E-Passport: 2022 ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸಲು ಮತ್ತು ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಇ-ಪಾಸ್‌ಪೋರ್ಟ್ ಅನ್ನು ಘೋಷಿಸಿದರು. ಇ-ಪಾಸ್‌ಪೋರ್ಟ್ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಮಾರ್ಗಸೂಚಿಗಳು ಮತ್ತು ನಿಯಮಗಳ ಅಡಿಯಲ್ಲಿ ಸರ್ಕಾರವು ಈ ಸೇವೆಯನ್ನು ಪ್ರಾರಂಭಿಸಲಿದೆ.


COMMERCIAL BREAK
SCROLL TO CONTINUE READING

ಇ- ಪಾಸ್‌ಪೋರ್ಟ್ (E-Passport) ನಕಲಿ ಪಾಸ್‌ಪೋರ್ಟ್‌ಗಳ ಹಾವಳಿಗೆ ಕಡಿವಾಣ ಹಾಕುವುದಲ್ಲದೆ, ಜಾಗತಿಕ ಮಟ್ಟದಲ್ಲಿ ವಲಸೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಆದರೆ ಈ ಇ-ಪಾಸ್‌ಪೋರ್ಟ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿದೆ. ಹಾಗಾದರೆ ಇ-ಪಾಸ್‌ಪೋರ್ಟ್ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ಈ ಸುದ್ದಿಯಲ್ಲಿ ತಿಳಿಯಿರಿ.


ಇ-ಪಾಸ್‌ಪೋರ್ಟ್ ಹೊಸ ತಂತ್ರಜ್ಞಾನವನ್ನು ಆಧರಿಸಿರುತ್ತದೆ ಮತ್ತು ಭದ್ರತೆಯ ದೃಷ್ಟಿಯಿಂದಲೂ ಹೆಚ್ಚು ಬಲಿಷ್ಠವಾಗಿರುತ್ತದೆ. ಇ-ಪಾಸ್‌ಪೋರ್ಟ್‌ಗಾಗಿ ಅರ್ಜಿಗಳು 2022-2023 ರಿಂದ ಪ್ರಾರಂಭವಾಗುತ್ತವೆ ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. ದೇಶದ ನಾಗರಿಕರು ವಿದೇಶ ಪ್ರಯಾಣವನ್ನು ಸುಲಭಗೊಳಿಸುವ ಉದ್ದೇಶದಿಂದ ಇ-ಪಾಸ್‌ಪೋರ್ಟ್ ಪರಿಚಯಿಸಲಾಗುವುದು. ಇ-ಪಾಸ್‌ಪೋರ್ಟ್ ಸೇವೆಯನ್ನು ಪ್ರಾರಂಭಿಸಿದ ನಂತರ, ಆಯ್ದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಲಾಗುವುದು. ಸದ್ಯ ಅಮೆರಿಕ, ಯುರೋಪ್, ಜರ್ಮನಿ ಸೇರಿದಂತೆ 120ಕ್ಕೂ ಹೆಚ್ಚು ದೇಶಗಳಲ್ಲಿ ಈ ಸೌಲಭ್ಯವಿದೆ. 


ಇದನ್ನೂ ಓದಿ - e-Passport: ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ವಿತರಣೆ ಎಂದಿನಿಂದ ಪ್ರಾರಂಭ?


ಏನಿದು ಇ-ಪಾಸ್‌ಪೋರ್ಟ್?
ಇ-ಪಾಸ್‌ಪೋರ್ಟ್ ಕುರಿತು ಹೇಳುವುದಾದರೆ, ಇದು ಆಧುನಿಕ ಪಾಸ್‌ಪೋರ್ಟ್ ಆಗಿರುತ್ತದೆ, ಇದರಲ್ಲಿ ಚಿಪ್ ಇರುತ್ತದೆ. ಇದು ಪ್ರಯಾಣಿಕರ ಡೇಟಾ ಸುರಕ್ಷತೆಗೆ ಸಹಾಯ ಮಾಡುತ್ತದೆ. ಈ ಪಾಸ್‌ಪೋರ್ಟ್‌ನಲ್ಲಿ (Passport) ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಮತ್ತು ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಸಹ ಬಳಸಲಾಗುತ್ತದೆ. ಇದರಲ್ಲಿರುವ ಚಿಪ್ ಸಹಾಯದಿಂದ ವಿದೇಶಕ್ಕೆ ಪ್ರಯಾಣಿಸುವಾಗ ಕೌಂಟರ್ ನಲ್ಲಿ ಪಾಸ್ ಪೋರ್ಟ್ ಅನ್ನು ಸುಲಭವಾಗಿ ಸ್ಕ್ಯಾನ್ ಮಾಡಬಹುದು. ಇ-ಪಾಸ್‌ಪೋರ್ಟ್‌ಗಳು ಭೌತಿಕ ಪಾಸ್‌ಪೋರ್ಟ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಇದು ನಕಲಿ ಪಾಸ್‌ಪೋರ್ಟ್‌ಗಳ ಹಾವಳಿಯನ್ನು ಕಡಿಮೆ ಮಾಡುವಲ್ಲಿಯೂ ಸಹಾಯಕವಾಗಿದೆ.


ಇ-ಪಾಸ್‌ಪೋರ್ಟ್ ಹೇಗೆ ಕೆಲಸ ಮಾಡುತ್ತದೆ?
ಇ-ಪಾಸ್‌ಪೋರ್ಟ್‌ನಲ್ಲಿ ಸ್ಥಾಪಿಸಲಾದ ಚಿಪ್‌ನ ಸಹಾಯದಿಂದ, ಅದನ್ನು ಸ್ಕ್ಯಾನ್ ಮಾಡುವುದು ತುಂಬಾ ಸುಲಭ. ಸಾಮಾನ್ಯವಾಗಿ ವಿದೇಶ ಪ್ರವಾಸದ ವೇಳೆ ವಲಸೆಗಾಗಿ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಇ-ಪಾಸ್‌ಪೋರ್ಟ್‌ನ ಸಹಾಯದಿಂದ ಪಾಸ್‌ಪೋರ್ಟ್ ಅನ್ನು ಕೆಲವೇ ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಇದು ವಲಸೆಯನ್ನು ಸುಲಭಗೊಳಿಸುತ್ತದೆ. ಇ-ಪಾಸ್‌ಪೋರ್ಟ್‌ನ ಹಿಂಭಾಗದಲ್ಲಿ ಸಿಲಿಕಾನ್ ಚಿಪ್ ಅನ್ನು ಬಳಸಲಾಗಿದ್ದು ಇದರಲ್ಲಿ 64kb ಮೆಮೊರಿಯನ್ನು ಸಂಗ್ರಹಿಸಬಹುದಾಗಿದೆ. ಪಾಸ್‌ಪೋರ್ಟ್ ಹೊಂದಿರುವವರ ಫೋಟೋ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಈ ಚಿಪ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಪ್ರಯಾಣಿಕರ 30 ಭೇಟಿಗಳನ್ನು ಇ-ಪಾಸ್‌ಪೋರ್ಟ್‌ನಲ್ಲಿ ಸಂಗ್ರಹಿಸಬಹುದು.


ಇದನ್ನೂ ಓದಿ- EPFO Alert: ಪಿಎಫ್ ಖಾತೆದಾರರಿಗೆ ಮಹತ್ವದ ಸುದ್ದಿ! EPFO ನೀಡಿದೆ ಈ ಎಚ್ಚರಿಕೆ


ಇ-ಪಾಸ್‌ಪೋರ್ಟ್‌ನ ಪ್ರಯೋಜನಗಳೇನು?
>> ಇ-ಪಾಸ್‌ಪೋರ್ಟ್‌ನ ದೊಡ್ಡ ಪ್ರಯೋಜನವೆಂದರೆ ಅದರ ಆಗಮನದಿಂದಾಗಿ, ನಕಲಿ ಪಾಸ್‌ಪೋರ್ಟ್‌ಗಳ ತಲೆಬಿಸಿ ಕಡಿಮೆ ಆಗಲಿದೆ.
>> ಭೌತಿಕ ಪಾಸ್‌ಪೋರ್ಟ್‌ಗಿಂತ ಇ-ಪಾಸ್‌ಪೋರ್ಟ್ ಹೆಚ್ಚು ಸುರಕ್ಷಿತವಾಗಿರುತ್ತದೆ.
>> ಇ-ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಬಯೋಮೆಟ್ರಿಕ್ ಡೇಟಾ ಸಂಗ್ರಹವಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಪಾಸ್‌ಪೋರ್ಟ್ ಕಳೆದುಕೊಂಡರೆ ಪ್ರಯಾಣಿಕರು ಯಾವುದೇ ರೀತಿಯ ತೊಂದರೆ ಎದುರಿಸಬೇಕಾಗಿಲ್ಲ.
>> ಅತ್ಯಂತ ಮುಖ್ಯವಾದ ವಿಷಯವೆಂದರೆ ಇ-ಪಾಸ್ಪೋರ್ಟ್ ಆಗಮನದ ನಂತರ, ಪರಿಶೀಲನೆಯ ಸಮಯ ಉಳಿಯುತ್ತದೆ. 
>> ಇದಲ್ಲದೆ, ವಲಸೆಯು ತುಂಬಾ ಸುಲಭವಾಗುತ್ತದೆ, ಇದು ವೇಗವನ್ನು ಸಹ ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.