಾವತಿಸಲು ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಯುಪಿಎಐ ಸ್ವಯಂ ಪಾವತಿ ಮೋಡ್‌ನಲ್ಲಿ ₹ 100000 ವರೆಗೆ ಮೊತ್ತವನ್ನು ಹೊಂದಿಸಿದರೆ, ಈ ಪಾವತಿಯನ್ನು ಪ್ರತಿ ತಿಂಗಳ ನಿಗದಿತ ದಿನಾಂಕದಂದು ಯಾವುದೇ ವಿಳಂಬವಿಲ್ಲದೆ ನಡೆದುಹೋಗಲಿದೆ. ಇದರಲ್ಲಿ ಓಟಿಪಿ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಹೇಳಿಕೆಯ ಪ್ರಕಾರ, ಮರುಕಳಿಸುವ ವಹಿವಾಟುಗಳಿಗಾಗಿ ಇ-ಮ್ಯಾಂಡೇಟ್‌ನ ಚೌಕಟ್ಟನ್ನು ಆಗಸ್ಟ್ 2019 ರಲ್ಲಿ ರಚಿಸಲಾಗಿದೆ. ಡಿಜಿಟಲ್ ವಹಿವಾಟಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಗ್ರಾಹಕರಿಗೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ಯಾವುದೇ ಹೆಚ್ಚುವರಿ ದೃಢೀಕರಣವಿಲ್ಲದೆ ₹ 15000 ವರೆಗಿನ ಯುಪಿಐ ಸ್ವಯಂ ಪಾವತಿ ಸೌಲಭ್ಯವನ್ನು ಒದಗಿಸಲಾಗಿದೆ.


ಇದನ್ನೂ ಓದಿ-ಹಿರಿಯ ನಾಗರೀಕರ ಉಳಿತಾಯ ಯೋಜನೆಯಿಂದ ಹಣ ವಾಪಸ್ ಪಡೆಯುವ ನಿಯಮಗಳಲ್ಲಿ ಭಾರಿ ಬದಲಾವಣೆ, ಇಂದೇ ತಿಳಿದುಕೊಳ್ಳಿ!


ಇದುವರೆಗೆ, ಇಂತಹ ಇ-ಮ್ಯಾಂಡೇಟ್‌ಗಾಗಿ 8.5 ಕೋಟಿ ಬಿಲ್‌ಗಳನ್ನು ನೋಂದಾಯಿಸಲಾಗಿದೆ. ಈ ಸೌಲಭ್ಯದ ಮೂಲಕ ಪ್ರತಿ ತಿಂಗಳು 2800 ಕೋಟಿ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ಈ ವ್ಯವಸ್ಥೆಯು ಈಗ ಸ್ಥಿರವಾಗಿದೆ, ಆದರೆ ಮ್ಯೂಚುವಲ್ ಫಂಡ್, ವಿಮಾ ಪ್ರೀಮಿಯಂ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಸಂದರ್ಭದಲ್ಲಿ, ₹ 15000 ರಷ್ಟು ಮೊತ್ತ ಅತ್ಯಂತ ಕಡಿಮೆ ಮೊತ್ತವಾಗಿದ್ದು , ಅದನ್ನು  ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.


ಇದನ್ನೂ ಓದಿ-ಹತ್ತು ವರ್ಷಗಳಷ್ಟು ಹಳೆ ಆಧಾರ್ ಕಾರ್ಡ್ ರದ್ದಾಗಲಿವೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ


ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಈ ಮಿತಿಯನ್ನು ₹ 100000 ಗೆ ಹೆಚ್ಚಿಸಲು ನಿರ್ಧರಿಸಿದೆ. ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ವಿಮಾ ಪಾಲಿಸಿ ಪ್ರೀಮಿಯಂಗಳನ್ನು ಪಾವಟಿಸುತ್ತಿದ್ದಾರೆ ಮತ್ತು ಯುಪಿಐನ ಸ್ವಯಂ ಪಾವತಿ ಸೌಲಭ್ಯದ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಮಾಡುತ್ತಿದ್ದರೆ, ಅದು ನಿಮಗೆ ತಡವಾದ ಶುಲ್ಕಗಳು ಮತ್ತು ಪೆನಾಲ್ಟಿಗಳನ್ನು ತಪ್ಪಿಸಲು ಸಹಾಯ ಮಾಡಲಿದೆ. ಯುಪಿಐನ ಸ್ವಯಂ ಪಾವತಿ ಸೌಲಭ್ಯದಲ್ಲಿ, ನೀವು ಪ್ರತಿ ತಿಂಗಳು ಪಾವತಿಸಬೇಕಾದ ಪಾವತಿಯ ಮೊತ್ತವನ್ನು ಮತ್ತು ಒಂದು ವರ್ಷದಲ್ಲಿ ಮಾಡಬೇಕಾದ ಪಾವತಿಯ ಆವರ್ತನವನ್ನು ನಿರ್ಧರಿಸಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ