Investment Tips: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹಣಕಾಸಿನ ವಿಷಯದ ಕುರಿತು ಹಲವು ಸಂಗತಿಗಳನ್ನು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಹಣವನ್ನು ಯಾವಾಗಲೂ ಸಂಗ್ರಹಿಸಿ ಇಡಬಾರದು (Business News In Kannada) ಎನ್ನಲಾಗಿದೆ. ಅದನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದರಿಂದ ಅದು ನಿಮಗೆ ಭವಿಷ್ಯದಲ್ಲಿ ಸಾಕಷ್ಟು ಲಾಭ ನೀಡುತ್ತದೆ ಎನ್ನುತ್ತಾರೆ. ಹೀಗಾಗಿ ನಿಮ್ಮ ಹಣಕಾಸಿನ ಗುರಿಯನ್ನು ಒಮ್ಮೆ ನೋಡಿಕೊಳ್ಳಿ. ಈಗ ಹಣವನ್ನು ಆ ಗುರಿಯತ್ತ ನಿರ್ವಹಿಸಲು ನೀವು ಬಯಸಿದರೆ, ಕೆಲವು ಹೂಡಿಕೆ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಹಣವನ್ನು ಹಲವು ಪಟ್ಟು ಹೆಚ್ಚಿಸಬಹುದು. ಹೀಗಿರುವಾಗ ನೀವು ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಈ ಸಲಹೆಗಳು ನಿಮಗೆ ಹಲವು ಪಟ್ಟು ಆದಾಯವನ್ನು ನೀಡಬಹುದು. ಅಂತಹ ಕೆಲವು ಸಲಹೆಗಳ ಬಗ್ಗೆ ತಿಳಿಯೋಣ.

COMMERCIAL BREAK
SCROLL TO CONTINUE READING

ಬಂಡವಾಳವನ್ನು ನಿರ್ಮಿಸಿ
ಮಾರುಕಟ್ಟೆಯ ಏರಿಳಿತಗಳ ವಿರುದ್ಧ ನಿಮ್ಮ ಹೂಡಿಕೆಗಳನ್ನು ರಕ್ಷಿಸಲು ವೈವಿಧ್ಯೀಕರಣವು ಮುಖ್ಯವಾಗಿದೆ. ನಿಮ್ಮ ಹೂಡಿಕೆಗಳು ನಿರ್ದಿಷ್ಟ ಆಸ್ತಿ ವರ್ಗದಲ್ಲಿ ಕೇಂದ್ರೀಕೃತವಾಗಿದ್ದರೆ, ನೀವು ನಿಮ್ಮ ಸಂಪೂರ್ಣ ಬಂಡವಾಳವನ್ನು ಅಪಾಯಕ್ಕೆ ಸಿಲುಕಿಸುತ್ತೀರಿ. ಆ ಮಾರುಕಟ್ಟೆ ವಲಯವು ಹಿಂಜರಿತ ಅನುಭವಿಸಿದರೆ ನೀವು ನಷ್ಟವನ್ನು ಸಹ ಅನುಭವಿಸಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಶಾಮೀಲುಗೊಳಿಸಿ.

ದೀರ್ಘಾವಧಿಯ ಹೂಡಿಕೆಗಳು
ಪ್ರಬಲ ಆರ್ಥಿಕ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಅತ್ಯಂತ ಯಶಸ್ವಿ ಮಾರ್ಗವೆಂದರೆ ದೀರ್ಘಾವಧಿಗೆ ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಯೋಜಿಸುವುದು. ನಿಮ್ಮ ದೀರ್ಘಾವಧಿಯ ಹಣಕಾಸಿನ ಗುರಿಗಳು ಮತ್ತು ಅಪಾಯದ ಸಹಿಷ್ಣುತೆಯನ್ನು ಗಣನೆಗೆ ತೆಗೆದುಕೊಳ್ಳುವ ಯೋಜನೆಯನ್ನು ರೂಪಿಸಿ ಮತ್ತು ವೈವಿಧ್ಯಮಯ ಸ್ವತ್ತುಗಳ ಪೋರ್ಟ್ಫೋಲಿಯೊವನ್ನು ಅದು ಹೊಂದಿರಬೇಕು ಎಂಬುದರ ಕಾಳಜಿವಹಿಸಿ. ಅಂತಹ ಯೋಜನೆಯು ಮಾರುಕಟ್ಟೆ ಬದಲಾವಣೆಗಳಿಗೆ ನಿಮ್ಮನ್ನು ಉತ್ತಮವಾಗಿ ಸಿದ್ಧಪಡಿಸುತ್ತದೆ.


ಇದನ್ನೂ ಓದಿ-ಭಾರತದ ಜಿಡಿಪಿಗೆ ಸಿಗಲಿದೆ ಹೊಸ ರೆಕ್ಕೆ, ಐಎಫ್ಎಫ್ ಅಂದಾಜಿನಿಂದ ಹೆಚ್ಚಾದ ಭರವಸೆ, ಇಲ್ಲಿದೆ ರಿಪೋರ್ಟ್!

ಸಾಲವನ್ನು ಕಡಿಮೆ ಮಾಡಿ
ನೀವು ಯಾವುದೇ ಬ್ಯಾಂಕ್‌ಗಳಿಂದ ಸಾಲ ಪಡೆಯಲು ನಿರ್ಧರಿಸಿದ್ದಾರೆ ಅಥವಾ ಸಾಲವನ್ನು ತೆಗೆದುಕೊಂಡಿದ್ದರೂ, ಅದನ್ನು ಈ ವರ್ಷ ಕಡಿಮೆ ಮಾಡಿ ಅಥವಾ ಮುಗಿಸಿ. ಮಧ್ಯಮ ಆದಾಯದ ಕುಟುಂಬಗಳು ಸಾಲದ ಕಾರಣದಿಂದಾಗಿ ಬಹಳಷ್ಟು ನೊಂದು ಹೋಗುತ್ತವೆ. ದಕ್ಷ ಹಣಕಾಸು ಯೋಜನೆಗಾಗಿ ಸಾಲಗಳ ಮೇಲೆ ನಿಗಾ ಇಡಲು ಮತ್ತು ಹೊರೆಯನ್ನು ಕಡಿಮೆ ಮಾಡಲು ಯಾವಾಗಲೂ ಸಲಹೆ ನೀಡಲಾಗುತ್ತದೆ.


ಇದನ್ನೂ ಓದಿ-ಐದು ನೂರು ಮುಖಬೆಲೆಯ ನೋಟು ನಿಷ್ಕ್ರೀಯಗೊಳ್ಳಲಿದೆಯೇ? ಮಹತ್ವದ ಹೇಳಿಕೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!

ಬಜೆಟ್ ಮಾಡಿ
ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು ಮತ್ತು ನಿಮ್ಮ ವೆಚ್ಚಗಳು ಎಷ್ಟು ಎಂದು ಬಜೆಟ್ ಮಾಡಿ. ಈ ಬಜೆಟ್‌ಗೆ ಅನುಗುಣವಾಗಿ ಮಾತ್ರ ಹಣವನ್ನು ಹೂಡಿಕೆ ಮಾಡಿ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.