ಬೆಂಗಳೂರು: ನೀವೂ ಕೂಡ ಒಂದು ವೇಳೆ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದು,  ಹೆಚ್ಚಿನ ಹೂಡಿಕೆಯಿಂದಾಗಿ ನೀವು ಹಿಂದೇಟು ಹಾಕುತ್ತಿದ್ದರೆ, ಇದೀಗ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಇಂದು ನಾವು ನಿಮಗಾಗಿ ಒಂದು ಉದ್ಯಮದ ಪರಿಕಲ್ಪನೆಯನ್ನು ಹೇಳುತ್ತಿದ್ದೇವೆ. ಈ ಪರಿಕಲ್ಪನೆಯ ಮೂಲಕ ನೀವು ಕಡಿಮೆ ವೆಚ್ಚದಲ್ಲಿ ಉದ್ಯಮ ಆರಂಭಿಸಿ ಉತ್ತಮ ಲಾಭವನ್ನು ಗಳಿಸಬಹುದು. ಈ ವ್ಯವಹಾರದ ವಿಶೇಷವೆಂದರೆ ಇದನ್ನು ಪ್ರಾರಂಭಿಸಲು ನಿಮಗೆ ಸರ್ಕಾರವೂ ನಿಮಗೆ ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ಹೊಸ ವ್ಯಾಪಾರ ಕಲ್ಪನೆ ಏನು?
ಹೌದು, ನಾವು ಹೇಳುತ್ತಿರುವ ಹೊಸ ವ್ಯವಹಾರ ಕಲ್ಪನೆ ಎಂದರೆ ಬನಾನಾ ಪೇಪರ್ ಅಂದರೆ  ಬಾಳೆಹಣ್ಣಿನಿಂದ ಕಾಗದವನ್ನು ತಯಾರಿಸುವ ಉದ್ಯಮ. ಬಾಳೆಹಣ್ಣಿನ ಕಾಗದ ತಯಾರಿಕಾ ಘಟಕವನ್ನು ಸ್ಥಾಪಿಸುವ ಮೂಲಕ ನೀವು ಬಂಪರ್ ಲಾಘ ಗಳಿಸಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಬಾಳೆ ಕಾಗದ ತಯಾರಿಕಾ ಘಟಕದ ಸ್ಥಾಪನೆ ತಿಳಿದುಕೊಳ್ಳಲು ಥೇಸಿಸ್ ಸಿದ್ಧಪಡಿಸಿದೆ.


ಬಾಳೆಹಣ್ಣಿನ ಕಾಗದದ ವಿಶೇಷತೆ
ಬಾಳೆಹಣ್ಣಿನ ಕಾಗದವು ಬಾಳೆ ಗಿಡದ ತೊಗಟೆ ಅಥವಾ ಬಾಳೆಹಣ್ಣಿನ ಸಿಪ್ಪೆಯ ನಾರುಗಳಿಂದ ತಯಾರಿಸಿದ ಒಂದು ರೀತಿಯ ಕಾಗದವಾಗಿದೆ. ಬಾಳೆಹಣ್ಣಿನ ಕಾಗದವು ಸಾಂಪ್ರದಾಯಿಕ ಕಾಗದಕ್ಕೆ ಹೋಲಿಸಿದರೆ ಕಡಿಮೆ ಸಾಂದ್ರತೆ, ಹೆಚ್ಚಿನ ಶಕ್ತಿ, ಹೆಚ್ಚಿನ ವಿಲೇವಾರಿ, ಹೆಚ್ಚಿನ ಮರುಬಳಕೆ ಮತ್ತು ಹೆಚ್ಚಿನ ಆಕರ್ಷಕ ಶಕ್ತಿಯನ್ನು ಹೊಂದಿದೆ. ಈ ಗುಣಲಕ್ಷಣಗಳು ಸೆಲ್ಯುಲೋಸ್, ಹೆಮಿಸೆಲ್ಯುಲೋಸ್ ಮತ್ತು ಲಿಗ್ನಿನ್ ಅನ್ನು ಒಳಗೊಂಡಿರುವ ಬಾಳೆ ನಾರಿನ ಸೆಲ್ಯುಲಾರ್ ಸಂಯೋಜನೆಯ ಕಾರಣದಿಂದಾಗಿವೆ.


ಎಷ್ಟು ಹೂಡಿಕೆ ಮಾಡಬೇಕು?
ಬಾಳೆ ಕಾಗದ ತಯಾರಿಕಾ ಘಟಕದ ಕುರಿತು ಕೆವಿಐಸಿ ಸಿದ್ಧಪಡಿಸಿರುವ ಯೋಜನಾ ವರದಿ ಪ್ರಕಾರ ಈ ಉದ್ಯಮ ಆರಂಭಿಸಲು ಒಟ್ಟು 16 ಲಕ್ಷ 47 ಸಾವಿರ ರೂ. ವೆಚ್ಚ ಬರುತ್ತದೆ.  ವ್ಯವಹಾರವನ್ನು ಪ್ರಾರಂಭಿಸಲು ನೀವು ನಿಮ್ಮ ಜೇಬಿನಿಂದ ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ. ನಿಮ್ಮ ಜೇಬಿನಿಂದ ಕೇವಲ 1 ಲಕ್ಷದ 65 ಸಾವಿರ ರೂಪಾಯಿ ಖರ್ಚು ಮಾಡಬೇಕು. ಉಳಿದ ಮೊತ್ತವನ್ನು ನೀವು ಫೈನಾನ್ಸ್ ಮಾಡಬಹುದು. ನೀವು ರೂ.11 ಲಕ್ಷದ 93 ಸಾವಿರ ಟರ್ಮ್  ಸಾಲವನ್ನು ಬಡೆಯಬಹುದು ಮತ್ತು ದುಡಿಯುವ ಬಂಡವಾಳಕ್ಕೆ ರೂ.2 ಲಕ್ಷದ 9 ಸಾವಿರದ ಹಣಕಾಸು ನೀಡಲಾಗುತ್ತದೆ.


ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ ಸಾಲವನ್ನು ಪಡೆಯಬಹುದು
ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಿಂದ ಸಾಲವನ್ನು ತೆಗೆದುಕೊಳ್ಳಬಹುದು. ಈ ಯೋಜನೆಯಡಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಪೊರೇಟ್ ಅಲ್ಲದ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು 10 ಲಕ್ಷದವರೆಗೆ ಸಾಲ ಲಭ್ಯವಿದೆ.


ಇದನ್ನೂ ಓದಿ-ಇದೀಗ 125 ಸಿಸಿ ಹೊಸ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗಿಳಿದಿದೆ ಹೀರೋ ಕಂಪನಿಯ ಈ ಜನಪ್ರಿಯ ಬೈಕ್!


ಪರವಾನಗಿ ಮತ್ತು ಅನುಮೋದನೆ
ಈ ವ್ಯವಹಾರವನ್ನು ಪ್ರಾರಂಭಿಸಲು, ಜಿಎಸ್‌ಟಿ ನೋಂದಣಿ, ಎಂಎಸ್‌ಎಂಇ ಉದ್ಯಮ ಆನ್‌ಲೈನ್ ನೋಂದಣಿ, ಬಿಐಎಸ್ ಪ್ರಮಾಣೀಕರಣ, ಮಾಲಿನ್ಯ ಇಲಾಖೆಯಿಂದ ಎನ್‌ಒಸಿ ಅಗತ್ಯವಿದೆ.


ಇದನ್ನೂ ಓದಿ-ಕೇವಲ 25 ಸಾವಿರ ರೂ.ಗಳ ಆರಂಭಿಕ ಹೂಡಿಕೆಯಿಂದ ಈ ಉದ್ಯಮ ಆರಂಭಿಸಿ, 70 ಲಕ್ಷಕ್ಕೂ ಅಧಿಕ ಸಂಪಾದಿಸಬಹುದು!


ಎಷ್ಟು ಲಾಭ
ಈ ವ್ಯವಹಾರದಲ್ಲಿ ನೀವು ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಕೆ ಮಾಡಬಹುದು. ಮೊದಲ ವರ್ಷದಲ್ಲಿ ಸುಮಾರು 5.03 ಲಕ್ಷ ರೂಪಾಯಿ ಲಾಭವಾಗಲಿದೆ. ಎರಡನೇ ವರ್ಷದಲ್ಲಿ 6.01 ಲಕ್ಷ ಮತ್ತು ಮೂರನೇ ವರ್ಷದಲ್ಲಿ 6.86 ಲಕ್ಷ. ಇದಾದ ನಂತರ ಈ ಲಾಭ ವೇಗವಾಗಿ ಹೆಚ್ಚಾಗಲಿದ್ದು, ಐದನೇ ವರ್ಷದಲ್ಲಿ ಸುಮಾರು 8 ಲಕ್ಷ 73 ಸಾವಿರ ರೂಪಾಯಿ ಲಾಭವಾಗಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.