ಬ್ಯಾಂಕ್ ಸಾಲ ಪಡೆದವರಿಗೆ ಆರ್ ಬಿಐ ನೀಡಲಿದೆ ಪರಿಹಾರ ! ಮುಂದಿನ ತಿಂಗಳ ಆರಂಭದಲ್ಲಿಯೇ ಘೋಷಣೆ ಮಾಡಲಿದೆ ನೀತಿ
Inflation Rates in India:ಆರ್‌ಬಿಐ ಗವರ್ನರ್ ನೇತೃತ್ವದಲ್ಲಿ ಆರು ಸದಸ್ಯರ ಎಂಪಿಸಿಯ ಸಭೆಯನ್ನು ಅಕ್ಟೋಬರ್ 4-6 ರಂದು ನಡೆಯಲಿದೆ ಎನ್ನಲಾಗಿದೆ. ಎಂಪಿಸಿಯ ಕೊನೆಯ ಸಭೆ ಆಗಸ್ಟ್‌ನಲ್ಲಿ ನಡೆದಿತ್ತು.
Inflation Rates in India : ದೇಶದಾದ್ಯಂತ ಹಣದುಬ್ಬರ ದರಗಳು ಹೆಚ್ಚಾಗುತ್ತಿವೆ. ಚಿಲ್ಲರೆ ಹಣದುಬ್ಬರವು ಇನ್ನೂ ಹೆಚ್ಚಿನ ಮಟ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಇನ್ನೂ ಸ್ವಲ್ಪ ಸಮಯದವರೆಗೆ ಕಟ್ಟುನಿಟ್ಟಾದ ನಿಲುವನ್ನು ನಿರ್ವಹಿಸಲು ನಿರ್ಧರಿಸಿದೆ. ಈ ನಡುವೆ, ಮುಂದಿನ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ (Reserve Bank of India) ಇಂಡಿಯಾದ ವಿತ್ತೀಯ ಪರಿಶೀಲನಾ ಸಭೆ ನಡೆಯಲಿದೆ. ಇದೀಗ ಮತ್ತೊಮ್ಮೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧಾರ ಕೈಗೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿ 8ರಂದು ರೆಪೋ ದರಗಳನ್ನು ಹೆಚ್ಚಿಸಲಾಗಿತ್ತು :
ರಿಸರ್ವ್ ಬ್ಯಾಂಕ್ ಫೆಬ್ರವರಿ 8, 2023 ರಂದು ರೆಪೋ ದರವನ್ನು ಶೇಕಡಾ 6.5 ಕ್ಕೆ ಹೆಚ್ಚಿಸಿದೆ. ಅಂದಿನಿಂದ ಇದು ಅತ್ಯಂತ ಹೆಚ್ಚಿನ ಚಿಲ್ಲರೆ ಹಣದುಬ್ಬರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಕಚ್ಚಾ ತೈಲ ಬೆಲೆಗಳು ಸೇರಿದಂತೆ ಕೆಲವು ಜಾಗತಿಕ ಅಂಶಗಳ ದೃಷ್ಟಿಯಿಂದ ದರಗಳನ್ನು ಅದೇ ಮಟ್ಟದಲ್ಲಿ ಉಳಿಸಿಕೊಂಡಿದೆ.
ಇದನ್ನೂ ಓದಿ : ಭರ್ಜರಿ ಇಳಿಕೆ ಕಂಡ ಬಂಗಾರದ ಬೆಲೆ! ನಿರಂತರ ಕುಸಿತದ ಬಳಿಕ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ರೇಟ್
ಅಕ್ಟೋಬರ್ 4 ರಿಂದ 6 ರವರೆಗೆ ನಡೆಯಲಿದೆ ಸಭೆ :
ಆರ್‌ಬಿಐ ಗವರ್ನರ್ ನೇತೃತ್ವದಲ್ಲಿ ಆರು ಸದಸ್ಯರ ಎಂಪಿಸಿಯ ಸಭೆಯನ್ನು ಅಕ್ಟೋಬರ್ 4-6 ರಂದು ನಡೆಯಲಿದೆ ಎನ್ನಲಾಗಿದೆ. ಎಂಪಿಸಿಯ ಕೊನೆಯ ಸಭೆ ಆಗಸ್ಟ್‌ನಲ್ಲಿ ನಡೆದಿತ್ತು.
ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ :
ಹಣದುಬ್ಬರ ಇನ್ನೂ ಹೆಚ್ಚಿರುವುದರಿಂದ ಮತ್ತು ನಗದು ಪರಿಸ್ಥಿತಿ ಬಿಗಿಯಾಗಿರುವುದರಿಂದ ಆರ್‌ಬಿಐ ಈ ಬಾರಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದೇ ಹೇಳಲಾಗುತ್ತಿದೆ. ಹಣದುಬ್ಬರದ ಮೇಲಿನ ಆರ್‌ಬಿಐನ ನೀತಿಯನ್ನು ಸರಿಯಾಗಿ ಪರಿಗಣಿಸಿದರೆ, ಅದು ಮೂರನೇ ತ್ರೈಮಾಸಿಕದಲ್ಲಿ ಐದು ಶೇಕಡಾಕ್ಕಿಂತ ಹೆಚ್ಚಾಗಿರಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕ್ಯಾಲೆಂಡರ್ ವರ್ಷ 2023 ರಲ್ಲಿ ಮತ್ತು ಪ್ರಾಯಶಃ ನಾಲ್ಕನೇ ತ್ರೈಮಾಸಿಕದಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇದನ್ನೂ ಓದಿ : ವ್ಯವಸ್ಥಿತ ಹೂಡಿಕೆಯ ಯೋಜನೆಗಳಲ್ಲಿ ಎಷ್ಟು ವಿಧಗಳಿವೆ ನಿಮಗೆ ಗೊತ್ತಾ !
ಗ್ರಾಹಕರಿಗೆ ಸಿಗಲಿದೆ ಸಿಹಿ ಸುದ್ದಿ :
ರೆಪೋ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗದೆ ಹೋದರೆ ಬ್ಯಾಂಕ್ ಇಎಂಐ ಮೇಲೆ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ. ಒಂದು ವೇಳೆ ರೆಪೋ ದರ ಹೆಚ್ಚಾದರೆ ಗ್ರಾಹಕರು ಬ್ಯಾಂಕ್ ನಿಂದ ಪಡೆದ ಸಾಲದ ಮೇಲಿನ ಬಡ್ಡಿ ಕೂಡಾ ಹೆಚ್ಚಾಗುತ್ತದೆ. ಆಗ ತಿಂಗಳ ಇಎಂಐ ಕೂಡಾ ಹೆಚ್ಚಾಗುತ್ತದೆ. ಆದರೆ, ಈ ಬಾರಿ ರೆಪೋ ದರ ಯಥಾ ಸ್ಥಿತಿಯಲ್ಲಿಯೇ ಇರಲಿದೆ ಎಂದು ಹೇಳಲಾಗುತ್ತದೆ.
ಸರ್ಕಾರದ ಸೂಚನೆ :
ಖಾರಿಫ್ ಬೆಳೆಗಳಿಗೆ, ವಿಶೇಷವಾಗಿ ಬೇಳೆಕಾಳುಗಳಿಗೆ ಸಂಬಂಧಿಸಿದಂತೆ ಅನಿಶ್ಚಿತತೆ ಇದೆ. ಆದಾಗ್ಯೂ, ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಆಗಸಸ್ಟ್ ನಲ್ಲಿ ಕಡಿಮೆಯಾಗಿ 6.83 ಶೇಕಡಾಕ್ಕೆ ಇಳಿದಿದೆ. ಜುಲೈನಲ್ಲಿ ಇದು ಶೇ.7.44ರಷ್ಟಿತ್ತು. ಹಣದುಬ್ಬರವನ್ನು ಶೇಕಡಾ ಎರಡರಷ್ಟು ವ್ಯತ್ಯಾಸದೊಂದಿಗೆ ಶೇಕಡಾ 4 ರಲ್ಲಿ ಇರಿಸಲು ಸರಕಾರವು RBIಗೆ ಜವಾಬ್ದಾರಿಯನ್ನು ನೀಡಿದೆ.
ಇದನ್ನೂ ಓದಿ : Mutual Fund ಬಳಕೆದಾರರು ಮುಂದಿನ 7 ದಿನಗಳಲ್ಲಿ ಈ ಕೆಲಸ ಮಾಡದೆ ಹೋದ್ರೆ...!
ರಿಸರ್ವ್ ಬ್ಯಾಂಕ್ ಹೇಳುವುದೇನು? :
ರಿಸರ್ವ್ ಬ್ಯಾಂಕ್ 2023-24ಕ್ಕೆ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4 ಎಂದು ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.6.2, ಮೂರನೇ ತ್ರೈಮಾಸಿಕದಲ್ಲಿ ಶೇ.5.7 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.2 ಎಂದು ಅಂದಾಜಿಸಲಾಗಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 5.2 ಆಗುವ ನಿರೀಕ್ಷೆಯಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿa