ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಸದಸ್ಯರಿಗಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈಗ ಪಿಎಫ್ ಖಾತೆದಾರರು ವಾಟ್ಸಾಪ್ ಸಹಾಯವಾಣಿ ಸೇವೆ (EPFO whatsapp helpline service) ಮೂಲಕ ಖಾತೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದು. ಈ ಸೌಲಭ್ಯದೊಂದಿಗೆ ನೀವು ಕುಳಿತಲ್ಲಿಯೇ ನಿಮ್ಮ ಪಿಎಫ್ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ.


COMMERCIAL BREAK
SCROLL TO CONTINUE READING

ಈ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು: 
ಇಪಿಎಫ್‌ಒದ (EPFO) ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿ ವಾಟ್ಸಾಪ್ ಸಹಾಯವಾಣಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಯಾವುದೇ ಸದಸ್ಯರು ವಾಟ್ಸಾಪ್ ಸಂದೇಶದ ಮೂಲಕ ದೂರು ನೀಡಬಹುದು. ನಿಮ್ಮ ಪ್ರದೇಶದ ವಾಟ್ಸಾಪ್ (Whatsapp) ಸಂಖ್ಯೆಯನ್ನು ತಿಳಿಯಲು, ಖಾತೆದಾರ ಇಪಿಎಫ್‌ಒ https://www.epfindia.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ನಿಮ್ಮ ಪ್ರದೇಶದ ಸಂಖ್ಯೆಯನ್ನು ತಿಳಿಯಬಹುದು.


ಇದನ್ನೂ ಓದಿ - ಪಿಎಫ್ ಖಾತೆದಾರರೇ EPFOದ ಹೊಸ ಮಾರ್ಗಸೂಚಿಗಳನ್ನು ತಪ್ಪದೇ ತಿಳಿಯಿರಿ


ಇಪಿಎಫ್‌ಒ ಕಾಲ್ ಸೆಂಟರ್‌ನಿಂದಲೂ ಸಹಾಯ ಪಡೆಯಬಹುದು :
ಇಪಿಎಫ್‌ಒನ ಇತರ ವೈಶಿಷ್ಟ್ಯಗಳು  EPFIGMS ಪೋರ್ಟಲ್ (ಆನ್‌ಲೈನ್ ದೂರು ಪರಿಹಾರ ಪೋರ್ಟಲ್), ಸಿಪಿಜಿಆರ್ಎಎಂಎಸ್, ಸೋಷಿಯಲ್ ಮೀಡಿಯಾ (Social Media) ಪ್ಲಾಟ್‌ಫಾರ್ಮ್‌ಗಳು (ಫೇಸ್‌ಬುಕ್ ಮತ್ತು ಟ್ವಿಟರ್) ಮತ್ತು 24 ಗಂಟೆಗಳ ಕಾಲ್ ಸೆಂಟರ್ ಸೇರಿದೆ. https: https://www.epfindia.gov.in/site_docs/PDFs/Downloads_PDFs/WhatsApp_Helpl... ನಲ್ಲಿ ನಿಮಗೆ ಸಂಪೂರ್ಣ ಸಹಾಯ ಸಿಗುತ್ತದೆ.


ಮಧ್ಯವರ್ತಿಗಳಿಂದ ಸ್ವಾತಂತ್ರ್ಯ ಸಿಗುತ್ತದೆ :
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೊರತೆಗೆಯುವಾಗ ಜನರು ಮಧ್ಯವರ್ತಿಗಳ ಹಿಡಿತದಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂಬುದು ಇಪಿಎಫ್‌ಒ (EPFO) ಪ್ರಯತ್ನ. ವಾಸ್ತವವಾಗಿ ಏನಾಗುತ್ತದೆ ಎಂದರೆ ಪಿಎಫ್ ಖಾತೆದಾರರು ಯಾವುದೇ ಕೆಲಸಕ್ಕಾಗಿ ಕಚೇರಿಗೆ ಹೋದಾಗಲೆಲ್ಲಾ ಅವನು ಮಧ್ಯವರ್ತಿಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಗಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಎಲ್ಲಾ ಖಾತೆದಾರರು ತಮ್ಮ ಸಮಸ್ಯೆಗಳನ್ನು ಆನ್‌ಲೈನ್ ಮೂಲಕ ಪರಿಹರಿಸುವುದು ಸರ್ಕಾರದ ಪ್ರಯತ್ನ. ಇದರಿಂದ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುಲಭವಾಗಿ ಯಾವುದೇ ಅಡೆತಡೆ ಇಲ್ಲದೆ ಪಡೆಯುತ್ತಾರೆ. ಅಲ್ಪಾವಧಿಯಲ್ಲಿಯೇ ಹಣ ವರ್ಗಾವಣೆಯಿಂದಾಗಿ, ವ್ಯವಸ್ಥೆಯಲ್ಲಿ ಜನರ ನಂಬಿಕೆಯೂ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ - EPFO ಖಾತೆಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ, ನೀವೂ ಸಹ ಈ ತಪ್ಪು ಮಾಡಿದ್ದರೆ ಇಂದೇ ಸರಿಪಡಿಸಿ


ನಿಮ್ಮ ಸಂಬಳದಿಂದ ಪಿಎಫ್ ಕಡಿತಗೊಳಿಸಲಾಗುವುದು:
ಯಾವುದೇ ಉದ್ಯೋಗಿಯ ಮೂಲ ವೇತನದ ಶೇಕಡಾ 12 ರಷ್ಟು ಪಿಎಫ್ (PF) ಖಾತೆಗೆ ಹೋಗುತ್ತದೆ. ಇದೇ ಪಾಲನ್ನು ಕಂಪನಿಯು ಸಹ ನೀಡುತ್ತದೆ. ವರ್ಷಕ್ಕೆ ಠೇವಣಿ ಇರಿಸಿದ ಮೊತ್ತಕ್ಕೆ ಸರ್ಕಾರ  ಬಡ್ಡಿಯನ್ನು ಪಾವತಿಸುತ್ತದೆ. ಸಾಮಾನ್ಯವಾಗಿ, ಪಿಎಫ್ ಖಾತೆಯ ಬಡ್ಡಿದರವು ಇತರ ಖಾತೆಯ ಬಡ್ಡಿದರಕ್ಕಿಂತ ಹೆಚ್ಚಿನದಾಗಿದೆ. ನಿಯಮಗಳನ್ನು ಅನುಸರಿಸಿ ನೌಕರನು ಈ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.