ಬಜೆಟ್ 2024: ಮನೆ ಕನಸು ಇದ್ಯಾ? ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆ ಏನು?
Budget 2024: ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೋದಿ ಸರ್ಕಾರ 3.0 ಮೊದಲ ಬಜೆಟ್ ಬಗ್ಗೆ ಜನರಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿವೆ.
Union Budget 2024: ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಧ್ಯಮ ವರ್ಗದ ಜನರ ಕನಸು. ಸ್ವಂತ ಮನೆ ಕಟ್ಟುವ ಪ್ಲಾನ್ ಮಾಡಿಕೊಳ್ಳುತ್ತಿರುವ ಜನರು ಜುಲೈ 23ರ ಬಜೆಟ್ ನಲ್ಲಿ ಯಾವೆಲ್ಲಾ ನಿರೀಕ್ಷೆಗಳಿವೆ? ರಿಯಲ್ ಎಸ್ಟೇಟ್ ಉದ್ಯಮದ ಬೇಡಿಕೆಗಳೇನು?
2024-25ರ ಕೇಂದ್ರ ಬಜೆಟ್‌ಗಾಗಿ ರಿಯಲ್ ಎಸ್ಟೇಟ್ ವಲಯದ ಬೇಡಿಕೆಗಳೇನು?
1. ತೆರಿಗೆ ರಿಯಾಯಿತಿ: ಮನೆ ಖರೀದಿದಾರರು ಬಹು ವರ್ಷದಿಂದ ಗೃಹ ಸಾಲದ ಬಡ್ಡಿದರಗಳ ಮೇಲಿನ ಹೆಚ್ಚಿನ ಕಡಿತಗಳು (higher tax deduction), ಮತ್ತು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಮತ್ತು ಸೆಕ್ಷನ್ 24(ಬಿ) ಅಡಿಯಲ್ಲಿ ಮೂಲ ಮರುಪಾವತಿ (principal repayment) ಗೆ ಆಗ್ರಹ ಮಾಡುತ್ತಿದ್ದಾರೆ.
2. ಸಿಂಗಲ್ ವಿಂಡೋ ಕ್ಲೀರೆನ್ಸ್ :ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುಮೋದನೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಯೋಜನೆಯ ವಿಳಂಬವನ್ನು ಕಡಿಮೆ ಮಾಡಲು ಏಕ ಗವಾಕ್ಷಿ ಒಪ್ಪಿಗೆ ವ್ಯವಸ್ಥೆಯನ್ನು (single window clearence) ಅಳವಡಿಸುವುದು.
ಇದನ್ನೂ ಓದಿ- ಅಂಬಾನಿ-ಅದಾನಿಗೆ ಟಕ್ಕರ್ ನೀಡಲು ಮುಂದಾದ ಟಾಟಾ: ಈ ಕ್ಷೇತ್ರದಲ್ಲಿ ಭಾರೀ ಹೂಡಿಕೆಗೆ ಸಜ್ಜು!
3. ಕೈಗೆಟುಕುವ ದರದಲ್ಲಿ ವಸತಿ: ಕೈಗೆಟುಕುವ ದರದಲ್ಲಿ ವಸತಿ ಯೋಜನೆಗಳಿಗೆ ಹೆಚ್ಚಿದ ಹಂಚಿಕೆ ಮತ್ತು ಕೈಗೆಟುಕುವ ಮನೆಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಬಜೆಟ್ ನಲ್ಲಿ ಘೋಷಣೆಗೆ ಆಶಯ ಹೊಂದಿದ್ದಾರೆ. ಇದರ ಜೊತೆ PMAY ಯೋಜನೆ ಅಡಿಯಲ್ಲಿ 2ನೇ ಹಾಗೂ 3ನೆಯ ದರ್ಜೆ ನಗರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಆ ನಗರ ಅಭಿವೃದ್ಧಿ ಮಾಡಬೇಕು.
4. GST ಸುಧಾರಣೆ : ಕಟ್ಟಡ ನಿರ್ಮಾಣ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದ GST ಇದೇ, ಬಜೆಟ್ ನಲ್ಲಿ GST ಪ್ರಮಾಣ ಕಡಿಮೆ ಮಾಡಿದ್ದಲ್ಲಿ ನಿರ್ಮಾಣ ಚಟುವಟಿಕೆ ಹೆಚ್ಚಾಗಲಿದೆ.
5. REITs and InvIT: ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ತೆರಿಗೆ ಪ್ರಯೋಜನಗಳೊಂದಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಿಗೆ (REIT ಗಳು) ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಿಗೆ (InvITs) ಉತ್ತೇಜನ.
ಇದನ್ನೂ ಓದಿ- ರಿಲಯನ್ಸ್ ಇಂಡಸ್ಟ್ರೀಸ್ ನ ನಿಜವಾದ ಮಾಲೀಕ ಅಂಬಾನಿ ಸಹೋದರರಲ್ಲ! ಕಂಪನಿಯ ಅತಿ ಹೆಚ್ಚು ಶೇರ್ ಇರುವುದು ಈ ವ್ಯಕ್ತಿಯ ಹೆಸರಿನಲ್ಲಿ !
6. ಮೂಲಸೌಕರ್ಯ ಅಭಿವೃದ್ಧಿ: ಸಂಪರ್ಕವನ್ನು ಸುಧಾರಿಸಲು ಮತ್ತು ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಬೆಂಬಲಿಸಲು ರಸ್ತೆಗಳು, ಸಾರ್ವಜನಿಕ ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹಲವಾರು ಯೋಜನೆ ನೀಡಬೇಕು.
7. ಬಾಡಿಗೆ ವಸತಿ: ಬಾಡಿಗೆ ಆದಾಯಕ್ಕೆ ತೆರಿಗೆ ವಿನಾಯಿತಿಗಳು ಮತ್ತು ಬಾಡಿಗೆ ವಸತಿ ಯೋಜನೆಗಳಿಗೆ ಬೆಂಬಲ ಸೇರಿದಂತೆ ಬಾಡಿಗೆ ಮನೆಗಳನ್ನು ಉತ್ತೇಜಿಸಲು ನೀತಿಗಳು ಮತ್ತು ಪ್ರೋತ್ಸಾಹ.
8. ಲಿಕ್ವಿಡಿಟಿ ಬೆಂಬಲ: ಡೆವಲಪರ್‌ಗಳಿಗೆ ಲಿಕ್ವಿಡಿಟಿಯನ್ನು ಸುಧಾರಿಸುವ ಕ್ರಮಗಳು, ಹಣಕಾಸು ಮಾರುಕಟ್ಟೆಯಿಂದ ಸುಲಭ ಹಣದ ಸಹಾಯ ಮತ್ತು ಲೋನ್‌ಗಳ ಮೇಲಿನ ಕಡಿಮೆ ಬಡ್ಡಿ ದರಗಳ ಬೇಡಿಕೆ.
ಒಟ್ಟಾರೆ ಇವಿಷ್ಟು ಬೇಡಿಕೆ ಹಾಗೂ ನಿರೀಕ್ಷೆಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಮನೆ ಕಟ್ಟುವರು ಹೊಂದಿದ್ದು, ಯಾವ ರೀತಿ ಕೇಂದ್ರ ಸರ್ಕಾರ ಯೋಜನೆ ಘೋಷಣೆ ಮಾಡಲಿದೆ ಎಂದು ಕಾದುನೋಡಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.