Highest FD Rate: ಬ್ಯಾಂಕ್‌ಗಳು ಹಿರಿಯ ನಾಗರಿಕರಿಗಾಗಿ ನಡೆಸುವ ಫಿಕ್ಸೆಡ್ ಡೆಪಾಸಿಟ್ (FD Scheme) ಸಾಮಾನ್ಯ ಹೂಡಿಕೆದಾರರಿಗೆ ನಡೆಸುವ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಇದರರ್ಥ ನೀವು ಹಿರಿಯ ನಾಗರಿಕರ ಹೆಸರಿನಲ್ಲಿ ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣದ ಮೇಲೆ ಹೆಚ್ಚಿನ ಆದಾಯವನ್ನು ನೀವು ಪಡೆಯುತ್ತೀರಿ. ಹಿರಿಯ ನಾಗರಿಕರ FD ಯೋಜನೆಗಳು ವೃದ್ಧರಿಗೆ ತಮ್ಮ ಹೂಡಿಕೆಗಳನ್ನು ಬೆಳೆಸಲು ಮತ್ತು ರಕ್ಷಿಸಲು ಉತ್ತಮ ಆಯ್ಕೆಯನ್ನು ಒದಗಿಸುತ್ತವೆ. ಇವುಗಳ ಮೂಲಕ ವೃದ್ಧರ ಆರ್ಥಿಕ ಅಗತ್ಯಗಳನ್ನೂ ಪೂರೈಸಲು ನೆರವಾಗುತ್ತದೆ.


COMMERCIAL BREAK
SCROLL TO CONTINUE READING

ಕೆಲವು ಸಣ್ಣ ಬ್ಯಾಂಕ್‌ಗಳು ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. 9 ಪರ್ಸೆಂಟ್‌ಗಿಂತ ಹೆಚ್ಚು ಬಡ್ಡಿ ನೀಡುತ್ತವೆ. ಇವುಗಳಲ್ಲಿ ಹಿರಿಯ ನಾಗರಿಕರ ಹೆಸರಿನಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಬಡ್ಡಿಯನ್ನು ಪಡೆಯಬಹುದು. 


ಈಕ್ವಿಟೋಸ್ ಸ್ಮಾಲ್ ಫೈನಾನ್ಸ್ : ಈಕ್ವಿಟೋಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ಜನರಿಗೆ 7 ದಿನಗಳಿಂದ 10 ವರ್ಷಗಳವರೆಗಿನ ಠೇವಣಿ ಮೇಲೆ 4% ರಿಂದ 9% ವರೆಗೆ ಬಡ್ಡಿಯನ್ನು ನೀಡುತ್ತದೆ. 444 ದಿನಗಳಲ್ಲಿ ಮೆಚ್ಯುರ್‌ ಆಗುವ FD ಮೇಲೆ ಗರಿಷ್ಠ 9% ಬಡ್ಡಿ ಪಡೆಯಬಹುದು. ಸಾಮಾನ್ಯ ಹೂಡಿಕೆದಾರರಿಗೆ ನೀಡುವ ಬಡ್ಡಿ ದರಗಳಿಗಿಂತ ಹಿರಿಯ ನಾಗರಿಕರು 0.50% ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ.  


ಫಿನ್‌ಕೇರ್ ಸ್ಮಾಲ್ ಫೈನಾನ್ಸ್ : ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ, 3.60% ರಿಂದ 9.21% ವರೆಗಿನ ಬಡ್ಡಿಯನ್ನು ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಯವರೆಗಿನ ಎಫ್‌ಡಿ ಮೇಲೆ ನೀಡಲಾಗುತ್ತದೆ. ಈ ಬ್ಯಾಂಕ್‌ನಲ್ಲಿ ಹೆಚ್ಚಿನ ಬಡ್ಡಿ ದರವು 9.21% ಆಗಿದೆ. ಇದು 750 ದಿನಗಳಲ್ಲಿ ಮೆಚ್ಯುರ್‌ ಆಗುವ FD ಮೇಲೆ ಲಭ್ಯವಿದೆ.  


ಇದನ್ನೂ ಓದಿ: ಫಲಾನುಭವಿ ರೈತರಿಗೊಂದು ಎಚ್ಚರಿಕೆ, ಈ ಎರಡು ಸಂಗತಿ ಮರೆತರೆ ಲಿಸ್ಟ್ ನಿಂದ ನಿಮ್ಮ ಹೆಸರು ಔಟ್! 


ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ : ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ 3.50% ರಿಂದ 9% ಬಡ್ಡಿಯನ್ನು ನೀಡುತ್ತದೆ. ಹೆಚ್ಚಿನ ಬಡ್ಡಿ ದರವು 9% ಆಗಿದೆ, ಇದು 365 ದಿನಗಳಲ್ಲಿ ಮೆಚ್ಯುರ್‌ ಆಗುವ FD ಮೇಲೆ ಲಭ್ಯವಿದೆ.  


ಸೂರ್ಯೋದಯ ಸ್ಮಾಲ್ ಫೈನಾನ್ಸ್ : ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕಿನಿಂದ, ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಯ ಠೇವಣಿ ಮೇಲೆ 4.50% ರಿಂದ 9.10% ವರೆಗೆ ಬಡ್ಡಿಯನ್ನು ನೀಡಲಾಗುತ್ತದೆ. ಬ್ಯಾಂಕಿನ ಅತ್ಯಧಿಕ ಬಡ್ಡಿ ದರವು 9.10% ಆಗಿದೆ, ಇದನ್ನು ಎರಡು ವರ್ಷ ಮೇಲ್ಪಟ್ಟ FD ಮೇಲೆ ನೀಡಲಾಗುತ್ತದೆ. 


ಯೂನಿಟಿ ಸ್ಮಾಲ್ ಫೈನಾನ್ಸ್ : ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ಠೇವಣಿಗಳ ಮೇಲೆ 4.50% ರಿಂದ 9.50% ಬಡ್ಡಿಯನ್ನು ನೀಡುತ್ತದೆ. 1001 ದಿನಗಳ FD ಮೇಲೆ 9.50% ಬಡ್ಡಿ ನೀಡುತ್ತದೆ.  


ಉತ್ಕರ್ಷ್ ಸ್ಮಾಲ್ ಫೈನಾನ್ಸ್ : ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ಠೇವಣಿಗಳ ಮೇಲೆ 4.60% ರಿಂದ 9.10% ಬಡ್ಡಿಯನ್ನು ನೀಡುತ್ತದೆ. ಎರಡರಿಂದ ಮೂರು ವರ್ಷಗಳ ಅವಧಿಯ FD ಮೇಲೆ 9.10% ಬಡ್ಡಿ ನೀಡುತ್ತದೆ. 


ಇದನ್ನೂ ಓದಿ: PPF ನಲ್ಲಿ ಉಳಿತಾಯ ಮಾಡಿ ನೋಡಿ..!ಮುಕ್ತಾಯದ ವೇಳೆ ಭರ್ಜರಿ ಲಾಭ ಪಡೆಯುವಿರಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.