RBI Monetary Policy Meeting : ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಭೆ (RBI Monetary Policy Meeting) ಇಂದಿನಿಂದ ಆರಂಭವಾಗಲಿದೆ. 2024-25ರ ಹಣಕಾಸು ವರ್ಷದ ಮೊದಲ ಸಭೆ ಇದಾಗಿದೆ. ಈ ಸಭೆ ಇಂದಿನಿಂದ ಏಪ್ರಿಲ್ 3ರಿಂದ ಆರಂಭವಾಗಲಿದ್ದು, ಏಪ್ರಿಲ್ 5ರವರೆಗೆ ನಡೆಯಲಿದೆ. ಈ ಸಭೆಯ ನಿರ್ಧಾರಗಳನ್ನು ಏಪ್ರಿಲ್ 5 ರಂದು ಪ್ರಕಟಿಸಲಾಗುವುದು.ಈ ಸಭೆಯ ನಂತರ ಆರ್ ಬಿಐ ತೆಗೆದು ಕೊಳ್ಳುವ ನಿರ್ಧಾರ ಕುತೂಹಲ ಮೂಡಿಸಿದೆ. RBI ನಿರ್ಧಾರದಿಂದ ಈ ಬಾರಿ ನಿಮ್ಮ EMI ಕಡಿಮೆಯಾಗಲಿದೆಯೇ? ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. 


COMMERCIAL BREAK
SCROLL TO CONTINUE READING

ರೆಪೊ ದರಗಳನ್ನು ಸತತ 6 ಬಾರಿ ಸ್ಥಿರವಾಗಿ ಇರಿಸಲಾಗಿದೆ. ಈ ಬಾರಿಯೂ ರೆಪೊ ದರಗಳಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿಲ್ಲ ಎಂದು ಹೇಳಲಾಗಿದೆ. ಈ ಬಾರಿಯೂ ರೆಪೋ ದರಗಳು ಸ್ಥಿರವಾಗಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ.  


ಇದನ್ನೂ ಓದಿ : ಹಿರಿಯ ನಾಗರಿಕರ ಟಿಕೆಟ್ ವಿನಾಯಿತಿ ರದ್ದು; 5,800 ಕೋಟಿ ಗಳಿಸಿದ ರೈಲ್ವೆ ಇಲಾಖೆ!


SBI ತಜ್ಞರ ಅಭಿಪ್ರಾಯವೇನು? :
2025ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆರ್‌ಬಿಐ ರೆಪೊ ದರಗಳನ್ನು ಕಡಿತಗೊಳಿಸಬಹುದು ಎನ್ನುವುದು ಎಸ್‌ಬಿಐ ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಸಂಶೋಧನಾ ವರದಿಯ ಪ್ರಕಾರ, ಆರ್‌ಬಿಐ ತನ್ನ ನಿಲುವನ್ನು ಸದ್ಯಕ್ಕೆ ಬದಲಾಯಿಸುವುದಿಲ್ಲ ಎಂದು ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯ ಕಾಂತಿ ಘೋಷ್ ಹೇಳಿದ್ದಾರೆ. ಆರ್‌ಬಿಐ ಬ್ಯಾಂಕ್‌ಗಳು ರೆಪೋ ದರದ ಮೇಲೆಯೇ ಸಾಲ ನೀಡಬೇಕಾಗುತ್ತದೆ. 


ರೆಪೋ ದರ ಎಂದರೇನು? : 
ರೆಪೋ ದರವು ಭಾರತದ ಸೆಂಟ್ರಲ್ ಬ್ಯಾಂಕ್ ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ. ಇದರ ಆಧಾರದ ಮೇಲೆ, ಸಾಲ ಪಡೆಯುವವರ EMIಯನ್ನು ನಿರ್ಧರಿಸಲಾಗುತ್ತದೆ.ರೆಪೊ ದರಗಳು ಹೆಚ್ಚಾದಾಗ ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಕೂಡಾ ಹೆಚ್ಚಿಸುತ್ತವೆ.  ರೆಪೊ ದರಗಳು ಕಡಿಮೆಯಾದಾಗ, ಬ್ಯಾಂಕುಗಳು ಸಾಲದ ಬಡ್ಡಿದರಗಳನ್ನು ಕೂಡಾ ಕಡಿಮೆ ಮಾಡುತ್ತವೆ. 


ಇದನ್ನೂ ಓದಿ : Gold And Silver Price: ಭಾರತದಲ್ಲಿ ಗಗನಕ್ಕೇರಿದ ಚಿನ್ನ ಹಾಗೂ ಬೆಳ್ಳಿಯ ದರ: ಇಂದಿನ ಬೆಲೆ ಪರಿಶೀಲಿಸಿ!!


ರೆಪೊ ದರ ಏಕೆ ಬದಲಾಗುತ್ತದೆ? :
ಹಣದುಬ್ಬರವನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುತ್ತದೆ ಅಥವಾ ಕಡಿತ ಮಾಡುತ್ತದೆ. 


ಈ ಹಣಕಾಸು ವರ್ಷದಲ್ಲಿ ಹಣಕಾಸು ನೀತಿ ಸಭೆ ಯಾವಾಗ ನಡೆಯಲಿದೆ? :
>> ಏಪ್ರಿಲ್ 3-5, 2024
>> ಜೂನ್ 5-7, 2024
>> ಆಗಸ್ಟ್ 6-8, 2024
>> ಅಕ್ಟೋಬರ್ 7-9, 2024
>> ಡಿಸೆಂಬರ್ 4-6, 2024
>> ಫೆಬ್ರವರಿ 5-7, 2025


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.