Petrol-Diesel  ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ದೊಡ್ಡ ಯೋಜನೆ ರೂಪಿಸುತ್ತಿದೆ. ಈ ಕುರಿತು ಕೇಂದ್ರ ವಿತ್ತ ಸಚಿವೆ ಪೆಟ್ರೋಲ್-ಡಿಸೇಲ್  ಬೆಲೆ ಇಳಿಕೆ ಮಾಡಿ ಜನ ಸಾಮಾನ್ಯರಿಗೆ ಪರಿಹಾರ ನೀಡುವ ಕುರಿತು  ಅಗತ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ನಿರ್ಧಾರ ಕೈಗೊಂಡರೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪತ್ರಿಕಾಗೋಷ್ಠಿಯಲ್ಲಿ ಹಲವು ವಿಷಯಗಳ ಚರ್ಚೆ 
ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಹಣಕಾಸು ಸಚಿವರು ಜೈಪುರಕ್ಕೆ ಆಗಮಿಸಿದ್ದರು, ಅಲ್ಲಿ ಅವರು ಪೆಟ್ರೋಲ್-ಡೀಸೆಲ್ ಬೆಲೆಗಳು, ಹಣದುಬ್ಬರ, ಏರುತ್ತಿರುವ ರೆಪೋ ದರಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿವರವಾಗಿ ಉತ್ತರ ನೀಡಿದ್ದಾರೆ.


ಇದನ್ನೂ ಓದಿ-Double Ration: ಹೋಳಿ ಹಬ್ಬಕ್ಕೂ ಮುನ್ನ ಪಡಿತರ ಚೀಟಿಧಾರಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಸರ್ಕಾರ!

ತಮ್ಮ ನಿರ್ಧಾರ ತಿಳಿಸಿದ ಸೀತಾರಾಮನ್
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದು. ಇದನ್ನು ಜಿಎಸ್ ಟಿ ಅಡಿಯಲ್ಲಿ ಒಂದು ಸರಕನ್ನಾಗಿ ನಮ್ಮ ಸರ್ಕಾರ ಪ್ರಸ್ತಾಪಿಸಲಿದೆ ಎಂದು ಸರ್ಕಾರದ ಉದ್ದೇಶವನ್ನು ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಜಿಎಸ್‌ಟಿ ಕೌನ್ಸಿಲ್ ಈ ನಿರ್ಧಾರ ಕೈಗೊಳ್ಳಬೇಕು ಮತ್ತು ಇದಕ್ಕೆ ಸಂಬಂಧಿಸಿದಂತೆ ಮುಕ್ತ ಚರ್ಚೆಗಳು ನಡೆಯಬೇಕು ಎಂದು ಸೀತಾರಾಮನ್ ಹೇಳಿದ್ದಾರೆ.


ಇದನ್ನೂ ಓದಿ-Alert! ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ನಕಲಿ ಆಲೂಗಡ್ಡೆ! ವಂಚನೆಗೆ ಗುರಿಯಾಗುವ ಮೊದಲು ಈ ಸುದ್ದಿ ಓದಿ


ವಿಪಕ್ಷಗಳ ಆರೋಪಕ್ಕೆ ವಿತ್ತ ಸಚಿವರು ಹೇಳಿದ್ದೇನು?
ಕಾಂಗ್ರೆಸ್‌ನ ಸೇಡಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ,  ಇಡಿ, ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳು ಸ್ವಲ್ಪ ಸಮಯದವರೆಗೆ ದೊಡ್ಡ ಹೋಮ್ ವರ್ಕ್ ಮಾಡುತ್ತವೆ ಮತ್ತು ಅವುಗಳ ಕೈಯಲ್ಲಿ ಅಗತ್ಯವಾದ ಪ್ರಾಥಮಿಕ ಸಾಮಗ್ರಿಗಳು ದೊರೆತಾಗ, ಅವುಗಳು ಹಲವಾರು ಪ್ರಶ್ನಾವಳಿಗಳನ್ನು ಕಳುಹಿಸಲು ಪ್ರಾರಂಭಿಸುತ್ತಾರೆ ಮತ್ತು ಪ್ರಶ್ನೆಗಳಿಗೆ ಯಾವುದೇ ಉತ್ತರಗಳು ಸಿಗದ ಸಂದರ್ಭದಲ್ಲಿ ಅಥವಾ ಭಾಗಶಃ ಉತ್ತರಗಳು ದೊರೆತರೆ, ಅವು ಕ್ರಮಕ್ಕೆ ಮುಂದಾಗುತ್ತವೆ. ಇದರಲ್ಲಿ ಯಾವುದು ಕೂಡ ರಾತ್ರೋರಾತ್ರಿ ಮಾಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಇನ್ಮುಂದೆ ನೌಕರಿ ಕಳೆದುಕೊಂಡರೆ ನೀವು ಚಿಂತಿಸಬೇಕಾಗಿಲ್ಲ, ಆದಷ್ಟು ಬೇಗ ಈ ಪಾಲಸಿ ನಿಮ್ಮ ಬಳಿ ಇರಲಿ!


"ಒಂದು ಪಕ್ಷದ ಹಿಂದಿನ ಅಧ್ಯಕ್ಷರು, ಆರ್ಥಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಥವಾ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆ, ಎಲ್ಲಾ ನ್ಯಾಯಾಲಯಗಳಿಂದ ಜಾಮೀನು ಪಡೆದು ಹೊರಗಿರಬೇಕಾದರೆ,  ಅವರು ಸೇಡಿನ ರಾಜಕೀಯದ ಬಗ್ಗೆ ಮಾತನಾಡುವುದು ವಿಚಿತ್ರವಾಗಿದೆ." ಎಂದು ಸೀತಾರಾಮನ್ ಹೇಳಿದ್ದಾರೆ.  ಅಲ್ಲಿಗೆ ಹೋದ ಪ್ರತಿ ಏಜೆನ್ಸಿಯ ಜನರು ನಿಶ್ಚಿತ ಸಾಕ್ಷಗಳೊಂದಿಗೆ ಮರಳುತ್ತಿದ್ದಾರೆ. ಕೆಲವನ್ನು ಮಾಧ್ಯಮಗಳು ಕೂಡ ಬಿಂಬಿಸಿವೆ. ಜನರನ್ನು ಸೇಡಿನ ಆರೋಪ ಮಾಡುವ ಬದಲು, ತನ್ನ ಜನರು ನ್ಯಾಯಾಲಯದಿಂದ ಜಾಮೀನಿನ ಮೇಲೆ ಏಕೆ ಹೊರಗಿದ್ದಾರೆ ಎಂಬುದನ್ನು ಜನರಿಗೆ ವಿವರಣೆ ನೀಡಬೇಕು. ‘ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.