Tomato Rate: ಗಗನ ಮುಖಿಯಾಗಿರುವ ಟೋಮ್ಯಾಟೊ ಧಾರಣೆ ಯಾವಾಗ ಇಳಿಕೆಯಾಗಲಿದೆ? ಸರ್ಕಾರ ನೀಡಿದೆ ಈ ಮಾಹಿತಿ
Tomato Rate: ಮುಂಬರುವ 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಲಿದೆ ಮತ್ತು ಉತ್ಪಾದಕ ಕೇಂದ್ರಗಳಿಂದ ಹೆಚ್ಚಿನ ಪೂರೈಕೆಯೊಂದಿಗೆ ಒಂದು ತಿಂಗಳಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ.
Tomato Rate: ಮುಂಬರುವ 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಲಿದೆ ಮತ್ತು ಉತ್ಪಾದಕ ಕೇಂದ್ರಗಳಿಂದ ಹೆಚ್ಚಿನ ಪೂರೈಕೆಯೊಂದಿಗೆ ಒಂದು ತಿಂಗಳಲ್ಲಿ ಸಾಮಾನ್ಯ ಮಟ್ಟಕ್ಕೆ ಮರಳುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎನ್ನಲಾಗಿದೆ. ಪ್ರತಿ ಮನೆಯಲ್ಲೂ ಬಳಸುವ ಈ ಪ್ರಮುಖ ತರಕಾರಿಯ ಬೆಲೆ ಹಲವು ಪ್ರಮುಖ ನಗರಗಳಲ್ಲಿ ಕೆಜಿಗೆ 100 ರೂಪಾಯಿ ದಾಟಿದೆ. ಹಿಮಾಚಲ ಪ್ರದೇಶದ ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಿಂದ ಉತ್ತಮ ಸರಬರಾಜಿನಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಟೊಮೆಟೊ ಚಿಲ್ಲರೆ ಬೆಲೆಗಳು ತಕ್ಷಣವೇ ಕಡಿಮೆಯಾಗಲಿವೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದು ಕನಿಷ್ಠ 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಟೊಮೇಟೊ ಬೆಲೆ ಏರಿಕೆಯಾಗುವ ವಿದ್ಯಮಾನ ನಡೆಯುತ್ತಿದೆ. ಪ್ರತಿಯೊಂದು ದೇಶದ ಪ್ರತಿಯೊಂದು ಕೃಷಿ ಸರಕು ಬೆಲೆ ಚಕ್ರದಲ್ಲಿ ಋತುಮಾನದ ಮೂಲಕ ಹಾದುಹೋಗುತ್ತದೆ. ಹೀಗಾಗಿ ಜೂನ್‌ನಲ್ಲಿ ಅದರ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ”ಟೊಮೊಟೊ ಕೊಳೆಯುವ ಉತ್ಪನ್ನವಾಗಿದ್ದು, ಹವಾಮಾನ ಮತ್ತು ಇತರ ಕಾರಣಗಳಿಂದ ಟೊಮೆಟೊ ಪೂರೈಕೆಯೂ ವ್ಯತ್ಯಯವಾಗಿದೆ ಎಂದು ಹೇಳಿದ್ದಾರೆ.
“ನೀವು ದೀರ್ಘಕಾಲದವರೆಗೆ ಟೊಮೆಟೊಗಳನ್ನು ಸಂಗ್ರಹಿಸಿ ಇಡಲಾಗುವುದಿಲ್ಲ ಮತ್ತು ಅದನ್ನು ದೂರದವರೆಗೆ ಸಾಗಿಸಲಾಗುವುದಿಲ್ಲ. ಹೀಗಾಗಿ ಇದು ಆ ಆಹಾರ ಪದಾರ್ಥದಲ್ಲಿನ ದೌರ್ಬಲ್ಯವಾಗಿದೆ. ”ಜೂನ್-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಟೊಮೆಟೊ ಉತ್ಪಾದನೆಯು ಕಡಿಮೆಯಾಗುತ್ತದೆ ಮತ್ತು ಈ ಅವಧಿಯಲ್ಲಿ ಬೆಲೆಗಳು ಸಾಮಾನ್ಯವಾಗಿ ತೀವ್ರ ಹೆಚ್ಚಳವನ್ನು ಕಾಣುತ್ತವೆ ಎಂದು ಅವರು ಹೇಳಿದ್ದಾರೆ. ಜೂನ್ 29 ರಂದು ಅಖಿಲ ಭಾರತ ಸರಾಸರಿ ಚಿಲ್ಲರೆ ಟೊಮೇಟೊ ಬೆಲೆ ಕೆಜಿಗೆ 49 ರೂ. ಇದ್ದರೆ, ವರ್ಷದ ಹಿಂದೆ ಇದೇ ದಿನ ಕೆಜಿಗೆ 51.50 ರೂ. ಇತ್ತು ಎಂದು ಅವರು ಹೇಳಿದ್ದಾರೆ, ಆದರೆ ಇನ್ನೊಂದೆಡೆ “ನಾನು ಈ ದರವನ್ನು ಸಮರ್ಥಿಸುತ್ತಿಲ್ಲ. ಇದು ಋತುಮಾನದ ಸಮಸ್ಯೆಯನ್ನು ಸಾಬೀತುಪಡಿಸುತ್ತದೆ' ಎಂದೂ ಕೂಡ ಅವರು ಹೇಳಿದ್ದಾರೆ.
ಇದನ್ನು ಸಂಕೀರ್ಣ ಸಮಸ್ಯೆ ಎಂದು ವಿವರಿಸಿದ ಕಾರ್ಯದರ್ಶಿ, ಸರ್ಕಾರವು ಇದನ್ನು ಪರಿಶೀಲಿಸುತ್ತಿದೆ ಮತ್ತು ವರ್ಷವಿಡೀ ಅದರ ಪೂರೈಕೆಯನ್ನು ಸುಗಮಗೊಳಿಸಲು ಪರಿಹಾರವನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಶುಕ್ರವಾರದಿಂದಲೇ ಗ್ರ್ಯಾಂಡ್ ಟೊಮೇಟೊ ಚಾಲೆಂಜ್ ಆರಂಭಿಸಲಾಗಿದೆ. ಇದು ಹ್ಯಾಕಥಾನ್‌ನಂತಿದ್ದು, ಟೊಮೆಟೊದ ಪ್ರಾಥಮಿಕ ಸಂಸ್ಕರಣೆ, ಸಂಗ್ರಹಣೆ ಮತ್ತು ಬೆಲೆಯ ಕುರಿತು ವಿದ್ಯಾರ್ಥಿಗಳಿಂದ ಉದ್ಯಮದ ಮಧ್ಯಸ್ಥಗಾರರಿಗೆ ಆಲೋಚನೆಗಳನ್ನು ಆಹ್ವಾನಿಸಲಾಗುತ್ತದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಜೂನ್ 30 ರಂದು ಅಖಿಲ ಭಾರತ ಆಧಾರದ ಮೇಲೆ ಟೊಮೆಟೊದ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 56.58 ರೂ. ಮಾದರಿ ಬೆಲೆ ಕೆಜಿಗೆ 100 ರೂ ಆಗಿದ್ದರೆ ಗರಿಷ್ಠ ಬೆಲೆ ಕೆಜಿಗೆ 123 ರೂ.
ದೆಹಲಿಯಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಕೆಜಿಗೆ 80 ರೂ., ಮುಂಬೈ (ರೂ. 48), ಕೋಲ್ಕತ್ತಾ (105 ರೂ.) ಮತ್ತು ಚೆನ್ನೈ (ಕೆ.ಜಿ.ಗೆ 88 ರೂ.). ಇದಲ್ಲದೆ, ಟೊಮೆಟೊ ಬೆಲೆ ಬೆಂಗಳೂರಿನಲ್ಲಿ ಕೆಜಿಗೆ 54 ರೂ., ಭೋಪಾಲ್ ಮತ್ತು ಲಕ್ನೋದಲ್ಲಿ ಕೆಜಿಗೆ 100 ರೂ., ಶಿಮ್ಲಾದಲ್ಲಿ ಕೆಜಿಗೆ ರೂ. 80, ಭುವನೇಶ್ವರದಲ್ಲಿ ಕೆಜಿಗೆ ರೂ. 98 ಮತ್ತು ರಾಯ್ಪುರದಲ್ಲಿ ರೂ. 99 ರೂ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.