Everything About Pink Tax: ಮಾರಾಟ ತೆರಿಗೆ, ಸೇವಾ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಆದಾಯ ತೆರಿಗೆ, ಉಡುಗೊರೆ ತೆರಿಗೆ, ಕ್ಯಾಪಿಟಲ್ ಗೇನ್ಸ್ ತೆರಿಗೆ, ಮೌಲ್ಯವರ್ಧಿತ ತೆರಿಗೆ... ಇತ್ಯಾದಿ ತೆರಿಗೆಗಳ ಹೆಸರನ್ನು ನೀವು ಕೇಳಿರಲೂಬಹುದು ಮತ್ತು ಪಾವತ್ತಸುತ್ತಲೂ ಇರಬಹುದು. ಈ ತೆರಿಗೆಗಳು ಯಾವುದೇ ಲಿಂಗ ಬೇಧ ಹೊಂದಿಲ್ಲ. ಅದು ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ, ಇಬ್ಬರೂ ಒಂದೇ ತೆರಿಗೆಯನ್ನು ಪಾವತಿಸಬೇಕು, ಆದರೆ ಮಹಿಳೆಯರಿಂದ ಮಾತ್ರ ಸಂಗ್ರಹಿಸುವ ತೆರಿಗೆಯೊಂದು ಇದೆ.  ಹೆಣ್ಣೇ ದುಬಾರಿ ಎಂಬುದು ಈ ತೆರಿಗೆ ತಿಳಿಯುತ್ತದೆ. ಹೌದು, ನಾವು ಮಾತನಾಡುತ್ತಿರುವುದು ಪಿಂಕ್ ಟ್ಯಾಕ್ಸ್ ಬಗ್ಗೆ. ಇತ್ತೀಚೆಗೆ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಅವರು ಪಿಂಕ್ ಟ್ಯಾಕ್ಸ್ ಬಹಿಷ್ಕರಿಸಲು ಕರೆ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.(Business News In Kannada)


COMMERCIAL BREAK
SCROLL TO CONTINUE READING

ಗುಲಾಬಿ ತೆರಿಗೆ ಎಂದರೇನು? (Pink Tax In India)
ಈ ಪದವು ಮೊದಲ ಬಾರಿಗೆ 2015 ರಲ್ಲಿ ಚರ್ಚೆಗೆ ಬಂದಿತು, ನ್ಯೂಯಾರ್ಕ್‌ನ ಇಲಾಖೆಯು ಒಂದೇ ವರ್ಗದ, ಒಂದೇ ಗಾತ್ರದ ಮತ್ತು ಒಂದೇ ಪ್ರಮಾಣದ ಹಲವಾರು ಉತ್ಪನ್ನಗಳನ್ನು ಅಧ್ಯಯನ ಮಾಡಿದಾಗ. ಇದೇ ರೀತಿಯ ಉತ್ಪನ್ನಗಳನ್ನು ಅಧ್ಯಯನ ಮಾಡಿದಾಗ, ಪುರುಷರಿಗಾಗಿ ತಯಾರಿಸಿದ ಉತ್ಪನ್ನಗಳಿಗಿಂತ ಮಹಿಳೆಯರಿಗಾಗಿ ತಯಾರಿಸಿದ ಉತ್ಪನ್ನಗಳು ಹೆಚ್ಚು ದಿಬಾರಿಯಾಗಿರುವುದು ಎಂದು ಕಂಡುಬಂದಿದೆ. ಒಂದೇ ವರ್ಗ, ಆದರೆ ವಿಭಿನ್ನ ಬೆಲೆಗಳು. ಅದೇ ಕಂಪನಿಯ ಉತ್ಪನ್ನಗಳು, ಅದೇ ಆವೃತ್ತಿ, ಆದರೆ ಮಹಿಳೆಯರಿಗಾಗಿ ತಯಾರಿಸಿದ ಉತ್ಪನ್ನಗಳು ಪುರುಷರ ಉತ್ಪನ್ನಗಳಿಗಿಂತ ಹೆಚ್ಚು ದುಬಾರಿಯಾಗಿರುವುದು ಗಮನಕ್ಕೆ ಬಂದಿದೆ (What is pink tax and how it has been collected).


ಗುಲಾಬಿ ತೆರಿಗೆಯನ್ನು ಹೇಗೆ ಸಂಗ್ರಹಿಸಲಾಗುತ್ತದೆ? (PInk Tax Pros And Cons)
ಮಹಿಳೆಯರಿಗೆ ವಿಶೇಷವಾಗಿ ತಯಾರಿಸಲಾದ ಇಂತಹ ಉತ್ಪನ್ನಗಳು. ಮೇಕಪ್, ನೇಲ್ ಪೇಂಟ್, ಲಿಪ್‌ಸ್ಟಿಕ್, ಕೃತಕ ಆಭರಣಗಳು, ಸ್ಯಾನಿಟರಿ ಪ್ಯಾಡ್‌ಗಳಂತಹ ಉತ್ಪನ್ನಗಳಿಗೆ ಮಹಿಳೆಯರು ಹೆಚ್ಚು ಹೆಚ್ಚು ಹಣಪಾವತಿಸುತ್ತಾರೆ. ಪುರುಷರು ಮತ್ತು ಮಹಿಳೆಯರು ಬಳಸುವ ಸುಗಂಧ ದ್ರವ್ಯ, ಪೆನ್ನು, ಬ್ಯಾಗ್, ಹೇರ್ ಆಯಿಲ್, ರೇಜರ್ ಮತ್ತು ಬಟ್ಟೆ ಇತ್ಯಾದಿಗಳು ಒಂದೇ ಕಂಪನಿಯದ್ದಾಗಿದ್ದರೂ, ಮಹಿಳೆಯರ ಉತ್ಪನ್ನಗಳು ದುಬಾರಿಯಾಗಿವೆ, ಉದಾಹರಣೆಗೆ, ಪುರುಷರ ಲಿಪ್ ಬಾಮ್ ಬೆಲೆ 70 ರೂ. ಮಹಿಳೆಯರ ಲಿಪ್ ಬಾಮ್ 150 ರೂ. ಪುರುಷರ ಡಿಯೋ 100 ರೂ.ಗೆ ಮಾರಾಟವಾಗುತ್ತಿದ್ದರೆ, ಮಹಿಳೆಯರ ಡಿಯೋ 115 ರೂ.ಗೆ ಮಾರಾಟವಾಗುತ್ತಿದೆ. ಅದು ಸೌಂದರ್ಯ ಉತ್ಪನ್ನಗಳಾಗಲಿ ಅಥವಾ ಫ್ಯಾಷನ್ ಬ್ರ್ಯಾಂಡ್‌ಗಳಾಗಲಿ, ಪರಿಸ್ಥಿತಿ ಎಲ್ಲೆಡೆ ಒಂದೇ ಇದೆ. ಮಹಿಳೆಯರಿಗಾಗಿ ತಯಾರಿಸಿದ ಉತ್ಪನ್ನಗಳ ಬೆಲೆ ಪುರುಷ ಉತ್ಪನ್ನಗಳಿಗಿಂತ ಹೆಚ್ಚಾಗಿದೆ. ಶಾಪಿಂಗ್ ಮಾಡುವಾಗ ನೀವು ಸಹ ಗಮನ ಹರಿಸಿದರೆ, ಈ ವ್ಯತ್ಯಾಸವನ್ನು ನೀವು ಸ್ಪಷ್ಟವಾಗಿ ನೋಡಬಹುದು.


ಇದನ್ನೂ ಓದಿ-New EV: ಮಾರುಕಟ್ಟೆಗೆ ಲಗ್ಗೆ ಇಟ್ಟ ಮತ್ತೊಂದು ಇಲೆಕ್ಟ್ರಿಕ್ ದ್ವಿಚಕ್ರ ವಾಹನ, ರೆಂಜ್-ಬೆಲೆ ಎಷ್ಟು ಗೊತ್ತಾ?


ಗುಲಾಬಿ ತೆರಿಗೆಗೆ ಕಾರಣವೇನು? (Pink Tax Examples)
ಪಿಂಕ್ ಟ್ಯಾಕ್ಸ್‌ನ ಸಮಸ್ಯೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಇದೆ. ಈ ತೆರಿಗೆಯನ್ನು ಮೊದಲ ಬಾರಿಗೆ ಅಮೆರಿಕದಲ್ಲಿ 2015 ರಲ್ಲಿ ಬಹಿರಂಗಪಡಿಸಲಾಗಿದೆ. ಮಹಿಳೆಯರಿಗಾಗಿ ಉತ್ಪನ್ನಗಳನ್ನು ತಯಾರಿಸಲು ಹೆಚ್ಚು ವೆಚ್ಚವಾಗುತ್ತದೆ ಎಂದು ಕಂಪನಿಗಳು ವಾದಿಸುತ್ತವೆ. ಅದೇ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡಲು ಮಹಿಳೆಯರು ಸಿದ್ಧರಿಸುತ್ತಾರೆ, ಆದ್ದರಿಂದ ಮಾರುಕಟ್ಟೆಯು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ವಾದಿಸಲಾಗುತ್ತದೆ. ಇದೆ ವೇಳೆ ಪುರುಷರು ಮತ್ತು ಮಹಿಳೆಯರಿಗಾಗಿ ತಯಾರಿಸಿದ ಉತ್ಪನ್ನಗಳು ಒಂದೇ ರೀತಿಯದ್ದಲ್ಲ ಎಂಬ  ತರ್ಕವನ್ನು ಕೂಡ ಮಂಡಿಸಲಾಗುತ್ತದೆ. ಹುಡುಗಿಯರ ಪಿಂಕ್ ಸ್ಕೂಟರ್‌ಗಳ ಬೆಲೆ ಕೆಂಪು ಸ್ಕೂಟರ್‌ಗಳಿಗಿಂತ ಹೆಚ್ಚು. ಏಕೆಂದರೆ ಅವುಗಳ ಬೇಡಿಕೆ ಕಡಿಮೆಯಾಗಿದೆ. ಕಂಪನಿಯು ಹೆಚ್ಚು ಕೆಂಪು ಸ್ಕೂಟರ್‌ಗಳನ್ನು ತಯಾರಿಸುತ್ತದೆ ಮತ್ತು ಅವುಗಳನ್ನು ತಯಾರಿಸಲು ವೆಚ್ಚ ಕಡಿಮೆ ತಗುಲುತ್ತದೆ. ಸ್ತ್ರೀ ಉತ್ಪನ್ನದ ಸೂತ್ರೀಕರಣವು ದುಬಾರಿಯಾಗಿದೆ.


ಇದನ್ನೂ ಓದಿ-PPF Scheme ನಲ್ಲಿ ಹಣ ಹೂಡಿಕೆ ಮಾಡುತ್ತೀರಾ? ಈ ಇಂಪಾರ್ಟೆಂಟ್ ಸುದ್ದಿ ಕೇವಲ ನಿಮಗಾಗಿ!


ಗುಲಾಬಿ ತೆರಿಗೆಯನ್ನು ಏಕೆ ಸಂಗ್ರಹಿಸಲಾಗುತ್ತದೆ? (pink tax repeal act)
ಈ ಗುಲಾಬಿ ತೆರಿಗೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಇದು ತೆರಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳ ಮಾರುಕಟ್ಟೆ ತಂತ್ರವಾಗಿದೆ. ಮಹಿಳೆಯರಿಗಾಗಿ ತಯಾರಿಸಿದ ಉತ್ಪನ್ನಗಳ ಬೆಲೆ ಹೆಚ್ಚು ಎಂದು ಕಂಪನಿಗಳು ವಾದಿಸುತ್ತವೆ. ಇಂತಹ ಉತ್ಪನ್ನಗಳ ಮಾರುಕಟ್ಟೆಯಿಂದ ಮಹಿಳೆಯರು ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತಾರೆ. ಮಹಿಳೆಗೆ ಆ ಪ್ರಾಡಕ್ಟ್ ಇಷ್ಟವಾದರೆ ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ಅಂತಹ ಲಾಭವನ್ನು ಏಕೆ ಬಿಟ್ಟುಕೊಡಲು ಬಯಸುತ್ತವೆ? ಗುಲಾಬಿ ತೆರಿಗೆಯು ಕಂಪನಿಗಳ ಗಳಿಕೆಯನ್ನು ಬಹುಪಟ್ಟು ಹೆಚ್ಚಿಸುತ್ತದೆ. ಕಂಪನಿಗಳು ವೈಯಕ್ತಿಕ ಆರೈಕೆ ಉತ್ಪನ್ನಗಳು, ಆಟಿಕೆಗಳು, ವಿಶೇಷ ರೀತಿಯ ಸೇವೆಗಳ ಮೇಲೆ ಗುಲಾಬಿ ತೆರಿಗೆ ರೂಪದಲ್ಲಿ ಮಹಿಳೆಯರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿವೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ