ಪ್ರೀತಿಸಿದ ಹುಡುಗಿ ಸಿಗದ ಕಾರಣ ಮದುವೆಯಾಗದ ರತನ್; ಇದು ಬ್ರಹ್ಮಚಾರಿ ಟಾಟಾರ ಅದ್ಭುತ ಲವ್ ಸ್ಟೋರಿ!
Ratan Tata No More: ದೇಶದ ಶ್ರೀಮಂತ ಉದ್ಯಮಿ, ಭಾರತದ ಅಪ್ರತಿಮ ಪ್ರತಿಭೆ, ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
Real love story of Ratan Tata: ದೇಶದ ಶ್ರೀಮಂತ ಉದ್ಯಮಿ, ಭಾರತದ ಅಪ್ರತಿಮ ಪ್ರತಿಭೆ, ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಲಿಯುಗದ ಕರ್ಣ, ಬಡವರ ಬಂಧು, ಕೈಗಾರಿಕೋದ್ಯಮಿ, ಮಾನವತವಾದಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ವೃದ್ಧಾಪ್ಯದಲ್ಲೂ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ರತನ್ ಟಾಟಾ ನಮ್ಮನೆಲ್ಲ ಅಗಲಿದ್ದಾರೆ. ಈ ʼಭಾರತ ರತ್ನʼದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಅವರ ಲವ್ ಸ್ಟೋರಿ ಕೆಲವರಿಗೆ ಮಾತ್ರ ಗೊತ್ತು. ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂಬ ಕಾರಣಕ್ಕೆ ರತನ್ ಟಾಟಾ ಅವರು ಮದುವೆಯೇ ಆಗದೆ ಬ್ರಹ್ಮಚಾರಿಯಾಗಿ ಉಳಿದ ರೋಚಕ ಕಥೆ ಕೇಳಿದ್ರೆ ನೀವು ಸಹ ರೋಮಾಂಚನಗೊಳ್ಳುತ್ತೀರಿ.
Ratan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲ
ಹೌದು, ರತನ್ ಟಾಟಾರ ಯವ್ವನದಲ್ಲಿ ಒಂದು ಮೈ ಬೆಚ್ಚಗಾಗಿಸುವಂಥೆ ಪ್ರೇಮ ಕಥೆಯಿದೆ. ಇದನ್ನು ಯಾರೂ ನಂಬುವುದಿಲ್ಲ, ಆದರೆ ನೀವು ನಂಬಲೇಬೇಕು. ಏಕೆಂದರೆ ಇದು ಅವರೇ ಹೇಳಿದ ಕಥೆ. ರತನ್ ಟಾಟಾ ವಿವಾಹವಾಗಲಿಲ್ಲ, ಆದರೆ ಅವರು ಪ್ರೀತಿಯ ಬಲೆಗೆ ಬಿದ್ದ ಕಥೆ ನಿಜ. ರತನ್ ಟಾಟಾ ಅವರು ಕೆಲ ವರ್ಷಗಳ ಹಿಂದಷ್ಟೇ ತಮ್ಮ ಲವ್ ಸ್ಟೋರಿ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. ಹ್ಯೂಮನ್ಸ್ ಆಫ್ ಬಾಂಬೆ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದ ಅವರು, ತಮ್ಮ ಬಾಲ್ಯ, ಪ್ರೇಮ ಜೀವನ ಮತ್ತು ಸಂಬಂಧಗಳ ಬಗ್ಗೆ ತಿಳಿಸಿದ್ದರು. ಒಮ್ಮೆ ಪ್ರೀತಿಸಿ ಮದುವೆಯಾಗಿ ಸೆಟಲ್ ಆಗಲು ಅವರು ಬಯಸಿದ್ದರಂತೆ. ಇದು ನಡೆದದ್ದು ಅಮೆರಿಕದಲ್ಲಿ. ಆಗ ಅವರು ಲಾಸ್ ಏಂಜಲೀಸ್‌ನಲ್ಲಿ ಉದ್ಯೋಗಿಯಾಗಿದ್ದರು. ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿತ್ತು ಅಂತಾ ತಿಳಿಯಿರಿ...
ರತನ್ ಟಾಟಾರ ಪೋಸ್ಟ್‌ನಲ್ಲಿ ಏನಿತ್ತು..?
ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಸಿಎಂ ಸಿದ್ದರಾಮಯ್ಯನೇ ಕಾರಣ! ʼಕೈʼ ನಾಯಕನಿಂದಲೇ ಗಂಭೀರ ಆರೋಪ
ರತನ್ ಟಾಟಾ ಅವರಿಗೆ ನೋಯೆಲ್ ಟಾಟಾ ಎಂಬ ಮಲಸಹೋದರ ಇದ್ದರು. ಈ ಬಗ್ಗೆಯೂ ಮಾತನಾಡಿದ್ದ ಅವರು, ʼನನಗೆ ಸಂತೋಷದ ಬಾಲ್ಯವಿತ್ತು, ಆದರೆ ನನ್ನ ಸಹೋದರ ಮತ್ತು ನಾನು ವಯಸ್ಸಾದಂತೆ, ನಮ್ಮ ಪೋಷಕರ ವಿಚ್ಛೇದನದಿಂದ ಸ್ವಲ್ಪ ತೊಂದರೆಗೆ ಒಳಗಾದೆವು. ಹಲವಾರು ಸಲ ಕಷ್ಟದ ಸಮಯಗಳನ್ನು ಎದುರಿಸಿದ್ದೇವೆ. ಆ ದಿನಗಳಲ್ಲಿ ವಿಚ್ಛೇದನ ಎಂಬುದು ಇಂದಿನಂತೆ ಸಾಮಾನ್ಯವಾಗಿರಲಿಲ್ಲ. ಆದರೆ ನನ್ನ ಅಜ್ಜಿ ನಮ್ಮನ್ನು ಬೆಳೆಸಿದರು. ನಮ್ಮ ತಾಯಿ ಮತ್ತೆ ವಿವಾಹವಾಗಲು ನಿರ್ಧರಿಸಿದಾಗ ನಮ್ಮ ಶಾಲೆಯ ಹುಡುಗರು ಕೆಟ್ಟದಾಗಿ ಮಾತನಾಡಲು ಆರಂಭಿಸಿದ್ದರು. ಆದರೆ ನಮ್ಮ ಅಜ್ಜಿ ಏನೇ ಆದರೂ ಘನತೆಯನ್ನು ಉಳಿಸಿಕೊಳ್ಳಲು ನಮಗೆ ಕಲಿಸಿದರುʼ ಎಂದು ತಿಳಿಸಿದ್ದರು.
ಭಾರತದ ಅತ್ಯಂತ ಯಶಸ್ವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾ ಅವರು 1937ರ ಡಿಸೆಂಬರ್ 28ರಂದು ವಾಣಿಜ್ಯ ನಗರಿ ಮುಂಬೈನಲ್ಲಿ ಜನಿಸಿದರು. ಅವರ ತಂದೆ ನವಲ್ ಟಾಟಾ, ತಾಯಿ ಸೋನು ಟಾಟಾ. ಟಾಟಾ ಅವರ ಪೋಷಕರಾದ ನವಲ್ ಮತ್ತು ಸೋನು ಅವರು 1948ರಲ್ಲಿ ಅಂದರೆ ರತನ್ ಕೇವಲ 10 ವರ್ಷ ವಯಸ್ಸಿನವರಾಗಿದ್ದಾಗ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದು ಬೇರೆ ಬೇರೆಯಾದರು. ರತನ್‌ಜಿ ಟಾಟಾ ಅವರು ರತನ್ ಟಾಟಾರ ಅಜ್ಜ ಆದರೆ, ಜಮ್ಸೆಟ್ಜಿ ಟಾಟಾ(Jamshedji Tata) ಅವರು ಇವರ ಮುತ್ತಾತ ಆಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.