Fuel Credit Card: ವೈಯಕ್ತಿಕ ವಾಹನಗಳನ್ನು ಬಳಸುವವರಿಗೆ ಪ್ರತಿ ನಿತ್ಯ ಓಡಾಡಲು ಇಂಧನದ ಅವಶ್ಯಕತೆ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರದಿಂದಾಗಿ ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂಧನ ಬೆಲೆಗಳು ಕೂಡ ಗಗಣಕ್ಕೆರಿರುವುದರಿಂದ ತಿಂಗಳ ಕೊನೆಯಲ್ಲಿ ಬಜೆಟ್ (Budget) ಸಮಸ್ಯೆಯಿಂದ ಪೆಟ್ರೋಲ್ ತುಂಬುವುದು ಕೂಡ ಕ್ಲಿಷ್ಟಕರ ಪರಿಸ್ಥಿತಿ ಎಂದರೂ ತಪ್ಪಾಗಲಾರದು. ಆದರೆ, ನಿಮ್ಮ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಇಂಧನ ಕ್ರೆಡಿಟ್ ಕಾರ್ಡ್‌ಗಳು ಪ್ರಯೋಜನಕಾರಿ ಆಗಿವೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಇಂಧನ ಕ್ರೆಡಿಟ್ ಕಾರ್ಡ್‌ಗಳು (Fuel Credit Cards) ಡಿಸ್ಕೌಂಟ್‌ಗಳು, ಅತ್ಯಾಕರ್ಷಕ ರಿವಾರ್ಡ್ ಗಳು, ಮತ್ತು ಇಂಧನ ಸರ್ಚಾರ್ಜ್ ಮನ್ನಾಗಳಂತಹ ಹಲವು ಆಯ್ಕೆಗಳನ್ನು ಒಳಗೊಂಡಿವೆ. ಹಾಗಾಗಿಯೇ, ಇಂಧನ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ ನೀವು ಖಂಡಿತವಾಗಿಯೂ ಇಂಧನ ವೆಚ್ಚವನ್ನು ಕಡಿಮೆ ಮಾಡಬಹುದು. 


ಏನಿದು ಇಂಧನ ಕ್ರೆಡಿಟ್ ಕಾರ್ಡ್? 
ಗ್ರಾಹಕರಿಗೆ ರಿವಾರ್ಡ್ಸ್, ಸೇವಿಂಗ್ಸ್ ನೀಡುವ ಹಲವಾರು ರೀತಿಯ ಕ್ರೆಡಿಟ್ ಕಾರ್ಡ್‌ಗಳಲ್ಲಿ (Credit Cards) ಇಂಧನ ಕ್ರೆಡಿಟ್ ಕಾರ್ಡ್ ಕೂಡ ಒಂದು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಇಂಡಿಯನ್ ಆಯಿಲ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರರಾಗಿರುವ ಬ್ಯಾಂಕುಗಳಿಂದ ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಬಹುದು.


ಇದನ್ನೂ ಓದಿ- ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ!


ಇಂಧನ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ? 
ಮೊದಲೇ ತಿಳಿಸಿದಂತೆ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಬ್ಯಾಂಕ್‌ಗಳಿಂದ ಇಂಧನ ಕ್ರೆಡಿಡ್ ಕಾರ್ಡ್ ಅನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಅಥವಾ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮಿಚ್ಚೆಯ ಕಾರ್ಡ್ ಆರಿಸಬೇಕು. 


ಅರ್ಹತಾ ಮಾನದಂಡ: 
ಇಂಧನ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ವಿಭಿನ್ನ ಸಾಲದಾತರು ವಿಭಿನ್ನ ಅರ್ಹತಾ ಮಾನದಂಡಗಳನ್ನು ಹೊಂದಿದ್ದಾರೆ. ಬ್ಯಾಂಕ್ ಅನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬೇಕಾಗುತ್ತದೆ. 


ಇದನ್ನೂ ಓದಿ- Bank Scheme: ಎಚ್‌ಡಿ‌ಎಫ್‌ಸಿ ಬ್ಯಾಂಕ್‌ನ ವಿಶೇಷ ಯೋಜನೆ, ಸಿಗುತ್ತೆ ಬಂಪರ್ ಲಾಭ


ಇಂಧನ ಕ್ರೆಡಿಟ್ ಕಾರ್ಡ್ ಹೇಗೆ ಪ್ರಯೋಜನಕಾರಿ?
ಇಂಧನ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ಇಂಧನವನ್ನು ಹಾಕಿಸುವಾಗ ಪಾವತಿಸಲು ಅನುಕೂಲವಾಗುವುದು ಮಾತ್ರವಲ್ಲದೆ, ಇಂಧನ ಕ್ರೆಡಿಟ್ ಕಾರ್ಡ್‌ಗಳು ನಿಮ್ಮ ಇಂಧನ ವೆಚ್ಚವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಕೆಲವು ಇಂಧನ ಕ್ರೆಡಿಟ್ ಕಾರ್ಡ್‌ಗಳು ಪ್ರತಿ ಬಾರಿ ಇಂಧನವನ್ನು ಖರೀದಿಸಿದಾಗ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡಿದರೆ, ಇನ್ನೂ ಕೆಲವು ಕ್ರೆಡಿಟ್ ಕಾರ್ಡ್‌ಗಳಲ್ಲಿ ಪ್ರಯಾಣ ಬಹುಮಾನಗಳು, ರಿಡೀಮ್ ಮಾಡಬಹುದಾದ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುತ್ತವೆ. 


ಈ ಕಾರ್ಡ್‌ಗಳು ಹೆಚ್ಚುವರಿ ಶುಲ್ಕ ಮನ್ನಾದಂತಹ ಕೊಡುಗೆಗಲನು ನೀಡುತ್ತವೆ. ಇದರೊಂದಿಗೆ ಪ್ರತಿಯೊಂದು ಇಂಧನ ಪಾವತಿಗಳಲ್ಲಿ ನೀವು 1% ರಿಂದ 2.5% ವರೆಗೆ ಉಳಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.