ITR 2024: ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 7 ನಮೂನೆಗಳಲ್ಲಿ ನೀವು ಯಾವುದನ್ನು ಆರಿಸಬೇಕು?
ITR 2024: ಈ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಜುಲೈ 31ರೊಳಗೆ ಐಟಿಆರ್ ರಿಟರ್ನ್ಸ್ ಭರ್ತಿ ಮಾಡಲು ಅವಕಾಶವಿದೆ. ಐಟಿ ಇಲಾಖೆಯಿಂದ ನೀಡಲಾದ 7 ನಮೂನೆಗಳಲ್ಲಿ ನಿಮಗೆ ಸರಿಯಾದ ನಮೂನೆ ಯಾವುದು ಎಂಬ ಮಾಹಿತಿ ಇಲ್ಲಿದೆ.
ITR 2024: ಈ ತಿಂಗಳಾಂತ್ಯದೊಳಗೆ 2023-24ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಇದಕ್ಕಾಗಿ ಜುಲೈ 31 ಕೊನೆ ದಿನಾಂಕವಾಗಿದೆ. ತೆರಿಗೆದಾರರು ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಲು ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ತಾವು ಯಾವ ನಮೂನೆಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು ಎಂಬುದನ್ನು ತಿಳಿಯುವುದು ಕೂಡ ತುಂಬಾ ಅಗತ್ಯ.
ವಾಸ್ತವವಾಗಿ, ಆದಾಯ ತೆರಿಗೆ ಇಲಾಖೆ (Income Tax Department) ಐಟಿ ರಿಟರ್ನ್ (ITR) ಸಲ್ಲಿಸಲು ಸುಮಾರು 7 ವಿವಿಧ ನಮೂನೆಗಳನ್ನು ನೀಡಿದೆ. ಈ ನಮೂನೆಗಳಲ್ಲಿ ನೀವು ಯಾವ ನಮೂನೆಯನ್ನು ಎಂದರೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 7 ನಮೂನೆಗಳು:
ಆದಾಯ ತೆರಿಗೆ ಇಲಾಖೆಯು (Income Tax Department) ಏಳು ವಿಧದ ನಮೂನೆಗಳನ್ನು ನೀಡಿದೆ. ಐಟಿ ಇಲಾಖೆ ನೀಡಿರುವ ಈ ಏಳೂ ವಿಧದ ನಮೂನೆಗಳು ವಿಭಿನ್ನ ಮಾನದಂಡಗಳನ್ನು ಹೊಂದಿವೆ. ಈ ಏಳೂ ನಮೂನೆಗಳ ಪಟ್ಟಿಯಲ್ಲಿ ನಿಮಗೆ ಸೂಕ್ತವಾದ ಫಾರ್ಮ್ ಯಾವುದೆಂದು ತಿಳಿಯಲು ಇಲ್ಲಿದೆ ಮಾಹಿತಿ...
ಐಟಿಆರ್ ಫಾರ್ಮ್ 1:
ವಾರ್ಷಿಕ ಆದಾಯ 50 ಲಕ್ಷ ರೂ. ಹೆಚ್ಚಿನ ಸಂಬಳ ಪಡೆಯುವ ಭಾರತೀಯ ನಾಗರೀಕರು ಈ ಐಟಿಆರ್ ಫಾರ್ಮ್-1ರ ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. 50 ಲಕ್ಷದವರೆಗಿನ ಆದಾಯವು ಸಂಬಳ, ಪಿಂಚಣಿ, ಒಂದು ಮನೆಯ ಆಸ್ತಿಯಿಂದ ಆದಾಯ ಮತ್ತು ಇತರ ಮೂಲಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಪಟ್ಟಿ ಮಾಡದ ಕಂಪನಿಯಲ್ಲಿ ಹೂಡಿಕೆ ಮಾಡಿದ, ಬಂಡವಾಳ ಲಾಭದಿಂದ ಗಳಿಸಿದ ಮತ್ತು ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯಿಂದ ಆದಾಯವನ್ನು ಹೊಂದಿರುವ ಅಥವಾ ವ್ಯವಹಾರದಿಂದ ಗಳಿಸಿದ ಕಂಪನಿಯ ನಿರ್ದೇಶಕರು ಈ ಫಾರ್ಮ್ ಅನ್ನು ಬಳಸಲಾಗುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಿ.
ಇದನ್ನೂ ಓದಿ- NHAI Rules: ಈ ಎರಡು ಸಂದರ್ಭದಲ್ಲಿ ಶುಲ್ಕ ಪಾವತಿಸದೆ ಟೋಲ್ ಬೂತ್ ಹಾದು ಹೋಗಬಹುದು
ಐಟಿಆರ್ ಫಾರ್ಮ್-2:
ವ್ಯಾಪಾರ ಅಥವಾ ವೃತ್ತಿಯಿಂದ ಬರುವ ಆದಾಯವನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚು ಮನೆ ಆಸ್ತಿ, ಬಂಡವಾಳ ಲಾಭ ಮತ್ತು ಇತರ ಮೂಲಗಳಿಂದ ಆದಾಯ ಹೊಂದಿರುವ ವ್ಯಕ್ತಿಗಳು ಮತ್ತು ಎನ್‌ಆರ್‌ಐಗಳು ಐಟಿಆರ್ ಫಾರ್ಮ್ 2ರ ಅಧಿಯಲ್ಲಿ ಐಟಿಆರ್ ಸಲ್ಲಿಸಬಹುದು. ರೂ. 10 ಲಕ್ಷಕ್ಕಿಂತ ಹೆಚ್ಚಿನ ಲಾಭಾಂಶ ಆದಾಯ ಮತ್ತು ರೂ 5000 ಕ್ಕಿಂತ ಹೆಚ್ಚಿನ ಕೃಷಿ ಆದಾಯವನ್ನು ಒಳಗೊಂಡಿದೆ. ಪಿಎಫ್ ನಲ್ಲಿ ಬಡ್ಡಿಯನ್ನು ಗಳಿಸುವವರು ಸಹ ಈ ನಮೂನೆಯಲ್ಲಿ ಐಟಿಆರ್ ಭರ್ತಿ ಮಾಡಬೇಕಾಗುತ್ತದೆ.
ಐಟಿಆರ್ ಫಾರ್ಮ್-3:
ವ್ಯಾಪಾರಸ್ಥರು, ಪಟ್ಟಿಮಾಡದ ಈಕ್ವಿಟಿ ಷೇರುಗಳಲ್ಲಿನ ಹೂಡಿಕೆದಾರರು ಅಥವಾ ಸಂಸ್ಥೆಯಲ್ಲಿ ಪಾಲುದಾರರಾಗಿ ಗಳಿಸುವವರು ಐಟಿಆರ್ ಫಾರ್ಮ್ 3ಅನ್ನು ಸಲ್ಲಿಸಬೇಕು. ಇದರ ಹೊರತಾಗಿ ಬಡ್ಡಿ, ಸಂಬಳ, ಬೋನಸ್, ಬಂಡವಾಳ ಲಾಭ, ಕುದುರೆ ರೇಸಿಂಗ್, ಲಾಟರಿ ಅಥವಾ ಬಹು ಆಸ್ತಿಯಿಂದ ಬಾಡಿಗೆಯಿಂದ ಆದಾಯವನ್ನು ಹೊಂದಿರುವವರು ಸೇರಿದಂತೆ ಈ ನಮೂನೆಯನ್ನು ಬಳಸಿ ಇತರ ಮೂಲಗಳಿಂದ ಆದಾಯವನ್ನು ವರದಿ ಮಾಡಬಹುದು.
ಐಟಿಆರ್ ಫಾರ್ಮ್-4:
ವೃತ್ತಿಯಿಂದ ಆದಾಯಕ್ಕೆ 50 ಲಕ್ಷ ರೂ.ವರೆಗಿನ ವಹಿವಾಟು ಮತ್ತು ಸೆಕ್ಷನ್ 44ಎಡಿಎ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಅಧಿಸೂಚಿತ ವೃತ್ತಿಯನ್ನು ನಿರ್ವಹಿಸುತ್ತಿರುವ ಸ್ವತಂತ್ರ ಉದ್ಯೋಗಿ ಐಟಿಆರ್-4 ಅನ್ನು ಸಲ್ಲಿಸಬಹುದು. ವಾರ್ಷಿಕವಾಗಿ 50 ಲಕ್ಷ ರೂ.ಗಳಿಗಿಂತ ಹೆಚ್ಚು ಹಾಗೂ 2 ಕೋಟಿ ರೂ.ವರೆಗಿನ ಆದಾಯ ಹೊಂದಿರುವ ವ್ಯಾಪಾರಸ್ಥರು, ವೈದ್ಯರು, ವಕೀಲರು ಅಥವಾ ಯಾವುದೇ ಸ್ವತಂತ್ರೋದ್ಯೋಗಿಗಳು ಈ ಫಾರ್ಮ್ ಅನ್ನು ಬಳಸಬೇಕು.
ಇದನ್ನೂ ಓದಿ- credit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯ
ಐಟಿಆರ್ ಫಾರ್ಮ್-5:
ಪಾಲುದಾರಿಕೆ ಸಂಸ್ಥೆಗಳು ಎಲ್‌ಎಲ್‌ಪಿ (LLP), ಎಒಪಿ (AOP)ಮತ್ತು ಬಿಒಐ( BOI) ಯಂತಹ ವ್ಯಾಪಾರ ಘಟಕಗಳು ವ್ಯಾಪಾರ ಮತ್ತು ವೃತ್ತಿಯಿಂದ ಆದಾಯ ಮತ್ತು ಯಾವುದೇ ಇತರ ಆದಾಯದ ಮೂಲವನ್ನು ವರದಿ ಮಾಡಲು ITR-5 ಅನ್ನು ಸಲ್ಲಿಸಬಹುದು.
ಐಟಿಆರ್ ಫಾರ್ಮ್-6:
ಐಟಿಆರ್ ಫಾರ್ಮ್ 6 ಎಂಬುದು ಕಂಪನಿಗಳು ವ್ಯಾಪಾರ ಅಥವಾ ವೃತ್ತಿಯಿಂದ ಮತ್ತು ಯಾವುದೇ ಇತರ ಆದಾಯದ ಮೂಲಗಳಿಂದ ಗಳಿಸಿದ ಆದಾಯವನ್ನು ಸಲ್ಲಿಸಲು ಆದಾಯ ತೆರಿಗೆ ರಿಟರ್ನ್ ಆಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 11 ರ ಅಡಿಯಲ್ಲಿ ಕಂಪನಿಗಳಿಗೆ ವಿನಾಯಿತಿ ಇಲ್ಲ.
ಐಟಿಆರ್ ಫಾರ್ಮ್-7:
ಕಂಪನಿಗಳು ಮತ್ತು ವ್ಯಕ್ತಿಗಳಿಗೆ 139(4A), 139(4B), 139(4C), ಅಥವಾ 139(4D) ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸಲು ಅಗತ್ಯವಿದೆ. ಐಟಿಆರ್ ಫಾರ್ಮ್ 7 ಎಂಬುದು ಆದಾಯ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡುವ ಕಂಪನಿಗಳು, ಸಂಘಗಳು ಮತ್ತು ಟ್ರಸ್ಟ್‌ಗಳಿಗೆ ಆದಾಯ ತೆರಿಗೆ ರಿಟರ್ನ್ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.