Gold Price in Budget 2025 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1 ಫೆಬ್ರವರಿ 2025 ರಂದು ದೇಶದ ಸಾಮಾನ್ಯ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್. ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಎಂಟನೇ ಬಜೆಟ್. ಕಳೆದ ವರ್ಷ ಜುಲೈನಲ್ಲಿ ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ ಹಣಕಾಸು ಸಚಿವರು ಚಿನ್ನದ ಆಮದು ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವ ದೊಡ್ಡ ಘೋಷಣೆ ಮಾಡಿದ್ದರು. ಆ ಸಮಯದಲ್ಲಿ, ಚಿನ್ನದ ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ಪರಿಹಾರ ನೀಡಲು ಹಣಕಾಸು ಸಚಿವರು ಕಸ್ಟಮ್ ಸುಂಕವನ್ನು 15 ರಿಂದ 6 ಪ್ರತಿಶತಕ್ಕೆ ಇಳಿಸಿದ್ದರು.


COMMERCIAL BREAK
SCROLL TO CONTINUE READING

ಬೇಡಿಕೆಯು ಪ್ರತಿದಿನ 20 ಪ್ರತಿಶತದಷ್ಟು ಹೆಚ್ಚುತ್ತಿದೆ :
ಬೆಲೆ ಕುಸಿತದಿಂದ ಚಿನ್ನದ ಬೇಡಿಕೆ ಏಕಾಏಕಿ ಹೆಚ್ಚಾಯಿತು. ಜುಲೈ 23, 2024 ರಂದು ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದ ನಂತರ, ಜನರು ಚಿನ್ನವನ್ನು ಖರೀದಿಸಲು ಮುಗಿ ಬಿದ್ದರು ಎಂದರೆ ತಪ್ಪಲ್ಲ. ಮದುವೆ ಸೀಸನ್ ಸಮೀಪಿಸುತ್ತಿದ್ದಂತೆ ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚಿತ್ತು. ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಮೊದಲು, ಚಿನ್ನದ ದರವು ದಾಖಲೆಯ ಮಟ್ಟಕ್ಕೆ 10 ಗ್ರಾಂಗೆ 74,000 ರೂ. ತಲುಪಿತ್ತು. ಆ ಸಮಯದಲ್ಲಿ, ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಚಿನ್ನದ ದೈನಂದಿನ ಬೇಡಿಕೆಯು 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಆಭರಣಕಾರರು ಹೇಳಿದ್ದರು.


ಇದನ್ನೂ ಓದಿ : ಬಜೆಟ್ ಮಂಡನೆಯಲ್ಲಿ ಪಂಚ ದಾಖಲೆಗಳನ್ನು ಸೃಷ್ಟಿಸಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!


ಚಿನ್ನದ ಬೆಲೆಯಲ್ಲಿ 5000 ರೂಪಾಯಿಯಷ್ಟು ಕುಸಿತ :
ಆಭರಣಗಳಿಗೆ ಇದ್ದಕ್ಕಿದ್ದಂತೆ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಆಭರಣಕಾರರು ಕುಶಲಕರ್ಮಿಗಳ ರಜೆಯನ್ನು ರದ್ದುಗೊಳಿಸಿದರು. ಬಜೆಟ್‌ನಲ್ಲಿ (ಜುಲೈ 23) ಕಸ್ಟಮ್ ಸುಂಕ ಕಡಿತದ ಘೋಷಣೆಯ ನಂತರ, ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 72,609 ರೂ.ನಿಂದ 69,194 ರೂ.ಗೆ ಕುಸಿಯಿತು. ಒಂದೇ ದಿನದಲ್ಲಿ ಚಿನ್ನದ ದರ ಸುಮಾರು 3,500 ರೂ.ಯಷ್ಟು ಇಳಿದಿತ್ತು. ಅಂದರೆ ಜುಲೈ 24, 2024 ರಂದು ಪ್ರತಿ 10 ಗ್ರಾಂ ಚಿನ್ನದ ದರ 69,194 ರೂ.ಆಗಿತ್ತು. ಅಷ್ಟೇ ಅಲ್ಲ, ಜುಲೈ 26 ರಂದು ಪ್ರತಿ ಗ್ರಾಂಗೆ 6,741 ರೂ. ಇಳಿದು 10 ಗ್ರಾಂಗೆ 67,410 ರೂ.ಆಗಿತ್ತು.ಈ ಮೂಲಕ ಒಂದು ವಾರದಲ್ಲಿ ಚಿನ್ನದ ಬೆಲೆ 5000 ರೂ.ಗೂ ಹೆಚ್ಚು ಕುಸಿದಿತ್ತು.


ಈ ಬಾರಿ ಆಭರಣ ವ್ಯಾಪಾರಿಗಳ ನಿರೀಕ್ಷೆ ಏನು ? :
ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಪರಿಹಾರ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಭರಣ ವ್ಯಾಪಾರಿಗಳು ಮತ್ತು ಬುಲಿಯನ್ ಡೀಲರ್‌ಗಳು ಒತ್ತಾಯಿಸಿದ್ದಾರೆ. ಚಿನ್ನದ ದರ 83000 ರೂ.ಗೆ ಏರಿಕೆಯಾಗಿದೆ. ಫೆಬ್ರವರಿ 1 ರಂಯಮ ವರ್ಗದವರಿಗೆ ಇಎಂಐ ಮೂಲಕ ಆಭರಣ ಖರೀದಿಸಲು ನೆರವಾಗುವ ವ್ಯವಸ್ಥೆಯನ್ನು ಹಣಕಾಸು ಸಚಿವರು ಸಿದ್ಧಪಡಿಸಬೇಕು ಎಂದು ಬುಲಿಯನ್ ಡೀಲರ್ ಗಳು ಆಗ್ರಹಿಸಿದ್ದಾರೆ.


ಇದನ್ನೂ ಓದಿ : 8ನೇ ವೇತನ ಆಯೋಗ: ಸರ್ಕಾರೀ ನೌಕರರ ವೇತನದಲ್ಲಿ ಭಾರೀ ಹೆಚ್ಚಳ


ಆಮದು ಶುಲ್ಕವನ್ನು ಮತ್ತಷ್ಟು ಕಡಿತಗೊಳಿಸಲು ಆಗ್ರಹ :
ಕುಶಲಕರ್ಮಿಗಳ ಕೌಶಲ್ಯಾಭಿವೃದ್ಧಿಗೆ ಹಣ ಮೀಸಲಿಡಬೇಕು ಮತ್ತು ಚಿನ್ನದ ಮಾರುಕಟ್ಟೆಗೆ ಒಂದೇ ನಿಯಂತ್ರಕವನ್ನು ಗುರುತಿಸಬೇಕು. ವಾಸ್ತವವಾಗಿ, ಇದು SEBI, RBI, DGFT, ಹಣಕಾಸು ಸಚಿವಾಲಯ ಮತ್ತು ಹಣಕಾಸು ಸಚಿವಾಲಯದಂತಹ ಅನೇಕ ಸಂಸ್ಥೆಗಳಿಂದ ನಿಯಂತ್ರಿಸಲ್ಪಡುತ್ತದೆ. ಕಚ್ಚಾ ಅಥವಾ ಅಶುದ್ಧ ಚಿನ್ನದ ಆಮದು ಮೇಲಿನ ಆಮದು ಶುಲ್ಕವನ್ನು ಇನ್ನಷ್ಟು ಕಡಿಮೆ ಮಾಡುವ ಮೂಲಕ ಲಾಭವನ್ನು ಹೆಚ್ಚಿಸಬೇಕು ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​​​(ಐಬಿಜೆಎ) ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಆಗ್ರಹಿಸಿದ್ದಾರೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.