Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?
Cheque Rules: ಬ್ಯಾಂಕಿಂಗ್ ವ್ಯವಹಾರದಲ್ಲಿ ಚೆಕ್ ಮೂಲಕವೂ ಹಣಕಾಸಿನ ವಹಿವಾಟನ್ನು ನಡೆಸಲಾಗುತ್ತದೆ. ಚೆಕ್‌ಗಳನ್ನು ಸಹ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡಲಾಗುತ್ತದೆ. ಅಷ್ಟಕ್ಕೂ ಯಾವ ಸಮಯದಲ್ಲಿ ಚೆಕ್ ಹಿಂಭಾಗದಲ್ಲಿ ಸಹಿ ಮಾಡಬೇಕು? ಇದರ ಅನುಕೂಲಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ?
Cheque Rules: ಬ್ಯಾಂಕಿಂಗ್ (Banking) ವ್ಯವಹಾರದಲ್ಲಿ ಚೆಕ್‌ಗಳ ಬಳಕೆ ಹೊಸದೇನಲ್ಲ. ಹಲವು ವರ್ಷಗಳಿಂದ ಹಣದ ವಹಿವಾಟಿನಲ್ಲಿ ಚೆಕ್‌ಗಳನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಚೆಕ್‌ಗಳನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅಂತಹ ಒಂದು ವಿಧಾನವೆಂದರೆ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡುವುದು.
ಅಷ್ಟಕ್ಕೂ ಚೆಕ್‌ನ (Cheque) ಹಿಂಭಾದಲ್ಲಿ ಸಹಿ ಮಾಡುವುದೇಕೆ? ಯಾವ ಸಂದರ್ಭದಲ್ಲಿ ಚೆಕ್ ಹಿಂಬದಿಯಲ್ಲಿ ಸಹಿ ಹಾಕಬೇಕಾಗುತ್ತದೆ. ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ಚೆಕ್‌ನ ಹಿಂಭಾಗದಲ್ಲಿ ಸಹಿ ಮಾಡುವುದು ಅಗತ್ಯವೇ? ಒಂದೊಮ್ಮೆ ಚೆಕ್ ಹಿಂಬದಿಯಲ್ಲಿ ಸಹಿ ಹಾಕದಿದ್ದರೆ ಏನಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜವೇ.. ಈ ಕುರಿತಂತೆ ಇಲ್ಲಿದೆ ಮಾಹಿತಿ.
ಯಾವಾಗ ಚೆಕ್ ಹಿಂಬದಿಯಲ್ಲಿ ಸಹಿ ಹಾಕಬೇಕು?
ನೀವು ಬೇರರ್ ಚೆಕ್ (Bearer Cheque) ನೀಡುತ್ತಿದ್ದರೆ ಇಂತಹ ಸಂದರ್ಭದಲ್ಲಿ ಚೆಕ್ ಹಿಂಭಾಗದಲ್ಲಿ ಸಹಿ ಹಾಕುವುದು ಅತ್ಯಾವಶ್ಯಕ. ಏಕೆಂದರೆ ಇಂತಹ ಚೆಕ್ ಗಳಲ್ಲಿ ಹಲವು ಬಾರಿ ಯಾರ ಹೆಸರೂ ಬರೆದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಚೆಕ್ ಹಾಕಿದ ವ್ಯಕ್ತಿಗೆ ಇದರಿಂದ ಸಮಸ್ಯೆ ಆಗಬಹುದು. ಇದನ್ನು ಸುರಕ್ಷಿತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಬ್ಯಾಂಕ್‌ಗಳು ಚೆಕ್ ಅನ್ನು ತರುವ ವ್ಯಕ್ತಿಯ ಸಹಿಯನ್ನು ಚೆಕ್‌ನ ಹಿಂಭಾಗದಲ್ಲಿ ಪಡೆಯುತ್ತವೆ. ಮಾತ್ರವಲ್ಲ, ಚೆಕ್‌ನಿಂದ ಹಿಂತೆಗೆದುಕೊಂಡ ಹಣವನ್ನು ಚೆಕ್ ತಂದ ವ್ಯಕ್ತಿಗೆ ನೀಡಲಾಗಿದೆ ಮತ್ತು ಚೆಕ್ ಅನ್ನು ಅಪರಿಚಿತ ವ್ಯಕ್ತಿಯಿಂದ ಎನ್‌ಕ್ಯಾಶ್ ಮಾಡಿದ್ದರೆ ಅದರಲ್ಲಿ ಬ್ಯಾಂಕ್ ಯಾವುದೇ ಭಾಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ರೀತಿ ಮಾಡಲಾಗುತ್ತದೆ.
ಇದನ್ನೂ ಓದಿ- ಲೋನ್ ಡೀಫಾಲ್ಟರ್ ಆಗುವ ಭಯ ಇನ್ನಿಲ್ಲ : EMI ಪಾವತಿಸುವ ಮುನ್ನ RBIಯ ಈ ನಿಯಮವನ್ನು ತಿಳಿದುಕೊಳ್ಳಿ !
ಬೇರರ್ ಚೆಕ್ ಎಂದರೇನು?
ಬೇರರ್ ಚೆಕ್ (Bearer Cheque) ಎಂದರೆ ಯಾವುದೇ ವ್ಯಕ್ತಿಯು ಅದರ ಮೂಲಕ ಹಣವನ್ನು ಹಿಂಪಡೆಯಬಹುದು. ಸರಳ ಭಾಷೆಯಲ್ಲಿ ಓಪೆನ್ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವುದು. ಎಂದರೆ, ಚೆಕ್‌ನಲ್ಲಿ ಯಾರೊಬ್ಬರ ಹೆಸರನ್ನು ಬರೆದಿದ್ದರೂ, ಆ ಚೆಕ್‌ನಿಂದ ಬೇರೆ ಯಾರಾದರೂ ಹಣವನ್ನು ಹಿಂಪಡೆಯಬಹುದು. ಆದ್ದರಿಂದ, ಯಾವುದೇ ವಂಚನೆಯನ್ನು ತಪ್ಪಿಸಲು, ಬ್ಯಾಂಕ್‌ಗಳು ಚೆಕ್‌ನೊಂದಿಗೆ ಬ್ಯಾಂಕ್‌ಗೆ ತಲುಪಿದ ವ್ಯಕ್ತಿಯನ್ನು ಅದರ ಹಿಂಭಾಗದಲ್ಲಿ ಸಹಿ ಮಾಡುವಂತೆ ಕೇಳಲಾಗುತ್ತದೆ.
ಬ್ಯಾಂಕ್‌ಗಳು ಯಾವಾಗ ವಿಳಾಸ ಪುರಾವೆ ಕೇಳುತ್ತವೆ?
ಕೆಲವೊಮ್ಮೆ ಬೇರರ್ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡಲು ಬ್ಯಾಂಕ್‌ಗೆ ಹೋಗುವ ವ್ಯಕ್ತಿಯ ಬಳಿ ವಿಳಾಸ ಪುರಾವೆಯನ್ನು ಸಹ ಕೇಳಬಹುದು. ಚೆಕ್ ಮೊತ್ತವು ದೊಡ್ಡದಾಗಿದ್ದರೆ ಅಂತಹ ಸಂದರ್ಭದಲ್ಲಿ ವಿಶೇಷವಾಗಿ ಬ್ಯಾಂಕ್‌ಗಳು ವಿಳಾಸ ಪುರಾವೆಯನ್ನು ಪಡೆಯುತ್ತವೆ. ಇದರಿಂದ ಭವಿಷ್ಯದಲ್ಲಿ ಯಾವುದೇ ವಂಚನೆ ಸಂಭವಿಸಿದಲ್ಲಿ, ಆ ವ್ಯಕ್ತಿಯನ್ನು ಸಂಪರ್ಕಿಸಬಹುದು ಮತ್ತು ಒಂದೊಮ್ಮೆ ವಂಚನೆ ಆಗಿದ್ದರೆ ವ್ಯಕ್ತಿಯನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂಬುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ- EPFO Rules: ಈ ಷರತ್ತು ಪೂರೈಸಿದರೆ ಪಿಎಫ್ ಖಾತೆದಾರರಿಗೆ ಸಿಗುತ್ತೆ ₹ 50,000 ನೇರ ಪ್ರಯೋಜನ
ಯಾವ ಸಂದರ್ಭದಲ್ಲಿ ಚೆಕ್ ಹಿಂದೆ ಸೈನ್ ಮಾಡುವುದು ಅಗತ್ಯವಿಲ್ಲ?
ಆರ್ಡರ್ ಚೆಕ್ (Order Cheque) ನೀಡಿದ್ದ ಸಂದರ್ಭದಲ್ಲಿ ಆ ಚೆಕ್ ಹಿಂಭಾಗದಲ್ಲಿ ಸಹಿ ಮಾಡುವ ಅಗತ್ಯವಿರುವುದಿಲ್ಲ. ವಾಸ್ತವವಾಗಿ ಆರ್ಡರ್ ಚೆಕ್‌ನಲ್ಲಿ, ಅದರ ಮೇಲೆ ಯಾರ ಹೆಸರು ಬರೆಯಲಾಗಿದೆಯೋ ಅವರಿಗೆ ಮಾತ್ರ ಹಣವನ್ನು ನೀಡಲಾಗುತ್ತದೆ. ಈ ಚೆಕ್‌ನಲ್ಲಿ ಇದು ಆರ್ಡರ್ ಚೆಕ್ ಮತ್ತು ಬೇರರ್ ಚೆಕ್ ಅಲ್ಲ ಎಂದು ಬರೆಯಲಾಗಿರುತ್ತದೆ. ಈ ಚೆಕ್ ಅನ್ನು ಎನ್‌ಕ್ಯಾಶ್ ಮಾಡುವಾಗ, ವ್ಯಕ್ತಿಯು ಬ್ಯಾಂಕ್‌ನಲ್ಲಿ ಹಾಜರಿರುವುದು ಅವಶ್ಯಕ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.