ಇದೀಗ 125 ಸಿಸಿ ಹೊಸ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗಿಳಿದಿದೆ ಹೀರೋ ಕಂಪನಿಯ ಈ ಜನಪ್ರಿಯ ಬೈಕ್!
Hero New Bike Launch: ಹೀರೋ ಕಂಪನಿ ತನ್ನ 125 ಸಿಸಿ ಬೈಕ್ ಸೆಗ್ಮೆಂಟ್ ಗೆ ಮತ್ತೊಂದು ಹೊಸ ಬೈಕ್ ಸೇರ್ಪಡೆ ಮಾಡಿದೆ. ತನ್ನ ಜನಪ್ರಿಯ ಹೀರೋ ಗ್ಲಾಮರ್ ಬೈಕ್ ನ 125 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಕಂಪನಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬನ್ನಿ ಅದರ ಬೆಲೆ, ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ,
ಬೆಂಗಳೂರು: ಹೀರೋ ಮೋಟೋಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಹೊಸ ಗ್ಲಾಮರ್ ವಿನ್ಯಾಸದಲ್ಲಿ ಅಪ್ಡೇಟ್, ಹೊಸ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಎಂಜಿನ್ ಅನ್ನು ಹೊಂದಿದೆ. ಹೊಸ ಗ್ಲಾಮರ್ ಎರಡು ಡಿಸ್ಕ್ ಮತ್ತು ಡ್ರಮ್ ಬ್ರೇಕ್ ರೂಪಾಂತರಗಳಲ್ಲಿ ಬರುತ್ತದೆ. ಹಾಗಾದರೆ ಬನ್ನಿ ಹೀರೋ ಗ್ಲಾಮರ್ ಬೆಲೆ ಮತ್ತು ಎಂಜಿನ್ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ.
ಹೀರೋ ಗ್ಲಾಮರ್ ಬೆಲೆ
ಈ ಬೈಕ್ ಬೆಲೆಯ ಕುರಿತು ಹೇಳುವುದಾದರೆ, ಹೀರೋ ಗ್ಲಾಮರ್‌ನ ಡಿಸ್ಕ್ ಬ್ರೇಕ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 86,348 ರೂ. ಇದೇ ವೇಳೆ, ಡ್ರಮ್ ಬ್ರೇಕ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 82,348 ರೂ.ಗಳಾಗಿದೆ. ಬಣ್ಣ ಆಯ್ಕೆಗಳಲ್ಲಿ, ಹೀರೋ ಗ್ಲಾಮರ್ ಕ್ಯಾಂಡಿ ಬ್ಲೇಜಿಂಗ್ ರೆಡ್, ಟೆಕ್ನೋ ಬ್ಲೂ-ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್-ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.
ಹೀರೋ ಗ್ಲಾಮರ್ ಎಂಜಿನ್ ಮತ್ತು ಶಕ್ತಿ
ಹೀರೋ ಗ್ಲಾಮರ್ 125cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, ಇದು 7500 RPM ನಲ್ಲಿ 10.6hp ಮತ್ತು 6000RPM ನಲ್ಲಿ 10.6Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಪ್ರತಿ ಲೀಟರ್ ಗೆ 63 ಕಿ.ಮೀ ಮೈಲೇಜ್ ನೀಡಬಲ್ಲದು ಎಂದು ಹೀರೋ ಹೇಳಿಕೊಂಡಿದೆ. ಈ ಬೈಕ್‌ನಲ್ಲಿ i3S (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ನೀಡಲಾಗಿದೆ.
ಇದನ್ನೂ ಓದಿ-ಕೇವಲ 25 ಸಾವಿರ ರೂ.ಗಳ ಆರಂಭಿಕ ಹೂಡಿಕೆಯಿಂದ ಈ ಉದ್ಯಮ ಆರಂಭಿಸಿ, 70 ಲಕ್ಷಕ್ಕೂ ಅಧಿಕ ಸಂಪಾದಿಸಬಹುದು!
ಸ್ಟೈಲಿಂಗ್ ವಿಷಯದಲ್ಲಿ, ಹೊಸ ಗ್ಲಾಮರ್ ತನ್ನ ಹಳೆ ವಿನ್ಯಾಸವನ್ನೇ ಹೋಲುತ್ತದೆ. ಇದು ಮಸ್ಕುಲಾರ್ ಇಂಧನ ಟ್ಯಾಂಕ್, ಸಿಂಗಲ್ ಪಾಡ್ ರಿಫ್ಲೆಕ್ಟರ್ ಹೆಡ್‌ಲೈಟ್ ಸೆಟಪ್, ಸಿಂಗಲ್ ಪೀಸ್ ಸೀಟ್, ಸಿಂಗಲ್ ಪಿರ್ ಗ್ರಾಬ್ ರೈಲ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಸಸ್ಪೆನ್ಷನ್ ಸೆಟಪ್ ಕುರಿತು ಹೇಳುವುದಾದರೆ, ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಸಸ್ಪೆನ್ಷನ್ ಹೊಂದಿದೆ. ಇದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ಗಳನ್ನು ಹೊಂದಿದೆ.
ಇದನ್ನೂ ಓದಿ-ಸದ್ದಿಲ್ಲದೇ ಮಾರುಕಟ್ಟೆಗೆ ಹೊಚ್ಚ ಹೊಸ ಇ-ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ!
ಸೀಟ್ ಸ್ಥಾನವನ್ನು ಸುಧಾರಿಸಲು ರೈಡ್ ಮತ್ತು ಪಿಲಿಯನ್ ಸೀಟ್ ಎತ್ತರವನ್ನು ಕಡಿಮೆ ಮಾಡಲಾಗಿದೆ ಎಂದು ಹೀರೋ ಹೇಳಿಕೊಂಡಿದೆ. ಈ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ. ಈ ಬೈಕ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದ್ದು, ಇದು ರಿಯಲ್ ಟೈಮ್ ಮೈಲೇಜ್ ಸೂಚಕ, ಸ್ಪೀಡೊಮೀಟರ್, ಟ್ರಿಪ್ ಮೀಟರ್, ಕಡಿಮೆ ಇಂಧನ ಸೂಚಕದಂತಹ ಮಾಹಿತಿಯನ್ನು ಒದಗಿಸುತ್ತದೆ. ಇದಲ್ಲದೆ, ಯುಎಸ್‌ಬಿ ಚಾರ್ಜರ್ ಸಹ ಇದರಲ್ಲಿ ನೀಡಲಾಗಿದೆ, ಇದರಿಂದ ನೀವು ಯಾವಾಗ ಬೇಕಾದರೂ ಫೋನ್ ಅನ್ನು ಚಾರ್ಜ್ ಮಾಡಬಹುದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.