ತಿಂಗಳಿಗೆ 80-85ಸಾವಿರ ದುಡಿಯುವ ಬೆಂಗಳೂರು ಉಬರ್ ಡ್ರೈವರ್ ಸಾಧನೆಗೆ ಮೆಚ್ಚುಗೆ ಸುರಿಮಳೆ: ವಿಡಿಯೋ ವೈರಲ್
Bengaluru Uber Driver: ಮಳೆ, ಚಳಿ, ಬಿಸಿಲು, ಬೆವರು, ಬಾಯಾರಿಕೆ ನಡುವೆ ದಿನವಿಡೀ ದುಡಿಯುವ ಉಬರ್ ಡ್ರೈವರ್ ಗಳ ನೋವು ಯಾರಿಗೂ ಬೇಡ. ಅಂಥದ್ದರ ನಡುವೆ ಉಬರ್ ಡ್ರೈವರ್ ಒಬ್ಬರು ತಿಂಗಳಿಗೆ 80ರಿಂದ 85 ಸಾವಿರ ದುಡಿಯುತ್ತಾರೆ ಎನ್ನುವುದೇ ನಿಜಕ್ಕೂ ಖುಷಿಯ ವಿಷಯ.
Viral Video Of Bengaluru Uber Driver: Uber, Rapido ಮತ್ತು Ola ಡ್ರೈವರ್ ಗಳು ಎಂಬುದು ಇತ್ತೀಚಿಗೆ ಹುಟ್ಟಿಕೊಂಡ ಉದ್ಯೋಗ. ದುಡಿಮೆ ಜಾಸ್ತಿ-ದುಡ್ಡು ಕಮ್ಮಿ ಎನ್ನುವ ಕೆಲಸಗಳ ಪೈಕಿ ಇದೂ ಒಂದು. ಅದರಲ್ಲೂ ಮಳೆ, ಚಳಿ, ಬಿಸಿಲು, ಬೆವರು, ಬಾಯಾರಿಕೆ ನಡುವೆ ದಿನವಿಡೀ, ರಾತ್ರಿಯಿಡೀ, ವಾರವಿಡೀ ರಜೆ ಇಲ್ಲದೆ, ಮನೆ-ಮಡದಿ-ಮಕ್ಕಳನ್ನು ನೋಡದೆ ದುಡಿಯುವ ವರ್ಗ ಇದು. ಹಬ್ಬ-ಹರಿದಿನ-ಒಳ್ಳೆಯದು-ಕೆಟ್ಟದ್ದನ್ನು ಕಡೆಗಣಿಸಿ ಬೆವರು ಹರಿಸುವ ಜನ ಇವರು.
ಇಂಥ ಬೆವರಿನ ಮನುಷ್ಯರ ನಡುವೆ ಬೆಂಗಳೂರು ಮೂಲದ ಉಬರ್ Rapido ಬೈಕ್ ಚಾಲಕನೊಬ್ಬ ತಿಂಗಳಿಗೆ 80ರಿಂದ 85 ಸಾವಿರ ದುಡಿಯುತ್ತೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಓಡಾಡುತ್ತಿವೆ.
8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! ಮೂಲ ವೇತನದಲ್ಲಿ ಭಾರೀ ಹೆಚ್ಚಳ...!
ಪ್ರಯಾಣಿಕರೊಬ್ಬರು Rapido ಬೈಕ್ ನಲ್ಲಿ ಕುಳಿತು ಹೋಗುತ್ತಿದ್ದಾಗ ಚಾಲಕನನ್ನು ಮಾತಿಗೆಳೆದಿದ್ದಾರೆ. ‘ನೀವು ತಿಂಗಳಿಗೆ ಎಷ್ಟು ದುಡಿಯುತ್ತೀರಿ?’ ಎಂದು ಕೇಳಿದ್ದಾರೆ. ಚಾಲಕ ‘ತಿಂಗಳಿಗೆ 80ರಿಂದ 85 ಸಾವಿರ ರೂಪಾಯಿ ದುಡಿಯುತ್ತೇನೆ’ ಎಂದಿದ್ದಾರೆ. ಈ ಮಾತನ್ನು ಕೇಳಿ ಪ್ರಯಾಣಿಕರಿಗೆ ಆಶ್ಚರ್ಯವಾಗುತ್ತದೆ. ಆಗ ಚಾಲಕ ‘ಅದಕ್ಕಾಗಿ ದಿನಕ್ಕೆ 13 ಗಂಟೆ ದುಡಿಯುತ್ತೇನೆ’ ಎಂದಿದ್ದಾರೆ. ಚಾಲಕನ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದ ಪ್ರಯಾಣಿಕ ಬಳಿಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದನ್ನೂ ಓದಿ- ಸೇವಿಂಗ್ಸ್ ವಿಧಾನಗಳಲ್ಲೆಲ್ಲಾ ಅತ್ಯಂತ ಬೆಸ್ಟ್ ಎಂದರೆ ಚಿನ್ನ ಖರೀದಿ! ಹೇಗ್ ಗೊತ್ತಾ?
ಈ ವಿಡಿಯೋ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಗಮನ ಸೆಳೆದಿದೆ. ಅವರು ಚಾಲಕನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತ್ತೊಂದು ಪೋಸ್ಟ್ ಮಾಡುತ್ತಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ರೀತಿಯ ಕಾಮೆಂಟ್ ಗಳು ಬಂದಿವೆ. ಒಬ್ಬರು ‘ದಿನಕ್ಕೆ 13 ಗಂಟೆ ಸ್ಕೂಟರ್ ಸವಾರಿ ಮಾಡುವ ಸಂಕಟ ನಿಮಗೆ ತಿಳಿದಿಲ್ಲ. ದ್ವಿಚಕ್ರ ಓಡಿಸುವವರ ಪೈಕಿ ಅನೇಕರಿಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆ. ಈ ವ್ಯಕ್ತಿ ನಿಜಕ್ಕೂ 80 ಸಾವಿರಕ್ಕೂ ಹೆಚ್ಚು ಗೌರವಕ್ಕೆ ಅರ್ಹರು’ ಎಂದು ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.