Fixed Deposit: ನೀವು ಮುಂದಿನ 7 ರಿಂದ 10 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಬಯಸಿದರೆ, ಇಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಎಂದೆ ಹೇಳಬಹುದು. ಆದರೆ, ಸಂರಕ್ಷಣಾತ್ಮಕ ಹೂಡಿಕೆಗೆ ಇಚ್ಛೆಯಿರುವ ಹೂಡಿಕಾರರು ಫಿಕ್ಸ್ ಡಿಪಾಜಿಟ್‌ಗಳನ್ನು (FD) ಅಲ್ಲದೆ ಅದರೊಟ್ಟಿಗೆ ಮುಂತಾದ ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಆಯ್ಕೆ ಮಾಡುತ್ತಾರೆ. ಆದರೆ FD ಯಲ್ಲಿ ಹೂಡಿಕೆ ಮಾಡಿ 10 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದೆ? ಈ ಪ್ರಶ್ನೆ ಹೂಡಿಕೆದಾರರಿಗೆ ಸಾಮಾನ್ಯವಾಗಿ ಮೂಡುವಂತಹದ್ದು. 
 


COMMERCIAL BREAK
SCROLL TO CONTINUE READING

ನೀವು FD ಯಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸಾಧ್ಯವೇ?


ಫಿಕ್ಸ್ ಡಿಪಾಜಿಟ್‌ಗಳ ಮೇಲೆ ಲಭಿಸುವ ರಿಟರ್ನ್ಸ್‌ ನೀವು ಹೂಡಿಕೆ ಮಾಡುವ ಅವಧಿಯ ಮೇಲೆ ಅವಲಂಭಿತವಾಗಿರುತ್ತದೆ. ಉದಾಹರಣೆಗೆ, ನೀವು 10 ವರ್ಷಗಳ ಅವಧಿಗೆ ಹಣವನ್ನು ಹೂಡಿಕೆ ಮಾಡಿದರೆ, ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ SBI ಬ್ಯಾಂಕ್‌ ನೀವು ಹೂಡಿಕೆ ಮಾಡಿದ ಹಣದ ಮೇಲೆ 6.5% ಬಡ್ಡಿದರ ನೀಡುತ್ತದೆ. 3 ರಿಂದ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ 6.75% ಬಡ್ಡಿದರ ಲಭ್ಯವಿರುತ್ತದೆ. ಆದರೆ, ನಿಮ್ಮ ಹಣವನ್ನು ನೀವು ದ್ವಿಗುಣಗೊಳಿಸಲು ಬಯಸಿದರೆ 10 ವರ್ಷಗಳಲ್ಲಿ ಕನಿಷ್ಠ 7.18% ರಿಟರ್ನ್ಸ್‌, 7 ವರ್ಷಗಳಲ್ಲಿ 10.41% ರಿಟರ್ನ್ಸ್‌ ಅಥವಾ 5 ವರ್ಷಗಳಲ್ಲಿ 14.87% ರಿಟರ್ನ್ಸ್‌ ಸಿಗುತ್ತದೆ. 


ಬ್ಯಾಂಕ್‌ಗಳ ಬಡ್ಡಿದರಗಳು:


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10 ವರ್ಷಗಳ FD ಮೇಲೆ 6.5% ಬಡ್ಡಿದರ ನೀಡಿದರೆ. ₹1 ಲಕ್ಷ ಹೂಡಿಕೆ ಮಾಡುವುದರಿಂದ 10 ವರ್ಷಗಳಲ್ಲಿ ₹1.87 ಲಕ್ಷ ನಿಮಗೆ ಸಿಗುತ್ತದೆ. HDFC ಬ್ಯಾಂಕ್ ಬಲಕೆದಾರರಿಗಾದರೆ, 10 ವರ್ಷಗಳ FD ಮೇಲೆ 7% ಬಡ್ಡಿದರ ಹಾಗೂ ₹1 ಲಕ್ಷ ಹೂಡಿಕೆ ಮಾಡುವುದರಿಂದ ₹1.96 ಲಕ್ಷ ಸಿಗುತ್ತದೆ. ಸೀನಿಯರ್ ಸಿಟಿಜನ್ಸ್‌ಗೆ HDFC ಯಲ್ಲಿ 7.5% ಬಡ್ಡಿದರದ ಮೂಲಕ ₹1 ಲಕ್ಷ ಹೂಡಿಕೆಯಿಂದ ₹2.06 ಲಕ್ಷ ಸಿಗುತ್ತದೆ.


ಇನ್ನೂ, ICICI ಬ್ಯಾಂಕ್ ನಲ್ಲಿ ನೀವಯ ಫಿಕ್ಸ್ಡ್‌ ಡೆಪಾಸಿಟ್‌ ಮಾಡುವುದರಿಂದ,  10 ವರ್ಷಗಳ FD ಮೇಲೆ 6.9% ಬಡ್ಡಿದರ ಸಿಗುತ್ತದೆ ಅಂದರೆ ನೀವು ₹1 ಲಕ್ಷ ಹೂಡಿಕೆ ಮಾಡುವುದರಿಂದ ನಿಮಗೆ ₹1.94 ಲಕ್ಷ ಸಿಗುತ್ತದೆ. ಕೋತಕ್ ಮಹೀಂದ್ರ ಬ್ಯಾಂಕ್‌ನಲ್ಲಿ ನೀವು ಫಿಕ್ಸ್ಡ್‌ ಡೆಪಾಸಿಟ್‌ ಮಾಡುವುದರಿಂದ - 10 ವರ್ಷಗಳ FD ಮೇಲೆ 6.2% ಬಡ್ಡಿದರ ಅಂದರೆ ₹1 ಲಕ್ಷ ಹೂಡಿಕೆಯಿಂದ  ನಿಮಗೆ ₹1.82 ಲಕ್ಷ ಸಿಗುತ್ತದೆ.


ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಲ್ಲಿ 10 ವರ್ಷಗಳ FD ಮೇಲೆ 6.5% ಬಡ್ಡಿದರ ನೀಡಲಾಗುತ್ತಿದ್ದು, ₹1 ಲಕ್ಷ ಹೂಡಿಕೆ ಮಾಡುವುದರಿಂದ ₹1.87 ಲಕ್ಷ ನಿಮ್ಮ ಖಾತೆ ಸೇರಲಿದೆ. ಬ್ಯಾಂಕ್ ಆಫ್ ಬರೋಡಾ (BOB)ದಲ್ಲಿ 10 ವರ್ಷಗಳ FD ಮೇಲೆ 6.25% ಬಡ್ಡಿದರ ನೀಡಲಾಗುತ್ತಿದ್ದು, ₹1 ಲಕ್ಷ ಹೂಡಿಕೆಯಿಂದ ₹1.83 ಲಕ್ಷ ಆಗುತ್ತದೆ.


ಪ್ರಸ್ತುತ ಬಡ್ಡಿದರಗಳನ್ನು ಗಮನಿಸಿವುದಾದರೆ, ಫಿಕ್ಸ್ ಡಿಪಾಜಿಟ್‌ಗಳಲ್ಲಿ ಹೂಡಿಕೆ ಮಾಡಿ 10 ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸುವುದು ಸಾಧ್ಯವಿಲ್ಲ. ಆದರೆ, ಸೀನಿಯರ್ ಸಿಟಿಜನ್ಸ್‌ಗೆ ಸ್ವಲ್ಪ ಹೆಚ್ಚು ಬಡ್ಡಿದರ ಲಭ್ಯವಿದೆ. ಹೀಗಾಗಿ, ಹೆಚ್ಚಿನ ರಿಟರ್ನ್ಸ್‌ ಪಡೆಯಲು ಇಕ್ವಿಟಿ ಹೂಡಿಕೆಗಳ ಆಯ್ಕೆಗಳನ್ನು ಪರಿಗಣಿಸುವುದು ಉತ್ತಮ.


ಫಿಕ್ಸ್ ಡಿಪಾಜಿಟ್‌ಗಳು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದ್ದು, ಈ ಹೂಡಿಕೆ ಅವಧಿಯ ಮೇಲೆ ನೀವು ಬಡ್ಡಿಯನ್ನು ಪಡೆಯುತ್ತೀರಿ. ಇದು ಮಾರುಕಟ್ಟೆ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗದೇ ಇರುವುದರಿಂದ ಬಹುತೇಕ ಹೂಡಿಕಾರರ ಪ್ರಿಯ ಆಯ್ಕೆ. ಆದರೆ, ಫಿಕ್ಸ್ ಡಿಪಾಜಿಟ್‌ಗಳ ಬಡ್ಡಿದರವು ಸ್ಥಿರವಾಗಿದ್ದು, ಇದು ಹೆಚ್ಚು ಅಥವಾ ಕಡಿಮೆಯಾಗುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.