Todays Gold Rate: ಗಣೇಶ ಹಬ್ಬದಂದು ಚಿನ್ನದ ಬೆಲೆಯಲ್ಲಿ ಇಳಿಕೆ!? ಇಂದು 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?
today gold price: ಚಿನ್ನವು ಅತ್ಯಂತ ಬೆಲೆಬಾಳುವ ಮತ್ತು ದುಬಾರಿ ಲೋಹಗಳಲ್ಲಿ ಒಂದಾಗಿದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಪ್ರಸ್ತುತ ಇದು ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ.
Todays Gold Rate in India: ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ರೂ. 6,680 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ, 7,287 ಆಗಿದೆ. ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಬಂಗಾರ ಖರೀದಿಸುವವರು ಅದಕ್ಕೂ ಮುನ್ನ ನಿಮ್ಮ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: 82 ಅಡಿ ಸಮುದ್ರದಾಳದಲ್ಲಿ 'ಅಮ್ಮು' ಟೈಟಲ್ ಅನಾವರಣ: ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದ ಚಿತ್ರತಂಡ
ಚಿನ್ನವು ಅತ್ಯಂತ ಬೆಲೆಬಾಳುವ ಮತ್ತು ದುಬಾರಿ ಲೋಹಗಳಲ್ಲಿ ಒಂದಾಗಿದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಪ್ರಸ್ತುತ ಇದು ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ.
ಅಂದಹಾಗೆ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯ ಹೊರತಾಗಿಯೂ, ಭಾರತೀಯರು ಚಿನ್ನದ ಮೇಲಿನ ಹೂಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಯುಎಸ್ ಡಾಲರ್ ಬಲದಿಂದ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿನ ಪೂರೈಕೆ ಮತ್ತು ಬೇಡಿಕೆಯ ಆಧಾರದ ಮೇಲೆ ಚಿನ್ನದ ಮೇಲಿನ ಸುಂಕವನ್ನು ನಿರ್ಧರಿಸಲಾಗುತ್ತದೆ.
ಭಾರತದಲ್ಲಿ ಚಿನ್ನದ ಬೆಲೆಯನ್ನು ತಿಳಿದುಕೊಳ್ಳುವ ಮೊದಲು, 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯ. 24 ಕ್ಯಾರೆಟ್ ಚಿನ್ನವು 100 ಪ್ರತಿಶತ ಶುದ್ಧ ಚಿನ್ನವಾಗಿದ್ದು ಅದು ಯಾವುದೇ ಇತರ ಲೋಹದ ಕಲಬೆರಕೆಯನ್ನು ಹೊಂದಿರುವುದಿಲ್ಲ. ಇನ್ನು ಬೆಳ್ಳಿ ಅಥವಾ ತಾಮ್ರದಂತಹ ಮಿಶ್ರಲೋಹವನ್ನು 22 ಕ್ಯಾರೆಟ್ ಚಿನ್ನದಲ್ಲಿ ಬೆರೆಸಲಾಗುತ್ತದೆ. 22 ಕ್ಯಾರೆಟ್ ಚಿನ್ನವು 91.67 ಪ್ರತಿಶತ ಶುದ್ಧ ಚಿನ್ನವನ್ನು ಹೊಂದಿರುತ್ತದೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ (22K)
ಚೆನ್ನೈ ₹ 6,680
ಮುಂಬೈ ₹ 6,680
ದೆಹಲಿ ₹ 6,695
ಕೋಲ್ಕತ್ತಾ ₹ 6,680
ಬೆಂಗಳೂರು ₹ 6,680
ಹೈದರಾಬಾದ್ ₹ 6,680
ಕೇರಳ ₹ 6,680 ₹
ಇದನ್ನೂ ಓದಿ: QR ಕೋಡ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತಾ?
ಹಾಲ್ ಮಾರ್ಕಿಂಗ್ ಮೂಲಕ ಚಿನ್ನವನ್ನು ಗುರುತಿಸುವುದು ಹೇಗೆ?
ಸರ್ಕಾರವು 1 ಜುಲೈ 2021 ರಿಂದ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ಈಗ ಚಿನ್ನದ ಮೇಲೆ ಮೂರು ರೀತಿಯ ಚಿಹ್ನೆಗಳಿರುತ್ತವೆ. ಇವುಗಳಲ್ಲಿ BIS ಲೋಗೋ, ಶುದ್ಧತೆಯ ದರ್ಜೆ ಮತ್ತು HUID ಎಂದೂ ಕರೆಯಲ್ಪಡುವ 6 ಅಂಕಿಗಳ ಆಲ್ಫಾನ್ಯೂಮರಿಕ್ ಕೋಡ್ ಸೇರಿವೆ. 24 ಕ್ಯಾರೆಟ್ ಚಿನ್ನವು ಅತ್ಯಂತ ಪರಿಶುದ್ಧವಾಗಿದೆ. ಆದರೆ 24 ಕ್ಯಾರೆಟ್ ಚಿನ್ನದಲ್ಲಿ ಆಭರಣ ಮಾಡಲಾಗುವುದಿಲ್ಲ. 18 ಮತ್ತು 22 ಕ್ಯಾರೆಟ್ ಚಿನ್ನದಿಂದಷ್ಟೇ ಆಭರಣ ತಯಾರಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ